For Quick Alerts
  ALLOW NOTIFICATIONS  
  For Daily Alerts

  ಐಟಂ ಡಾನ್ಸ್ ಆಫರ್ ನಿರಾಕರಿಸಿದ ನಯನತಾರಾ

  By Rajendra
  |

  ಸುದೀರ್ಘ ಸಮಯದ ಬಳಿಕ ನಯನತಾರಾ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ತೆಲುಗು ಹಾಗೂ ತಮಿಳಿನ ದ್ವಿಭಾಷಾ 'ಬಿಲ್ಲಾ 2' ಚಿತ್ರಕ್ಕೆ ಸಹಿ ಹಾಕಿರುವ ನಯನತಾರಾಗೆ ಈ ಚಿತ್ರದಲ್ಲಿ ಪಡ್ಡೆಗಳ ನಿದ್ದೆಗೆಡಿಸುವ ಸಖತ್ ಚಾನ್ಸ್ ಸಿಕ್ಕಿತ್ತು. ಆದರೆ ನಯನತಾರಾ ತಮ್ಮ ಕೈಯಾರೆ ಆ ರೀತಿಯ ಪಾತ್ರವನ್ನು ಒಲ್ಲೆ ಎಂದಿದ್ದಾರೆ.

  ಅಜಿತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಐಟಂ ಹಾಡಿನಲ್ಲಿ ಅಭಿನಯಿಸುವಂತೆ ನಯನತಾರಾಗೆ ಭರ್ಜರಿ ಆಫರ್ ನೀಡಿದ್ದರು ನಿರ್ಮಾಪಕರು. ಆದರೆ ಆ ಆಫರನ್ನು ಒಲ್ಲೆ ಎಂದಿದ್ದಾರೆ ನಯನತಾರಾ. ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ ಎಂದಿದ್ದ ನಯನತಾರಾ ಇದೇ ವರ್ಷ ಜನವರಿಯಲ್ಲಿ ಹಿಂತಿರುಗಿದ್ದರು.

  ಅವರು ಹಿಂತಿರುಗಿದ ಬಳಿಕ ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಲ್ಪ ಗ್ಯಾಪ್‌ನ ಬಳಿಕ ಚಿತ್ರರಂಗಕ್ಕೆ ಬಂದರೂ ನಯನತಾರಾ ಬೇಡಿಕೆ ನಯಾಪೈಸೆಯಷ್ಟು ಕಡಿಮೆಯಾಗಿಲ್ಲ. ತಮಿಳು, ತೆಲುಗಿನಲ್ಲಿ ಚಿತ್ರವೊಂದಕ್ಕೆ ರು.1.25 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

  ಸಂಭಾವನೆ ಇಷ್ಟೆಲ್ಲಾ ಜಾಸ್ತಿ ಆದರೂ ನಯನತಾರಾ ಮನೆಮುಂದೆ ಕಾಲ್‌ಶೀಟ್ ಹಿಡಿದು ಬರುವ ನಿರ್ಮಾಪಕರಿಗೇನು ಬರವಿಲ್ಲವಂತೆ. ಬೇರೆ ತಾರೆಗಳಿಗೆ ಹೋಲಿಸಿದರೆ ನಯನತಾರಾ ಚಿತ್ರಗಳು ಬಾಕ್ಸಾಫೀಸಲ್ಲಿ ಮಿನಿಮಮ್ ಗ್ಯಾರಂಟಿ ಎಂಬುದೇ ಇದಕ್ಕೆ ಕಾರಣ ಎನ್ನುತ್ತವೆ ಮೂಲಗಳು.

  ಸದ್ಯಕ್ಕೆ ತಮಿಳಿನಲ್ಲಿ ಎರಡು, ತೆಲುಗಿನ ರಾಣಾ ದಗ್ಗುಬಾಟಿ ಜೊತೆ ಎರಡು, ನಾಗಾರ್ಜುನ ಹಾಗೂ ಗೋಪಿಚಂದ್ ಜೊತೆ ತಲಾ ಒಂದೊಂದು ಚಿತ್ರಗಳಿಗೆ ಸಹಿಹಾಕಿದ್ದಾರೆ. ಸಂಭಾವನೆಯಲ್ಲಿ ನಾಲ್ಕಾಣೆ ಕಡಿಮೆಯಾದರೂ ಬಿಲ್‌ಕುಲ್ ಒಪ್ಪುತ್ತಿಲ್ಲ.

  ಇತ್ತೀಚೆಗೆ ನಯನತಾರಾ ಸಂಭಾವನೆ ವಿಚಾರವಾಗಿ ಕನ್ನಡ ಚಿತ್ರಕ್ಕೂ ಕೈ ಎತ್ತಿದ್ದರು. ಕಿಚ್ಚ ಸುದೀಪ್‌ ಮುಖ್ಯಭೂಮಿಕೆಯಲ್ಲಿದ್ದ ಶಶಾಂಕ್ ನಿರ್ದೇಶಿಸಲಿರುವ 'ಬಚ್ಚನ್' ಚಿತ್ರಕ್ಕೆ ನಯನತಾರಾ ಇನ್ನೇನು ಬಂದೇ ಬಿಟ್ಟರು ಎನ್ನಲಾಗಿತ್ತು. ಅಷ್ಟರಲ್ಲಿ ಏನಾಯಿತೋ ಏನೋ ನಯನತಾರಾ ಹೇಳದೆ ಕೇಳದೆ ಗಾಯಬ್ ಆದರು.

  ನಯನತಾರಾ ಗಾಯಬ್ ಆಗಲು ತಮಿಳಿನಲ್ಲಿ ಸಿಕ್ಕ ಭರ್ಜರಿ ಆಫರ್‌ಗಳೇ ಕಾರಣ ಎನ್ನಲಾಗಿದೆ. ಅಲ್ಲಿನ ಸಂಭಾವನೆಗೆ ಇಲ್ಲಿನ ನಿರ್ಮಾಪಕರು ತೂಗುವುದಿಲ್ಲ ಎಂಬ ಮಾತುಗಳೂ ಚಾಲ್ತಿಯಲ್ಲಿವೆ. (ಏಜೆನ್ಸೀಸ್)

  English summary
  Actress Nayanthara turn down an offer to sizzle in an item number in the upcoming Ajith-starrer Billa II. Despite her rumoured fee of 1.25 crore per flick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X