ಒರಟ ಪ್ರಶಾಂತ್ ಕರೆ ಮಾಡಬಹುದು ಬೀ ಅಲರ್ಟ್!
ಮೊದಲ ಸಿನಿಮಾ 'ಒರಟ'ದಲ್ಲೇ ರಫ್ ಅಂಡ್ ಟಫ್ ಪಾತ್ರ ಮಾಡಿ ಒರಟ ಪ್ರಶಾಂತ್ ಅನ್ನೋ ಹೆಸರಿಂದಾನೇ ಸ್ಯಾಂಡಲ್ ವುಡ್ ನಲ್ಲಿ ಬ್ರ್ಯಾಂಡ್ ಆದ ನಟ ಪ್ರಶಾಂತ್. ಈಗ ಪ್ರಶಾಂತ್ ಮತ್ತೊಂದು ಮನಮುಟ್ಟುವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಅದು ಚಿರಾಯು ಚಿತ್ರ. ಇದು ಸ್ವತಃ ಒರಟ ಪ್ರಶಾಂತ್ ನಿರ್ಮಾಣ ಮಾಡಿ ನಿರ್ದೇಶನ ಮಾಡಿ ನಟಿಸಿರೋ ಚಿತ್ರ. ರೌಡೀಯಿಸಂ ಬೇಸ್ಡ್ ಕಥೆ ಹೊಂದಿರೋ ಚಿತ್ರ 'ಚಿರಾಯು' ಸೆನ್ಸಾರ್ ಮುಗಿಸಿ ರಿಲೀಸ್ ಗೂ ತಯಾರಾಗಿದೆ. ಈ ಚಿತ್ರದ ಪ್ರಚಾರಕ್ಕೆ ಪಣತೊಟ್ಟಿರೋ ಪ್ರಶಾಂತ್ ಟ್ರೈಲರನ್ನು ಮನೆ ಮನೆಗಳಿಗೆ ತಲುಪಿಸ್ತಿದ್ದಾರೆ. ಅದು ವಾಟ್ಸಾಪ್ ಮೂಲಕ. [ಯೂಟ್ಯೂಬಲ್ಲಿ ಯಕ್ಕ ಯಕ್ಕ ಶೋಭಕ್ಕ ಸಾಂಗ್ ಗದ್ದಲ]

ಕಳೆದ ಎರಡು ವಾರದಿಂದ ಸತತವಾಗಿ ತನ್ನದೇ ಮೊಬೈಲ್ ಸಂಖ್ಯೆಯಿಂದ ಸಾರ್ವಜನಿಕರಿಗೆ ಟ್ರೈಲರ್ ಕಳುಹಿಸಿ ಖುಷಿಯಾಗಿದ್ದಾರೆ. ಇನ್ನು ಚಿತ್ರದಲ್ಲಿ ಬರೋ "ಯಕ್ಕ ಯಕ್ಕ ಶೋಭಕ್ಕ" ಹಾಡು ಚಿತ್ರರಸಿಕರಿಗೆ ಇಷ್ಟವಾಗಿದೆ.
ಚಿರಾಯು ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರುತ್ತೆ. ಯಾವುದಕ್ಕೂ ಅಲರ್ಟ್ ಆಗಿರಿ. ನಿಮ್ಮ ಮೊಬೈಲ್ ಗೂ 'ಚಿರಾಯು' ಚಿತ್ರದ ಟ್ರೈಲರ್ ಬರಬಹುದು, ನೀವು ವಾಟ್ಸಾಪ್ ಬಳಕೆದಾರರಾಗಿದ್ದಾರೆ ಮಾತ್ರ ಎಂಬುದು ನಿಮ್ಮ ಗಮನಕ್ಕಿರಲಿ.


Click it and Unblock the Notifications











