twitter
    For Quick Alerts
    ALLOW NOTIFICATIONS  
    For Daily Alerts

    'ಸ್ಪಷ್ಟ ನಿಲುವು ಬೇಕು': ಪುನೀತ್ ಮಾಡಿದ್ದ ಟ್ವೀಟ್ ಬಗ್ಗೆ ನೆಟ್ಟಿಗರು ಅತೃಪ್ತಿ

    |

    ತ್ರಿಭಾಷಾ ಸೂತ್ರ ವಿರೋಧಿಸಿ ದ್ವಿಭಾಷಾ ನೀತಿ ಜಾರಿ ಮಾಡುವಂತೆ ಆಗ್ರಹಿಸಿ ಕನ್ನಡ ಪರ ಬೆಂಬಲಿಗರು ಅಭಿಯಾನ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಹ ಬೆಂಬಲ ನೀಡಿದೆ. ನಿಖಿಲ್ ಕುಮಾರ್, ವಸಿಷ್ಠ ಸಿಂಹ, ಚೇತನ್, ಸಂತೋಷ್ ಆನಂದ್ ರಾಮ್, ಸಿಂಪಲ್ ಸುನಿ ಜೊತೆಯಾಗಿದ್ದಾರೆ.

    ಇಂತಹ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಕನ್ನಡ ಕುರಿತು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದ ಅಪ್ಪು ಫ್ಯಾನ್ಸ್ ಪುನೀತ್ ಅವರ ಕನ್ನಡ ಪ್ರೇಮ ನೋಡಿ ಸಂತಸಗೊಂಡಿದ್ದಾರೆ. ಆದರೆ, ಪುನೀತ್ ಅವರ ಟ್ವೀಟ್‌ನಿಂದ ದ್ವಿಭಾಷಾನೀತಿ ಆಗ್ರಹಿಸುತ್ತಿರುವ ನೆಟ್ಟಿಗರು ತೃಪ್ತರಾಗಿಲ್ಲ.

    'ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ'-ಪುನೀತ್ ರಾಜ್ ಕುಮಾರ್ ಟ್ವೀಟ್'ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ'-ಪುನೀತ್ ರಾಜ್ ಕುಮಾರ್ ಟ್ವೀಟ್

    ಪುನೀತ್ ರಾಜ್ ಕುಮಾರ್ ಮಾಡಿರುವ ಟ್ವೀಟ್ ಖಂಡಿಸಿ ಮರುಪ್ರಶ್ನೆ ಹಾಕುತ್ತಿದ್ದಾರೆ. ಅಷ್ಟಕ್ಕೂ, ಪುನೀತ್ ಮಾಡಿದ ಟ್ವೀಟ್‌ನಲ್ಲಿ ಏನಿದೆ? ಮುಂದೆ ಓದಿ....

    ಮೊದಲು ಅಪ್ಪು ಮಾಡಿದ ಟ್ವೀಟ್ ಓದಿ

    ಮೊದಲು ಅಪ್ಪು ಮಾಡಿದ ಟ್ವೀಟ್ ಓದಿ

    "ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ" ತಾಯಿ ಮಗುವಿಗೆ ಕಲಿಸುವ ಮೊದಲ ಭಾಷೆ ಮಾತೃಭಾಷೆ ,ಮಗುವಿನ ಯೋಚನ ಭಾಷೆ -ಮಾತೃ ಭಾಷೆ ಯಾಗಿರುತ್ತದೆ ..ಆ ಭಾಷೆ ಕಲಿತಾಗಲೇ ಜಗತ್ತಿನ ಎಲ್ಲ ವಿಚಾರಗಳಿಗೆ ಸ್ಪಂದಿಸುವ ಶಕ್ತಿ ಹಾಗು ನಂಬಿಕೆ ಹುಟ್ಟುತ್ತದೆ ..! ಭಾಷೆ ಒಂದು ಭಾವನೆ ನಮ್ಮ ಭಾವನೆ ಕನ್ನಡ "ಕಲಿತು ಕಲಿಸೋಣ" - ಪುನೀತ್ ರಾಜ್ ಕುಮಾರ್

    ಹಿಂದಿ ಬಗ್ಗೆಯೂ ಇಲ್ಲ, ದ್ವಿಭಾಷಾನೀತಿಗೂ ಬೆಂಬಲ ಇಲ್ಲ!

    ಹಿಂದಿ ಬಗ್ಗೆಯೂ ಇಲ್ಲ, ದ್ವಿಭಾಷಾನೀತಿಗೂ ಬೆಂಬಲ ಇಲ್ಲ!

    ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ, ಮಾತೃಭಾಷೆಗೆ ನಮ್ಮ ಆಧ್ಯತೆ ಎಂದು ಕನ್ನಡ ಪ್ರೇಮ ಮೆರೆದಿರುವ ಪುನೀತ್ ರಾಜ್ ಕುಮಾರ್ ಅವರು, ತಮ್ಮ ಟ್ವೀಟ್‌ನಲ್ಲಿ ಎಲ್ಲಿಯೂ ಹಿಂದಿ ಹೇರಿಕೆಯನ್ನು ಖಂಡಿಸಿಲ್ಲ ಹಾಗೂ ಉಲ್ಲೇಖಿಸಿಲ್ಲ. ಮತ್ತು ದ್ವಿಭಾಷಾನೀತಿಗೆ ಬೆಂಬಲ ಸೂಚಿಸಿಲ್ಲ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಹ್ಯಾಷ್‌ಟ್ಯಾಗ್ ಸಹ ಬಳಸಿಲ್ಲ. ಹಾಗಾಗಿ, ದ್ವಿಭಾಷಾನೀತಿ ಹಾಗೂ ಹಿಂದಿ ಹೇರಿಕೆ ಕುರಿತು ಸ್ಪಷ್ಟ ನಿಲುವು ಹೇಳಿ ಎಂದು ಒತ್ತಾಯಿಸುತ್ತಿದ್ದಾರೆ.

    ಹಿಂದಿ ಹೇರಿಕೆ ವಿರೋಧಿಸಿ ದ್ವಿಭಾಷಾನೀತಿ ಬೆಂಬಲಕ್ಕೆ ನಿಂತ ವಸಿಷ್ಠ ಸಿಂಹಹಿಂದಿ ಹೇರಿಕೆ ವಿರೋಧಿಸಿ ದ್ವಿಭಾಷಾನೀತಿ ಬೆಂಬಲಕ್ಕೆ ನಿಂತ ವಸಿಷ್ಠ ಸಿಂಹ

    ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಈ ಟ್ವೀಟ್

    ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಈ ಟ್ವೀಟ್

    'ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈಗ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಈ ವಿಚಾರ ಹೇಳುತ್ತಿದ್ದೀರ? ನೇರವಾಗಿ ಹಿಂದಿ ಹೇರಿಕೆ ವಿರುದ್ಧ ಮಾತನಾಡಲು ನಿಮ್ಮಿಂದಾಗುವುದಿಲ್ಲವೇ? ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರದ ವಿರುದ್ಧ ಕನ್ನಡ ನಾಯಕನಟರಾರೂ ಮಾತನಾಡುತ್ತಿಲ್ಲ ಎಂಬ ಒತ್ತಡದಿಂದ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಈ ಟ್ವೀಟ್ ಮಾಡಿದ್ದೀರ?'

    ನೇರ ನುಡಿ ಇರಲಿ

    ನೇರ ನುಡಿ ಇರಲಿ

    'ಹಿಂದಿ ಹೇರಿಕೆ ಬಗ್ಗೆ ದಿಟ್ಟತನದಿಂದ ನಿರ್ಭೀತಿಯಿಂದ ಮಾತಾಡಲು ಭಯವೇ ನಿಮಗೆ? ನಿಮ್ಮ ತಂದೆಯವರಿಗೆ ಯಾರಿಗೂ ಜಗ್ಗದ ಕನ್ನಡದ ಬಗ್ಗೆ ಇದ್ದ ಅತೀವ ಅಭಿಮಾನ ನೆನಪಿಸಿಕೊಳ್ಳಿ. ಅವ್ರು ದ್ವನಿ ಎತ್ತದೆ ಹೋಗಿದ್ದರೆ ಗೋಕಾಕ್ ಚಳುವಳಿ ಯಶಸ್ವಿ ಆಗ್ತಾ ಇತ್ತಾ? ನಿಮಗೆ ಯಾಕ್ರೀ ಇಷ್ಟೊಂದು ಭಯ ಕನ್ನಡಿಗರು ನಿಮ್ಮ ಜೊತೆ ಇರುವಾಗ. ನೇರ ನುಡಿ ಇರಲಿ.'

    ನಡದೆ ಬಿಡಲಿ ಇನ್ನೊಂದು ಗೋಕಾಕ್ ಚಳುವಳಿ

    ನಡದೆ ಬಿಡಲಿ ಇನ್ನೊಂದು ಗೋಕಾಕ್ ಚಳುವಳಿ

    'ನೀವು ಅಣ್ಣಾವ್ರ ಮಗ. ಸ್ಪಷ್ಟವಾಗಿ ಹೇಳಿಕೆ ಕೊಡಿ ಹಿಂದಿ ಹೇರಿಕೆಯ ವಿರುದ್ಧ. ನಮಗೆ ದ್ವಿಭಾಷೆ ನೀತಿ ಬೇಕು ಎಂದು. ನಿಮ್ಮಲ್ಲಿ ಅಣ್ಣಾವ್ರಿಗೆ ಇದ್ದ ಕನ್ನಡ ಪ್ರೇಮ ಕಾಣ ಬಯಸುತ್ತೇವೆ. ನಡದೆ ಬಿಡಲಿ ಇನ್ನೊಂದು ಗೋಕಾಕ್ ಚಳುವಳಿ. ಅದಕ್ಕೆ ನೀವೇ ಸಾರಥಿಯಾಗಿ. ಕನ್ನಡವಿದ್ದರೆ ಮಾತ್ರ ಕನ್ನಡ ಚಿತ್ರರಂಗ!'

    ದೊಡ್ಡಮನೆಯ ಸ್ವಷ್ಟ ನಿಲುವು ಅಗತ್ಯ

    ದೊಡ್ಡಮನೆಯ ಸ್ವಷ್ಟ ನಿಲುವು ಅಗತ್ಯ

    'ನಿಜ! ಆದರೆ ದ್ವಿಭಾಷಾನೀತಿಯ ಮೇಲೆ, ಹಿಂದಿ ಹೇರಿಕೆಯ ವಿಚಾರವಾಗಿ #ದೊಡ್ಡಮನೆಯ ನಿಲುವು ಏನೆಂಬು ಸ್ವಷ್ಟವಾಗಿ ಕನ್ನಡಿಗ ಅಭಿಮಾನಿ ದೇವರುಗಳಿಗೆ ತಿಳಿಸಿ ಅಪ್ಪು''

    English summary
    Netizens urge kannada actor puneeth Rajkumar to express clear stand about Hindi imposition.
    Saturday, August 22, 2020, 11:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X