For Quick Alerts
  ALLOW NOTIFICATIONS  
  For Daily Alerts

  ಮುದ್ದು ಮುಖದ ಈ ಯುವತಿ ಕನ್ನಡದ ಖ್ಯಾತ ನಟನ ಮಗಳು

  |

  ನಟರ ಮಕ್ಕಳ ಬಗ್ಗೆ ಹೊರ ಜಗತ್ತಿಗೆ ಗೊತ್ತಾಗುವುದೇ ಕಡಿಮೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟನ ಕುಟುಂಬ ಬಹುತೇಕ ಸಾಮಾಜಿಕ ಜೀವನದಿಂದ ವಂಚಿತವಾಗಿಯೇ ಇರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳು ಇವೆ, ಇದಕ್ಕೆ ಅಪವಾದವೂ ಇದೆ.

  Lovely Star Prem, ತನ್ನ ದೇವತೆಯನ್ನ ಪ್ರಪಂಚಕ್ಕೆ ತೋರಿಸಿದ Prem | Filmibeat Kannada

  ಅಂದಹಾಗೆ, ಇಲ್ಲಿ ಚಿತ್ರದಲ್ಲಿ ಕಾಣುತ್ತಿರುವ ಮುದ್ದು ಮುಖದ, ಸುಂದರ ಯುವತಿ ಕನ್ನಡದ ಖ್ಯಾತ ನಾಯಕ ನಟರೊಬ್ಬರ ಮಗಳು.

  ಹೌದು, ಇನ್ನೂ ಯಂಗ್ ಆಗಿಯೇ ಇರುವ, ಈಗಲೂ ಲವರ್ ಬಾಯ್ ಇಮೇಜಿನಲ್ಲಿ ಕಾಣಿಸಿಕೊಳ್ಳುವ ನಟ ನೆನಪಿರಲಿ ಪ್ರೇಮ್ ಅವರ ಮಗಳು ಈಕೆ. ಹೆಸರು ಅಮೃತಾ.

  ಮಗಳೆಂದರೆ ಪ್ರೇಮ್‌ ಗೆ ಬಹು ಪ್ರೀತಿ

  ಮಗಳೆಂದರೆ ಪ್ರೇಮ್‌ ಗೆ ಬಹು ಪ್ರೀತಿ

  ಮಗಳು ಅಮೃತಾ ಬಗ್ಗೆ ತಂದೆ ಪ್ರೇಮ್‌ ಗೆ ಅಪಾರ ಪ್ರೀತಿ. ಮಗಳನ್ನು ದೇವತೆಗೆ ಹೋಲಿಸುತ್ತಾರೆ ನಟ ಪ್ರೇಮ್. ಮಗಳ ಸುಂದರ ಚಿತ್ರಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮಗಳೆಂದರೆ ದೇವತೆಯಂತೆ: ಪ್ರೇಮ್

  ಮಗಳೆಂದರೆ ದೇವತೆಯಂತೆ: ಪ್ರೇಮ್

  'ಮಗಳೆಂದರೆ ತಂದೆಗೆ ದೇವತೆಯಂತೆ, ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲ ತಂದೆಯರಿಗೂ ಸಿಗುವುದಿಲ್ಲ, ಅಭಿನಂದನೆಗಳು ನನ್ನ ಅದೃಷ್ಟದ ದೇವತೆಗೆ' ಎಂದು ಮಗಳ ಬಗ್ಗೆ ಭಾವುಕ ಸಾಲುಗಳನ್ನು ಬರೆದುಕೊಂಡಿರುವ ಪ್ರೇಮ್, ಮಗಳ ಫೋಟೊಶೂಟ್‌ ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಮೆಡಿಕಲ್ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ

  ಮೆಡಿಕಲ್ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ

  ಪ್ರೇಮ್ ಮೊದಲ ಪುತ್ರಿ ಅಮೃತಾ ಇದೇ ವರ್ಷದ ಜನವರಿಯಲ್ಲಿ 18 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯಾಗಿರುವ ಅಮೃತಾ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ.

  ಪ್ರೇಮ್ ಪಾಲಿಗೆ ದೇವತೆ ಮಗಳು ಅಮೃತಾ

  ಪ್ರೇಮ್ ಪಾಲಿಗೆ ದೇವತೆ ಮಗಳು ಅಮೃತಾ

  ಅಮೃತಾ ಎಂದರೆ ಪ್ರೇಮ್‌ ಅತೀವ ಪ್ರೀತಿ, ಮಗಳು ಹುಟ್ಟಿದ ದಿನವೇ ಅವರ ಮೊದಲ ಸಿನಿಮಾ ಸೆಟ್ಟೇರಿತ್ತಂತೆ ಹಾಗಾಗಿ ಆಕೆ ಅದೃಷ್ಟ ದೇವತೆ ಎಂಬುದು ಪ್ರೇಮ್ ನಂಬಿಕೆ. ಅಮೃತಾ ಬಿಟ್ಟು ಒಬ್ಬ ಮಗನೂ ಪ್ರೇಮ್ ಹಾಗೂ ಜ್ಯೋತಿ ದಂಪತಿಗೆ ಇದ್ದಾನೆ.

  English summary
  Nenapirali Prem's daughter Amrutha studying Medical electronics. Prem loves his daughter he writes daughter is like goddess.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X