»   » ಪಂಕಜ್ 'ರಣ'ಕಹಳೆಗೆ ಸೆನ್ಸಾರ್ ರೆಡ್ ಸಿಗ್ನಲ್

ಪಂಕಜ್ 'ರಣ'ಕಹಳೆಗೆ ಸೆನ್ಸಾರ್ ರೆಡ್ ಸಿಗ್ನಲ್

Posted By:
Subscribe to Filmibeat Kannada
Pankaj Ambarish
ನಿವೃತ್ತಿ ಘೋಷಿಸಿರುವ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಚಿತ್ರ ರಣಕ್ಕೆ ಭಾರೀ ವಿಘ್ನವೊಂದು ಎದುರಾಗಿದೆ. "ನಮ್ಮಿಂದ ಸೆನ್ಸಾರ್ ಓಕೆ ಮಾಡಿ ಸರ್ಟಿಫಿಕೇಟ್ ಕೊಡಲು ಸಾಧ್ಯವೇ ಇಲ್ಲ, ನೀವು ಬೇಕಾದರೆ ಮುಂದಿನ ಕ್ರಮಕ್ಕೆ ಮುಂದಾಗಬಹುದು" ಹೀಗೆಂದು ಸ್ವತಃ ಸೆನ್ಸಾರ್ ಮಂಡಳಿಯೇ ಕೈಚೆಲ್ಲಿ ಕೂತಿದೆ. ಈ ರೀತಿ ರಣಕ್ಕೆ ಸೆನ್ಸಾರ್ ರಣಕಹಳೆ ಮೊಳಗಿದೆ. ಸಂಪೂರ್ಣ ಸಾಹಸ ಪ್ರಧಾನ ಚಿತ್ರವೀಗ ಸೆನ್ಸಾರ್ ಮಂಡಳಿ ಮುಂದೆ ಕೈಕಟ್ಟಿ ಕುಳಿತಿದೆ.

ಹಾಗಿದ್ದರೆ ರಣ ಚಿತ್ರದಲ್ಲಿ ಅಂಥದ್ದೇನಿದೆ ಎಂದರೆ ಸೆನ್ಸಾರ್ ಮಂಡಳಿ ಪ್ರಕಾರ 'ರಣ ಚಿತ್ರದಲ್ಲಿ ಬರೀ ರಣಕಹಳೆ. ಇಡೀ ಸಿನಿಮಾ ರಕ್ತದ ಮಳೆ ಸುರಿಸುತ್ತದೆ. ಎಲ್ಲಾ ದೃಶ್ಯಗಳಲ್ಲಿ ಕೇವಲ ರಕ್ತದೋಕುಳಿ. ಬರೋಬ್ಬರಿ ಏಳು ಹತ್ಯೆಗಳು, ಭಾರೀ ಬುಲೆಟ್ ಸದ್ದುಗಳು. ಇಂತಹ ಚಿತ್ರಕ್ಕೆ ಸೆನ್ಸಾರ್ 'ಪ್ರಮಾಣ ಪತ್ರ' ಕೊಡಲು ನಮ್ಮಿಂದಂತೂ ಸಾಧ್ಯವಿಲ್ಲ" ಎಂದು ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೈ ಎತ್ತಿದೆ.

ಈಗ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಆಯ್ಕೆ ರಿವೈಸ್ ಕಮಿಟಿ ಮುಂದೆ ಹೋಗಿದ್ದಾರೆ. ಚಿತ್ರ ಟ್ರಿಬ್ಯುನಲ್ ಗೆ ಹೋಗಿದೆ. ಅಲ್ಲಿಂದ ಉತ್ತರ ಬರುವವರೆಗೆ ಕಾಯಲೇಬೇಕು. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಬೇರೆ ಇದ್ದಾರೆ. ಸುಪ್ರೀತಾ, ಸೋನಿಯಾ ಗೌಡ ಎಂಬಿಬ್ಬರು ನಾಯಕಿಯರೂ ಇದ್ದಾರೆ. ರಣ ಚಿತ್ರವನ್ನು ಮುಗಿಸಿದ್ದಲ್ಲದೇ ಅದೇ ಪಂಕಜ್ ಗೆ 'ರೆಡ್' ಎಂಬ ಇನ್ನೊಂದು ಚಿತ್ರವನ್ನೂ ಘೋಷಿಸಿ ಅದನ್ನೂ ಚಿತ್ರೀಕರಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ವಿವಾದದಿಂದಾದರೂ ಚಿತ್ರಕ್ಕೆ ಲಾಭ ಆಗಬಹುದೋ ಏನೋ! ಪಂಕಜ್ ಸದ್ಯಕ್ಕೆ ಸಾಲು ಸಾಲು ಚಿತ್ರಗಳ ಸೋಲಿನ ಸರದಾರ. ರಣ ಮೂಲಕವಾದರೂ ಗೆಲ್ಲುವ ಪಣ ತೊಟ್ಟಿದ್ದಾರೆ. ಆದರೆ ಅಷ್ಟರಲ್ಲೇ ದೊಡ್ಡ ವಿಘ್ನವೊಂದು ಬಂದು ಕೂತಿದೆ. ಚಿತ್ರದಲ್ಲಿರುವ ಅದೆಷ್ಟು ಹತ್ಯೆಗಳನ್ನು ಕಿತ್ತು ಬೀಸಾಕಬೇಕೋ ಏನೋ! ಎಲ್ಲಾ ಹೋದರೆ ಆಕ್ಷನ್ ಬೇಸ್ಡ್ ಚಿತ್ರದ ಹೆಸರಿಗೆ ಬೆಲೆಯಾದರೂ ಎಲ್ಲಿರುತ್ತೆ ಹೇಳಿ...? (ಒನ್ ಇಂಡಿಯಾ ಕನ್ನಡ)

English summary
Pankaj Upcoming Movie Rana did not get Sensor Certificate. According to the Sensor Board, the movie has lots of Bloodshed and Murders in it. So, now this movie handovers to Tribunal. 
 
Please Wait while comments are loading...