»   » ಸದ್ದುಗದ್ದಲವಿಲ್ಲದೆ ಸೆಟ್ಟೇರಿದ ಒಂದಕ್ಷರದ ಚಿತ್ರ 'ಕ'

ಸದ್ದುಗದ್ದಲವಿಲ್ಲದೆ ಸೆಟ್ಟೇರಿದ ಒಂದಕ್ಷರದ ಚಿತ್ರ 'ಕ'

Posted By:
Subscribe to Filmibeat Kannada
Kannada movie titled as 'Ka'
ಕನ್ನಡ ಚಿತ್ರರಂಗದಲ್ಲಿ ಈಗ ಪ್ರಯೋಗಾತ್ಮಕ ಚಿತ್ರಗಳದ್ದೇ ಹವಾ. ಹೊಸಬರ ಪ್ರಯತ್ನವನ್ನು ಕಾತುರದಿಂದ ನಿರೀಕ್ಷಿಸುವ ಪ್ರೇಕ್ಷಕರ ವರ್ಗವೇ ಈಗ ಸೃಷ್ಟಿಯಾಗಿದೆ. ಈಗ ಅಂತಹದ್ದೇ ಒಂದು ಚಿತ್ರ ಸದ್ದುಗದ್ದವಿಲ್ಲದಂತೆ ಸೆಟ್ಟೇರಿದೆ. ಚಿತ್ರದ ಶೀರ್ಷಿಕೆ ಕೇಳಿದರೆ ಕಕ್ಕಾಬಿಕ್ಕಿಯಾಗುತ್ತೀರಾ...ಚಿತ್ರದ ಹೆಸರು 'ಕ'.

ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ಪುತ್ರ ಹೆಸರಾಂತ ಡಿಸೈನರ್ ಸಾಯಿ ಕೃಷ್ಣ ಸದ್ದು ಗದ್ದಲವಿಲ್ಲದೆ 'ಕ' ಎಂಬ ಕನ್ನಡ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಏನಿದು 'ಕ'? ಸ್ವಲ್ಪ ಸಮಯ ಕಾಯಬೇಕು ಎಲ್ಲವನ್ನೂ ಸಂಪೂರ್ಣವಾಗಿ ಮಾಧ್ಯಮದ ಮುಂದೆ ತಿಳಿಸುತ್ತೇನೆ ಎನ್ನುತ್ತಾರೆ ಸಾಯಿ ಕೃಷ್ಣ.

'ಕ' ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ. ಈ ಹಿಂದೆ 'ಕ್ಷಮಿಸಿ' ಚಿತ್ರಕ್ಕೆ ಅವರು ಪ್ರತಿಭಾನ್ವೇಷಣೆ ಮಾಡಿದ ಕಲಾವಿದರನ್ನು ಈ 'ಕ' ಚಿತ್ರ್ಕಕೆ ಆಯ್ಕೆ ಮಾಡಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ 'ಕ' ಚಿತ್ರದ ನಿರ್ಮಾಪಕರು ರಾಜಮ್ಮ ಸಾಯಿಪ್ರಕಾಶ್.

ಶರತ್, ಮೋನಿಶ್ ನಾಗರಾಜ್, ವಿಶಾಲ್ ನಾಯರ್, ಶೈನ್ ಶೆಟ್ಟಿ ಜೊತೆಗೆ ಪವಿತ್ರಾ, ಅನುಷಾ, ಪಲ್ಲವಿ, ದೀಪಾ, ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ.
ಚಿತ್ರೀಕರಣವನ್ನು ಬೆಂಗಳೂರು, ಚಿಕ್ಕಮಗಳೂರು, ಹಾಸನ್ ಹಾಗೂ ಖಾಸಗಿ ಚಾನಲ್ ಅಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

ನಾಲ್ಕು ಹಾಡುಗಳಲ್ಲಿ ಎರಡು ಹಾಡಿನ ಚಿತ್ರೀಕರಣ ಸಂಪೂರ್ಣವಾಗಿದ್ದು ಸದ್ಯದಲ್ಲೇ ಇನ್ನೆರಡು ಹಾಡುಗಳ ಚಿತ್ರೀಕರಣ ಹಮ್ಮಿಕೊಳ್ಳಲಾಗಿದೆ. ಛಾಯಾಗ್ರಹಣ ಸ್ಟೀಲ್ ಬೆಂಜಮಿನ್, ಸಂಗೀತ ಗಣೇಶ್ ನಾರಾಯಣ ಅವರದು. (ಒನ್ಇಂಡಿಯಾ ಕನ್ನಡ)

English summary
Om Saiprakash's son Sai Krishna titled his upcoming movie as 'Ka'. The movie silently completes talkie portion and shooting is progressing at brisk peace. Along with direction Sai Krishna writes story, screenplay, dialogues and producing the movie.
Please Wait while comments are loading...