»   » 'ಭರ್ಜರಿ' ಮತ್ತು 'ತಾರಕ್'ಗೆ ಬಂದ ದುರ್ಗತಿ 'ಮಫ್ತಿ'ಗೆ ಬರಲಿಲ್ಲ

'ಭರ್ಜರಿ' ಮತ್ತು 'ತಾರಕ್'ಗೆ ಬಂದ ದುರ್ಗತಿ 'ಮಫ್ತಿ'ಗೆ ಬರಲಿಲ್ಲ

Posted By:
Subscribe to Filmibeat Kannada

ಸಿನಿಮಾ ಮಾಡುವಾಗ ಒಂದು ರೀತಿಯ ಕಷ್ಟ ಆದರೆ ಸಿನಿಮಾ ಚಿತ್ರಮಂದಿರಕ್ಕೆ ಬಂದ ಮೇಲೆಯೂ ಕೆಲವು ತೊಂದರೆಗಳು ಎದುರಾಗುತ್ತದೆ. ಎಷ್ಟೇ ಒಳ್ಳೆಯ ಸಿನಿಮಾ ಮಾಡಿದರೂ, ಚಿತ್ರಮಂದಿರದ ಕೊರತೆ, ಪೈರಸಿ, ಪರಭಾಷಾ ಚಿತ್ರಗಳ ಹಾವಳಿ, ಮಲ್ಟಿಪ್ಲೆಕ್ಸ್ ಅನ್ಯಾಯದಿಂದಾಗಿ ಕನ್ನಡ ಸಿನಿಮಾಗಳ ಓಟಕ್ಕೆ ಬ್ರೇಕ್ ಬೀಳುತ್ತದೆ.

'ಮಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

ಅದರಲ್ಲೂ ಪೈರಸಿ ಚಿತ್ರರಂಗವನ್ನು ಭೂತದಂತೆ ಕಾಡುತ್ತದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚಿತ್ರತಂಡಕ್ಕೆ ಪೈರಸಿ ಕಾಟ ಆರಂಭವಾಗುತ್ತದೆ. ಇಂದಿನ ದಿನಗಳಲ್ಲಂತೂ 100 ರೂಪಾಯಿ ಕೊಟ್ಟು ಚಿತ್ರಮಂದಿರಕ್ಕೆ ಹೋಗಿ ಫೇಸ್ ಬುಕ್ ಲೈವ್ ಮೂಲಕ ಸಾವಿರಾರು ಜನರಿಗೆ ಬಿಟ್ಟಿ ಸಿನಿಮಾ ತೋರಿಸುವವರು ಉಂಟು. ಆದರೆ ಇಂತಹ ಸಮಸ್ಯೆ 'ಮಫ್ತಿ' ಚಿತ್ರಕ್ಕೆ ಎದುರಾಗಿಲ್ಲ. ಮುಂದೆ ಓದಿ....

ಫೇಸ್ ಬುಕ್ ಲೈವ್

'ಮಫ್ತಿ' ಸಿನಿಮಾ ನಿನ್ನೆ ರಾಜ್ಯಾದ್ಯಂತ ರಿಲೀಸ್ ಆಗಿದೆ. ಆದರೆ ಈ ಚಿತ್ರದ ಫೇಸ್ ಲುಕ್ ಲೈವ್ ಮಾಡಿರುವ ಘಟನೆ ಎಲ್ಲಿಯೂ ನಡೆದಿಲ್ಲ. ಹೀಗಾಗಿ, ಪೈರಸಿ ಹೊಡೆತದಿಂದ 'ಮಫ್ತಿ' ಬಚಾವ್ ಆಗಿದೆ.

ಕೆಲ ದೃಶ್ಯಗಳು

ಈ ಸಿನಿಮಾವನ್ನು ಯಾರೂ ಫೇಸ್ ಬುಕ್ ಲೈವ್ ಮಾಡಿಲ್ಲ. ಆದರೆ ಚಿತ್ರದ ಕೆಲವು ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದರಲ್ಲಿ ಶಿವಣ್ಣನ ಎಂಟ್ರಿ ಸೀನ್ ರಿವೀಲ್ ಆಗಿದೆ.

'ತಾರಕ್' ಮತ್ತು 'ಭರ್ಜರಿ'

ಈ ಹಿಂದೆ 'ಭರ್ಜರಿ' ಮತ್ತು 'ತಾರಕ್' ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ದಲ್ಲಿಯೇ ಕೆಲ ಕಿಡಿಗೇಡಿಗಳು ಫೇಸ್ ಬುಕ್ ಲೈವ್ ಮಾಡಿದ್ದರು. ಇದರಿಂದ ಚಿತ್ರಕ್ಕೆ ದೊಡ್ಡ ಲಾಸ್ ಆಗಿತ್ತು.

ಶಿವಣ್ಣ, ಶ್ರೀಮುರಳಿಯ 'ಮಫ್ತಿ' ಬಗ್ಗೆ ವಿಮರ್ಶಕರು ಏನಂದ್ರು..?

'ಮಫ್ತಿ' ಹೇಗಿದೆ..?

ಇನ್ನು 'ಮಫ್ತಿ' ಚಿತ್ರದಲ್ಲಿ ಸಿಂಪಲ್ ಕಥೆ ಇದ್ದರೂ ಅದನ್ನು ಸೋಗಸಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಶ್ರೀ ಮುರಳಿ ನಾಯಕನಾಗಿದ್ದರು, ಶಿವಣ್ಣ ಪಾತ್ರಕ್ಕೆ ಇರುವ ತಾಕತ್ತು ಜೋರಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಕ್ಷನ್ ಪ್ರಿಯರಿಗೆ 'ಮಫ್ತಿ' ಹೇಳಿ ಮಾಡಿಸಿದ ಸಿನಿಮಾ.

English summary
No piracy issues for Srimurali and Shiva Rajkumar starrer 'Mufti' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada