For Quick Alerts
  ALLOW NOTIFICATIONS  
  For Daily Alerts

  ರಾತ್ರಿ ಕರ್ಫ್ಯೂ: ಚಿತ್ರಮಂದಿರದ ಮಾಲೀಕರಿಗೆ ಹೆಚ್ಚಿದ ತಲೆ ಬಿಸಿ

  |

  ಕೊರೊನಾ ವೈರಸ್ ಪ್ರಕರಣದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪೂರ್ಣ ಪ್ರಮಾಣದ ಲಾಕ್‌ಡೌನ್ ಸದ್ಯಕ್ಕಿಲ್ಲ ಎಂದು ಹೇಳುತ್ತಿರುವ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.

  Recommended Video

  Roberrt ಚಿತ್ರದ ಅವಧಿಯಿಂದ ಥಿಯೇಟರ್ ಮಾಲೀಕರಿಗೆ ಶುರುವಾಯ್ತು ತಲೆನೋವು | Filmibeat Kannada

  ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿ ಮಾಡಿದೆ. ಈ ಅವಧಿಯಲ್ಲಿ ತುರ್ತು ಕಾರಣ ಹಾಗೂ ಉದ್ದೇಶಿತ ಕೆಲಸಗಳಿಗಾಗಿ ಮಾತ್ರ ಸಾರ್ವಜನಿಕರು ಸಂಚರಿಸಬೇಕಿದೆ. ರಾತ್ರಿ ಕರ್ಫ್ಯೂ ಕಾರಣದಿಂದ ಚಿತ್ರಮಂದಿರದ ಮಾಲೀಕರಿಗೆ ತಲೆ ಬಿಸಿ ಹೆಚ್ಚಾಗಿದೆ. ರಾಬರ್ಟ್, ಯುವರತ್ನ ಅಂತಹ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಮಯದಲ್ಲಿ ಸರ್ಕಾರದ ಈ ಆದೇಶಗಳು ಥಿಯೇಟರ್ ಮಾಲೀಕರ ಲೆಕ್ಕಾಚಾರ ಉಲ್ಟಾ ಮಾಡಿದೆ. ಮುಂದೆ ಓದಿ....

  8 ದಿನದಲ್ಲೇ ಅಮೇಜಾನ್‌ಗೆ ಬಂದ ಯುವರತ್ನ: ಅಪ್ಪು ಫ್ಯಾನ್ಸ್ ಬೇಸರ 8 ದಿನದಲ್ಲೇ ಅಮೇಜಾನ್‌ಗೆ ಬಂದ ಯುವರತ್ನ: ಅಪ್ಪು ಫ್ಯಾನ್ಸ್ ಬೇಸರ

  ರಾತ್ರಿ ಪ್ರದರ್ಶನ ರದ್ದು

  ರಾತ್ರಿ ಪ್ರದರ್ಶನ ರದ್ದು

  ಚಿತ್ರಮಂದಿರಗಳು ಪ್ರತಿನಿತ್ಯ ನಾಲ್ಕು ಅಥವಾ ಐದು ಶೋಗಳು ಪ್ರದರ್ಶನ ಮಾಡುತ್ತವೆ. ಬಹುತೇಕ ಚಿತ್ರಮಂದಿರಗಳಲ್ಲಿ ರಾತ್ರಿ 8 ಗಂಟೆಗೆ, ರಾತ್ರಿ 9 ಗಂಟೆಗೆ ಶೋ ಇರುತ್ತದೆ. ರಾಬರ್ಟ್ ಮತ್ತು ಯುವರತ್ನ ಚಿತ್ರಗಳು ಎರಡೂವರೆ ಗಂಟೆಗೂ ಅಧಿಕ ಕಾಲಾವಧಿ ಹೊಂದಿದೆ. 8 ಗಂಟೆ ಶೋ ಶುರು ಮಾಡಿದರೆ ಸಿನಿಮಾ ಮುಗಿಯುವಷ್ಟರಲ್ಲಿ 11 ಗಂಟೆ ಆಗುತ್ತದೆ. 9 ಗಂಟೆ ಶೋ ಅಂದ್ರೆ ರಾತ್ರಿ 12 ಗಂಟೆ ಆಗುತ್ತದೆ. 10 ಗಂಟೆ ಮೇಲೆ ಜನರು ಓಡಾಡಲು ನಿಷೇಧ ಇರುವುದರಿಂದ 9.30ರೊಳಗೆ ಶೋ ಮುಗಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ರಾತ್ರಿ ಶೋಗಳನ್ನು ಚಿತ್ರಮಂದಿರಗಳು ರದ್ದು ಮಾಡಿವೆ.

  50 ಪರ್ಸೆಂಟ್ ಜೊತೆ ರಾತ್ರಿ ಶೋ ರದ್ದು

  50 ಪರ್ಸೆಂಟ್ ಜೊತೆ ರಾತ್ರಿ ಶೋ ರದ್ದು

  ಕೋವಿಡ್ ಹಿನ್ನೆಲೆ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗ ಒಂದು ಶೋ ರದ್ದು ಮಾಡಬೇಕಾದ ಪರಿಸ್ಥಿತಿ. 50 ಪರ್ಸೆಂಟ್ ಇದ್ದರೂ ಹೆಚ್ಚುವರಿ ಶೋಗಳನ್ನು ನಡೆಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಚಿತ್ರಮಂದಿರ ಮಾಲೀಕರಿಗೆ ಇದು ಆಘಾತ ತಂದಿದೆ.

  'KGF'ಗಿಂತ ಹೆಚ್ಚಿನ ಬೆಲೆಗೆ 'ಅಮೆಜಾನ್'ಗೆ ಸೇಲ್ ಆದ 'ಯುವರತ್ನ''KGF'ಗಿಂತ ಹೆಚ್ಚಿನ ಬೆಲೆಗೆ 'ಅಮೆಜಾನ್'ಗೆ ಸೇಲ್ ಆದ 'ಯುವರತ್ನ'

  ಥಿಯೇಟರ್ ಕಲೆಕ್ಷನ್ ಮೇಲೆ ಪ್ರಭಾವ

  ಥಿಯೇಟರ್ ಕಲೆಕ್ಷನ್ ಮೇಲೆ ಪ್ರಭಾವ

  50 ಪರ್ಸೆಂಟ್ ಆದೇಶ ಮಾಡಿದಾಗಲೇ ಚಿತ್ರಮಂದಿರ ಮಾಲೀಕರು ಕಲೆಕ್ಷನ್ ಮೇಲೆ ಪ್ರಭಾವ ಬೀರಿದೆ. ಕೊರೊನಾ ಭೀತಿಯಿಂದ ಜನರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಈಗ ಒಂದು ಶೋ ರದ್ದು ಮಾಡಲಾಗಿದೆ. ಸಹಜವಾಗಿ ಕಲೆಕ್ಷನ್ ಕಡಿಮೆ ಆಗುತ್ತದೆ. ಚಿತ್ರಮಂದಿರ ಬಾಡಿಗೆ ಪದ್ದತಿಯಲ್ಲಿ ಸಿನಿಮಾ ಪ್ರದರ್ಶಿಸುತ್ತಿದ್ದರೆ ಇದರಿಂದ ಆರ್ಥಿಕ ಸಂಕಷ್ಟ ಎದುರಾಗಬಹುದು.

  ಓಟಿಟಿಗಳ ಮೊರೆ ಹೋದ ಸ್ಟಾರ್ಸ್

  ಓಟಿಟಿಗಳ ಮೊರೆ ಹೋದ ಸ್ಟಾರ್ಸ್

  ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಆದೇಶ ಹೊರಬೀಳುತ್ತಿದ್ದಂತೆ ಸ್ಟಾರ್ ನಟರ ಚಿತ್ರಗಳು ಓಟಿಟಿ ಕಡೆ ಮುಖ ಮಾಡಿದ್ದಾರೆ. ರಿಲೀಸ್ ಆದ 8 ದಿನದಲ್ಲೇ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಿದೆ.

  English summary
  Night Curfew in Karnataka: Theater Owners Cancelled Night Shows in Cinema Halls.
  Saturday, April 10, 2021, 13:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X