For Quick Alerts
  ALLOW NOTIFICATIONS  
  For Daily Alerts

  ನೆನಪಿರಲಿ ಪ್ರೇಮ್ 25ನೇ ಸಿನಿಮಾ ಇದೇ ನೋಡಿ

  |

  ನೆನಪಿರಲಿ ಪ್ರೇಮ್ ತನ್ನ ಸಿನಿ ಪಯಣದ 25 ನೇ ಸಿನಿಮಾದ ಸಂಭ್ರಮದಲ್ಲಿದ್ದಾರೆ. ಪ್ರತಿಯೊಬ್ಬರೂ 25ನೇ ಸಿನಿಮಾ ವಿಷೇಶವಾಗಿ ಇರಬೇಕೆಂದು ಕನಸಿಟ್ಟು ಕೊಂಡಿರುತ್ತಾರೆ. ಅದರಂತೆ, ಪ್ರೇಮ್ ಕೂಡ 25 ನೇ ಸಿನಿಮಾ ವಿಭಿನ್ನವಾಗಿಬೇಕೆಂದು ವಿನೂತನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಹೌದು, ಪ್ರೇಮ್ ಅಭಿನಯದ 25ನೇ ಸಿನಿಮಾಗೆ 'ಪ್ರೇಮಂ ಪೂಜ್ಯಂ' ಎಂದು ಟೈಟಲ್ ಫಿಕ್ಸ್ ಆಗಿದೆ. ಟೈಟಲ್ ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಅಂದ್ಹಾಗೆ ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ರಕ್ಷಿತಾ ಕೆಡಂಬಾಡಿ ಮತ್ತು ಡಾ.ರಾಜ್ ಕುಮಾರ್ ಜಾನಕಿ ರಾಮನ್ ಇಬ್ಬರು ಬಂಡವಾಳ ಹೂಡುತ್ತಿದ್ದಾರೆ.

  ಸುಮಲತಾ ಪರ ಪ್ರಚಾರಕ್ಕೆ ಹೊರಟ ನೆನಪಿರಲಿ ಪ್ರೇಮ್

  'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದ ನಂತರ ಪ್ರೇಮ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿರಲಿಲ್ಲ. ಒಂದು ವರ್ಷದ ಬಳಿಕ ಹೊಸ ಸಿನಿಮಾ 'ಪ್ರೇಮಂ ಪೂಜ್ಯಂ' ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ಮತ್ತಷ್ಟು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

  ಸದ್ಯ ಟೈಟಲ್ ಮತ್ತು ಫಸ್ಟ್ ಲುಕ್ ಮಾತ್ರ ರಿಲೀಸ್ ಮಾಡಿರುವ ಚಿತ್ರತಂಡ ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿಲ್ಲ. ಯುಗಾದಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿರುವ ಪ್ರೇಮ್ ಸದ್ಯದಲ್ಲೆ 'ಪ್ರೇಮಂ ಪೂಜ್ಯಂ' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  English summary
  Nenapirali Prem's 25th movie 'Prema Poojyam' title and first look revealed. This movie is directed by Raghavendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X