Don't Miss!
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವಾರ ಬಾಸು ಮತ್ತೆ ಅದೇ ಹಳೇ ಕಥೆ ರಿಪೀಟ್
ಈ ವರಮಹಾಲಕ್ಷ್ಮಿ ಹಬ್ಬಕ್ಕೆ (ಆ.8) ಯಾವ್ಯಾವ ಕನ್ನಡ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ ಎಂದು ಒಮ್ಮೆ ಕಣ್ಣಾಡಿಸೋಣ ಬನ್ನಿ. ಕಳೆದ ಕೆಲ ವಾರಗಳಿಂದ ಒಂದೊಂದೇ ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ ಈ ವಾರ ಬಾಸು ಮತ್ತೆ ಅದೇ ಹಳೇ ಕಥೆ ರಿಪೀಟ್ ಆಗುತ್ತಿದೆ.
ಈ ಬಾರಿ ಎರಡು ವೈಟು ಮತ್ತು ಒಂದು ರೆಡ್ ಎಂಬ ಅಡಿಬರಹದ 'ಪಂಗನಾಮ' ಚಿತ್ರದ ಜೊತೆಗೆ ಇನ್ನೆರಡು ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲು ಬರುತ್ತಿವೆ. ಮೂರೂ ಚಿತ್ರಗಳು ಒಂದಕ್ಕೊಂದು ಭಿನ್ನ ಎಂಬುದು ವಿಶೇಷ. ಎಲ್ಲವೂ ಹೊಸಬರ ಹೊಸ ಪ್ರಯೋಗಗಳೇ. ['ಪಂಗನಾಮ' ಎರಡು ವೈಟು ಒಂದು ರೆಡ್ಡು ವಿವಾದ]
ಪಂಗನಾಮ,
ಬಾಸು
ಅದೇ
ಹಳೇ
ಕಥೆ
ಹಾಗೂ
ನೂರನಲವತ್ತಮೂರು
143
ಚಿತ್ರಗಳು
ಈ
ವಾರ
ಪ್ರೇಕ್ಷಕರ
ಮುಂದೆ
ಬರುತ್ತಿವೆ.
ವರಮಹಾಲಕ್ಷ್ಮಿ
ಹಬ್ಬದ
ದಿನ
ಈ
ಚಿತ್ರಗಳು
ತೆರೆಕಾಣುತ್ತಿರುವ
ಕಾರಣ
ಲಕ್ಷ್ಮಿ
ಕೈಹಿಡಿಯುತ್ತಾಳೋ
ಅಥವಾ
ಪ್ರೇಕ್ಷಕರ
ಪ್ರಭುಗಳು
'ಪಂಗನಾಮ'
ಹಾಕುತ್ತಾರೋ
ಎಂಬುದನ್ನು
ಕಾಲವೇ
ನಿರ್ಧರಿಸಲಿದೆ.

ಈ ವಾರ ತೆರೆಗೆ ಬರುತ್ತಿರುವ ಪಂಗನಾಮ
ಎಂಟರ್ ಟೈನ್ಮೆಂಟ್ ಗುರು ಲಾಂಛನದಲ್ಲಿ ಕಥೆ-ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ನೀಡಿರುವ ಗುರು ಅವರ 'ಪಂಗನಾಮ' ಚಿತ್ರವು ಈ ವಾರ ಬಿಡುಗಡೆ. ಚಿತ್ರದ ಛಾಯಾಗ್ರಹಣ- ಕೆ.ಎಂ. ವಿಷ್ಣುವರ್ಧನ್, ಸಂಗೀತ-ಆದಿತ್ಯ ಪಂಡಿತ್-ಸಾಧುಕೋಕಿಲ, ಸಂಕಲನ-ನಾಗೇಂದ್ರ ಅರಸ್, ನೃತ್ಯ-ಸದಾ-ರಘು, ಸಾಹಸ-ವೆಂಕಟ್, ನಿರ್ವಹಣೆ-ಸೋಮಶೇಖರ್, ತಾರಾಗಣದಲ್ಲಿ- ಗುರು, ಸಂಜನಾ ಪ್ರಕಾಶ್, ಸಾಧುಕೋಕಿಲ, ದೊಡ್ಡಣ್ಣ, ಸುಂದರ್‍ರಾಜ್, ಕುರಿ ಪ್ರತಾಪ್, ಬಿರಾದರ್, ಉಮೇಶ್, ಪದ್ಮಜಾ ರಾವ್, ಲಿಟಿ ಆಚಾರ್ಯ, ಮುಂತಾದವರಿದ್ದಾರೆ.

ಬಾಸು ಅದೇ ಹಳೇ ಕಥೆ ಈ ವಾರ ತೆರೆಗೆ
ಉತ್ಸಾಹಿ ಯುವಕ ಶಾನ್, ಹಿರಿಯ ನಿರ್ದೇಶಕ ಎ ಆರ್ ಬಾಬು ಪುತ್ರ ಅವರ ಚೊಚ್ಚಲ ನಿರ್ದೇಶನದ ಚಿತ್ರ `ಬಾಸು ಅದೇ ಹಳೆ ಕಥೆ' ಈ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಮಂಡಳಿ ಇಂದ 'ಯು-ಎ' ಅರ್ಹತಾ ಪತ್ರವನ್ನು ಪಡೆದು ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಉತ್ಸಾಹದಲ್ಲಿದೆ.

3 ನಿಮಿಷದಲ್ಲೆ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ
ಶ್ರೀಸಾಸ್ಥ ಮೂವಿ ಮೇಕರ್ ಅಡಿಯಲ್ಲಿ ಸುಧೀರ್ ಗೌಡ ಅವರು ತಯಾರಿಸಿರುವ ಮೊದಲ ಚಿತ್ರವಿದು. ಏಳು ನಿಮಿಷ ತೆರೆಯ ಮೇಲೆ ಯಾರು ಕಾಣಿಸಿಕೊಳ್ಳುವುದಿಲ್ಲ. 3 ನಿಮಿಷದಲ್ಲೆ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ ನಿರ್ದೇಶಕ ಹಾಗೂ ಚಿತ್ರದ ನಟರು ಆಗಿರುವ ಶಾನ್. ಇದಾದ ಮೇಲೆ ಎರಡು ಗಂಟೆ ಕಥೆಯ ಓಟ ನೀವು ನೋಡಬಹುದು.

ಭಿನ್ನ ಪಾತ್ರದಲ್ಲಿ ಶೋಭಿನಾ
ನಾಯಕಿ ಶೋಭಿನಾ ಅವರು ಈ ಹಿಂದೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಆರ್ ಬಾಬ್ಬಿ ಅವರು ಎರಡು ಹಾಡುಗಳ ರಾಗ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಕೆ ಜೆ ಯೇಸುದಾಸ್ ಅವರು ಹಾಡಿದ್ದಾರೆ. ಗಣೇಶ್ ಈ ಚಿತ್ರದ ಛಾಯಾಗ್ರಾಹಕರು.

ಈ ವಾರ ತೆರೆಗೆ ಬರುತ್ತಿರುಬ ಭಿನ್ನ ಚಿತ್ರ '143'
ಚಂದ್ರಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ `143' ನೂರನಲವತ್ಮೂರು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಡ್ರಮ್ಮರ್ ದೇವ ಅವರು ಹಿನ್ನಲ್ಲೆ ಸಂಗೀತ
ಚಿತ್ರದ ನಾಯಕರಾಗಿರುವ ಚಂದ್ರಕಾಂತ್ '143' ಸಿನಿಮಾದ ನಿರ್ಮಾಪಕರು ಕೂಡ. ಕವಿತಾ ಬಿಸ್ಟ್ ಈ ಚಿತ್ರದ ನಾಯಕಿ. ವಿನು ಮನಸು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಡ್ರಮ್ಮರ್ ದೇವ ಅವರು ಹಿನ್ನಲ್ಲೆ ಸಂಗೀತ ನೀಡಿದ್ದಾರೆ. ರಾಜಶೇಖರ್(ತಿಮ್ಮಾಪುರ) ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಚಾಮರಾಜ್, ಹೈಟ್ ಮಂಜು ಹಾಗೂ ರಂಜಿತ್ ನೃತ್ಯ ನಿರ್ದೇಶನ ಹಾಗೂ ಹೊನ್ನರಾಜ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.