Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Automobiles
ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಎಸ್ಎಲ್: ಚೆನ್ನೈಯಿನ್ ಎಫ್ಸಿ vs ಎಸ್ಸಿ ಈಸ್ಟ್ ಬೆಂಗಾಲ್, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ನಿಖಿಲ್ ಪ್ರತಿಕ್ರಿಯೆ
ಮಂಡ್ಯ ಚುನಾವಣಾ ಫಲಿತಾಂಶ ಬಂದು, ಅದರಲ್ಲಿ ಸುಮಲತಾ ಅಂಬರೀಶ್ ಜಯಶಾಲಿ ಆಗಿದ್ದಾರೆ. ಅವರ ವಿರುದ್ಧ ಸಿ ಎಂ ಪುತ್ರ, ನಟ ನಿಖಿಲ್ ಕುಮಾರ್ ಸೋಲು ಅನುಭವಿಸಿದ್ದಾರೆ.
ಚುನಾವಣಾ ಫಲಿತಾಂಶ ಬಂದ ಏಳು ದಿನಗಳು ಕಳೆದರೂ ನಿಖಿಲ್ ಕುಮಾರ್ ಎಲ್ಲಿಯೂ ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ನಿನ್ನೆ (ಬುದವಾರ) ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ಇಂದು ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದಾರೆ.
ಅಂಬರೀಶ್ ಹುಟ್ಟುಹಬ್ಬ ಹಾಗೂ 'ಅಮರ್' ಸಿನಿಮಾದ ಬಿಡುಗಡೆಯ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿರುವ ನಿಖಿಲ್ ಅದರ ಜೊತೆಗೆ ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ಅಂಬಿ ಹುಟ್ಟುಹಬ್ಬ ದಿನ ಮನದ ಮಾತು ಹಂಚಿಕೊಂಡ ನಿಖಿಲ್
ಚುನಾವಣೆ ಸೋತರೂ ಮಂಡ್ಯ ಜನರ ಜೊತೆಗೆ ಇರುತ್ತೇನೆ ಎಂದಿರುವ ಅವರು ಜಿಲ್ಲೆಯ ಅಬಿವೃದ್ಧಿಗೆ ಯಾರ ಜೊತೆಗೆ ಬೇಕಾದರೂ ಕೈ ಜೋಡಿಸುತ್ತೇನೆ ಎಂದಿದ್ದಾರೆ.
ಅಂದಹಾಗೆ, ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ನಿಖಿಲ್ ಕುಮಾರ್ ನೀಡಿದ ನೀಡಿದ ಪ್ರತಿಕ್ರಿಯೆ ಹೀಗಿದೆ...

ನನ್ನ ಸಹೋದರ ಅಭಿ ಸಿನಿಮಾ ಯಶಸ್ಸು ಕಾಣಲಿ
''ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ 'ಅಮರ್' ಭಾರಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾವನ್ನು ನೋಡಿ. ಅಭಿ ಚೆನ್ನಾಗಿ ನಟಿಸುರುತ್ತಾನೆ ಎನ್ನುವ ಭರವಸೆ ಇದೆ.'' ಎಂದು ತಮ್ಮ ಮಾತು ಶುರು ಮಾಡಿರುವ ನಿಖಿಲ್ ಮುಂದೆ ಚುನಾವಣೆ ಬಗ್ಗೆ ಬರೆದುಕೊಂಡಿದ್ದಾರೆ.
ಮಂಡ್ಯದಲ್ಲಿ ನಿಖಿಲ್ ಅವರನ್ನ ಸೋಲಿನ ಸುಳಿಗೆ ನೂಕಿದ್ದೇ ಈ '7' ಹೇಳಿಕೆಗಳು
|
ಸುಮಕ್ಕನ ಗೆಲುವಿಗೆ ಶುಭ ಕೋರುತ್ತೇನೆ
''ಇದು ಕೇವಲ ತೋರ್ಪಡಿಕೆಗಾಗಿ ಶುಭ ಕೋರುತ್ತಿದ್ದೇನೆ ಎಂದು ತಿಳಿದುಕೊಳ್ಳುವವರಿಗೆ ನಾನು ಏನು ಹೇಳಲು ಬಯಸುತ್ತೇಂದರೆ, ನಾನು ಮಾನವಿಕ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ.''

ಯಾರನ್ನು ಟೀಕಿಸುವುದು ಬೇಡ
''ಮಂಡ್ಯದ ಅಭಿವೃದ್ದಿಗಾಗಿ ನಾನು ಯಾರ ಜೊತೆಗೆಗಾದರೂ ಕೈ ಜೋಡಿಸಲು ಸಿದ್ಧ. ಈ ಚುನಾವಣೆಯ ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ. ಏನೇ ಟೀಕಿಸುವುದು ಇದ್ದರೂ ನನ್ನನ್ನೇ ಟೀಕಿಸಿ. ಎಮ್ ಎಲ್ ಎ, ಎಮ್ ಎಲ್ ಸಿ, ಕಾರ್ಯಕರ್ತರು, ಮುಖ್ಯಮಂತ್ರಿ ಹಾಗೂ ದೇವೇಗೌಡರನ್ನು ಟೀಕಿಸುವುದು ಬೇಡ.''

ಉಳಿದ ಮತದಾರರ ನಂಬಿಕೆ ಗಳಿಸಲು ಪ್ರಯತ್ನ
''ಮಂಡ್ಯಗಾಗಿ ಮುಖ್ಯಮಂತ್ರಿಗಳು 8,671 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆ ಕೆಲಸಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಕಾತರಿ ಪಡಿಸಿಕೊಳ್ಳುತ್ತೇನೆ. ಏಕೆಂದರೆ, ಅದು ನಮ್ಮ ಕರ್ತವ್ಯ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ 5 ಲಕ್ಷದ 76 ಸಾವಿರ 400 ಜನರಿಗೆ ಧನ್ಯವಾದ. ಮುಂದಿನ ದಿನದಲ್ಲಿ ಇನ್ನುಳಿದ ಮತದಾರರ ನಂಬಿಕೆ ಗಳಿಸಲು ಪ್ರಯತ್ನ ಮಾಡುತ್ತೇನೆ.

ರಾಜ್ಯದ ತುಂಬ ಪ್ರವಾಸ ಮಾಡುತ್ತೇನೆ
''ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ನಾನು ಈ ಇಡೀ ಪಯಣದಲ್ಲಿ ಸಾಕಷ್ಟು ಪಡೆದುಕೊಂಡಿದ್ದೇನೆ. ನಾನು ಮೊದಲ ದಿನದಿಂದ ಪಾಸಿಟಿವ್ ವ್ಯಕ್ತಿಯಾಗಿದ್ದೆ. ಈಗಲೂ ನಿಮಗೆ ನಿಖಿಲ್ ಕುಮಾರಸ್ವಾಮಿ ಒಬ್ಬ ಸೀರಿಯಸ್ ರಾಜಕಾರಣಿಯೇ? ಎನ್ನುವ ಪ್ರಶ್ನೆ ಕಾಡುತ್ತಿದ್ದರೆ, ನಾನು ಇಡೀ ರಾಜ್ಯದ ತುಂಬ ಪ್ರವಾಸ ಮಾಡಿ, ಅಲ್ಲಿನ ಸಮಸ್ಯೆಗಳನ್ನು ತಿಳಿಯುವುದರ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬುತ್ತೇನೆ.''

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
''ಈ ಬಗ್ಗೆ ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಮಾಡುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ.'' ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಸೋತಲು ರಾಜಕೀಯದಲ್ಲಿಯೇ ಇರುವ ಸೂಚನೆ ನೀಡಿದ್ದಾರೆ.