»   » ಕಡೆಗೂ ತೆರೆಗೆ ಓಂ ಪ್ರಕಾಶ್ ರಾವ್ 'ಕಟ್ಟೆ' ಪುರಾಣ

ಕಡೆಗೂ ತೆರೆಗೆ ಓಂ ಪ್ರಕಾಶ್ ರಾವ್ 'ಕಟ್ಟೆ' ಪುರಾಣ

Posted By:
Subscribe to Filmibeat Kannada

ಓಂ ಪ್ರಕಾಶ್ ರಾವ್ ನಿರ್ದೇಶಕದ ಕಟ್ಟೆ ಚಿತ್ರ ಹಲವು ವಿಶೇಷಗಳ ಹೂರಣ. ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್'ನ ಪ್ರೇರಣೆಯೂ ಕಟ್ಟೆಗೆ ಇದೆ ಎನ್ನುತ್ತಿದೆ ಚಿತ್ರತಂಡ. ಈ ಚಿತ್ರವನ್ನು ಶಂಕರ್ ನಾಗ್ ಅವರಿಗೆ ಅರ್ಪಿಸುವುದಾಗಿಯೂ ಹೇಳಿದೆ. ಇದೇ ಏಪ್ರಿಲ್ 3ಕ್ಕೆ ತೆರೆಗೆ 'ಕಟ್ಟೆ' ಪುರಾಣ ಬರುತ್ತಿದೆ.

ಅಂದಹಾಗೆ ಇದು ತಮಿಳಿನ 'ಕೇಡಿ ಬಿಲ್ಲ ಕಿಲಾಡಿ ರಂಗ' ಚಿತ್ರದ ರೀಮೇಕ್. ನಾಗಶೇಖರ್, ಚಂದನ್ ಹಾಗೂ ಓಂ ಪ್ರಕಾಶ್ ರಾವ್ ಈ ಕಟ್ಟೆ ಚಿತ್ರದ ಸದಸ್ಯರು. ಇಬ್ಬರು ನಾಯಕಿಯರು ಓಂ ಪ್ರಕಾಶ್ ಪುತ್ರಿ ಶ್ರಾವ್ಯಾ ಹಾಗೂ ರೂಕ್ಸಾರ್. ಪ್ರತಿ ಊರಿನಲ್ಲೂ ಇರುವ ಸೋಮಾರಿ ಕಟ್ಟೆ, ಅಲ್ಲೊಂದಷ್ಟು ಮಂದಿ ಪುಂಡು ಹೈಕ್ಳ ಕಥೆ ಇದು. [ಮಗಳು ಶ್ರಾವ್ಯಾ ಜತೆ 'ಕಟ್ಟೆ' ಮೇಲೆ ಓಂ ಪ್ರಕಾಶ್ ರಾವ್]

ಓಂ ಪ್ರಕಾಶ್ ರಾವ್ ಅವರ ಪತ್ನಿಯಾಗಿ, ಅವರ ಬೇಜವಾಬ್ದಾರಿತನಕ್ಕೆ ಮರುಗುವ ಗೃಹಿಣಿಯಾಗಿ ಗೀತಾ ಕಾಣಿಸುತ್ತಿದ್ದಾರೆ. ಈ ಚಿತ್ರವನ್ನು ಎಂ ಎಂ ಉಮೇಶ್ ರೆಡ್ಡಿ ಅವರು ಶರೀ ರೇಣುಕಾ ಮೂವಿ ಮೇಕರ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಕಟ್ಟೆ ಚಿತ್ರಕ್ಕೆ 'ದಿ ಲಕ್ಕಿ ಪ್ಲೇಸ್' ಅಡಿಬರಹ ನೀಡಿದ್ದಾರೆ.

Om Prakash Rao's 'Katte' releases on 3rd April

ಹುಡುಗಿ ಹಿಂದೆ ಬಿದ್ದು ಸದಾಕಾಲ ಅವಳಿಂದ ಬೈಸಿಕೊಳ್ಳುವ ಪಾತ್ರದಲ್ಲಿ ನಾಗಶೇಖರ್ ಕಾಣಿಸಲಿದ್ದಾರೆ. ಕಾಮಿಡಿ ಮೂಲಕ ಸಂಬಂಧಗಳ ಮಹತ್ವವನ್ನು ಚಿತ್ರ ಹೇಳಲಿದೆಯಂತೆ. ಕಾಮಿಡಿ, ಐಟಂ ಸಾಂಗು, ಒಂದಷ್ಟು ಆಕ್ಷನ್ ಸೇರಿರುವ 'ಕಟ್ಟೆ'ಯಲ್ಲಿ ಸಂದೇಶವೂ ಇದೆಯಂತೆ.

ಎಸ್.ಎ ರಾಜ್‌ಕುಮಾರ್ ಸಂಗೀತ, ರವಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಒಂದೊಂದು ಹಾಡನ್ನೂ ವಿಶಿಷ್ಟ ಪರಿಕಲ್ಪನೆ ಹಿನ್ನೆಲೆಯಲ್ಲಿ ನೃತ್ಯ ಸಂಯೋಜಕ ತ್ರಿಭುವನ್ ಸಂಯೋಜಿಸಿದ್ದಾರಂತೆ. ಮುಮೈತ್ ಖಾನ್‌ ಕೂಡ ಒಂದು ‘ವಿಶೇಷ ನೃತ್ಯ'ಕ್ಕೆ ಮೈ ಬಳುಕಿಸಿರುವುದು ‘ಕಟ್ಟೆ'ಯ ವಿಶೇಷಗಳಲ್ಲೊಂದು. ಚಿತ್ರಕ್ಕೆ ‘ಯು/ಎ' ಪ್ರಮಾಣಪತ್ರ ಸಿಕ್ಕಿದೆ.

ನಿರ್ದೇಶಕ ಓಂಪ್ರಕಾಶ್‍ರವರೆ ಚಿತ್ರಕಥೆ ಬರೆದಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ ಇರುವ ಚಿತ್ರದ ಪಾತ್ರವರ್ಗದಲ್ಲಿ ಗೀತಾ, ಓಂ ಪ್ರಾಕಾಶ್ ರಾವ್, ಶ್ರೀನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Om Prakash Rao's 'Katte' (ಕಟ್ಟೆ) movie slated for release on 3rd April. The movie Starring Chandan, Nagshekhar, Om Prakash Rao, Shrvya, Rukshar, Geetha. It is the first combination of reputed director Om Prakash Rao and his daughter Shravya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada