twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕಿ ಹರಿಣಿ ತಂದೆ ಅನುಮಾನಾಸ್ಪದ ಸಾವಿಗಿದೆ 390 ಕೋಟಿ ಸಾಲದ ಲಿಂಕ್!

    |

    ತೆಲುಗು-ತಮಿಳು ಭಾಷೆಯ ಜನಪ್ರಿಯ ಗಾಯಕಿ ಹರಿಣಿ ತಂದೆ ಎಕೆ ರಾವ್ ಕೆಲ ದಿನಗಳ ಹಿಂದಷ್ಟೆ ಯಲಹಂಕದ ರೈಲ್ವೆ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದರು.

    ರೈಲು ಹಳಿಗಳ ಮೇಲೆ ಶವ ದೊರೆತಿರುವ ಕಾರಣ ಇದು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು, ಆದರೆ ಎಕೆ ರಾವ್ ಕುತ್ತಿಗೆ ಹಾಗೂ ಕೈಯ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾದ ಕಾರಣ ಇದು ಕೊಲೆಯೆಂದು ಅನುಮಾನ ವ್ಯಕ್ತಪಡಿಸಲಾಗಿದೆ.

    ಹರಿಣಿ ಕುಟುಂಬದವರು ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಆದರೆ ಶವ ದೊರೆತ ಮೇಲೆ ಅವರು ರೈಲ್ವೆ ಪೊಲೀಸರ ಮುಂದೆ ಹಾಜರಾಗಿದ್ದು, ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವರ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಈ ಸಾವಿನ ಹಿಂದೆ ನೂರಾರು ಕೋಟಿ ರೂಪಾಯಿ ಹಣದ ನಂಟಿರುವುದು ಪತ್ತೆಯಾಗಿದೆ.

    Police Investigating Singer Harinis Father Death Case

    ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಓ ಆಗಿದ್ದ ಹರಿಣಿ ತಂದೆ ಎಕೆ ರಾವ್, ತಮ್ಮ ಪರಿಚಯದ ಇಬ್ಬರು ಉದ್ಯಮಿಗಳಿಗೆ ನೂರಾರು ಕೋಟಿ ರುಪಾಯಿ ಸಾಲ ಕೊಡಿಸಲು ಮುಂದಾಗಿದ್ದರು. ಉದ್ಯಮಿ ಗಿರೀಶ್ ಹಾಗೂ ಪಣಿತರನ್ ಎಂಬಾತನಿಗೆ ಹಾಗೂ ಇನ್ನೂ ಒಬ್ಬ ವ್ಯಕ್ತಿಗೆ ಎಕೆ ರಾವ್ ಸಾಲ ಕೊಡಿಸಲು ಮುಂದಾಗಿದ್ದರು. ಅದೂ ಬರೋಬ್ಬರಿ 390 ಕೋಟಿ ರುಪಾಯಿ!

    ಡ್ಯಾನಿಯಲ್ ಆರ್ಮ್‌ಸ್ಟ್ರಾಂಗ್ ಎಂಬಾತನಿಂದ ಗಿರೀಶ್‌ಗೆ 150 ಕೋಟಿ ರುಪಾಯಿ ಸಾಲ, ಪರಿಣತರನ್‌ಗೆ 240 ಕೋಟಿ ರುಪಾಯಿ ಸಾಲ ಕೊಡಿಸಲು ಮುಂದಾಗಿದ್ದರು. ಸಾಲ ನೀಡಲು ಮುಂಗಡವಾಗಿ ಡ್ಯಾನಿಯಲ್ ಆರ್ಮ್‌ಸ್ಟ್ರಾಂಗ್ 5.90 ಕೋಟಿ ರುಪಾಯಿ ಬಡ್ಡಿ ಹಣವನ್ನು ಪಡೆದುಕೊಂಡಿದ್ದ. ಈ ಮೊತ್ತವನ್ನು ಗಿರೀಶ್ ಹಾಗೂ ಪಣಿತರನ್ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಡ್ಯಾನಿಯಲ್‌ ಆರ್ಮ್‌ಸ್ಟ್ರಾಂಗ್ ನಾಪತ್ತೆಯಾಗಿದ್ದ.

    ಇದರಿಂದಾಗಿ ಡ್ಯಾನಿಯಲ್, ವಿವೇಕಾನಂದ ಹಾಗೂ ರಾಘವ ವಿರುದ್ಧ ಸುದ್ದಗುಂಟೆಪಾಳ್ಯದಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದ ವಿಚಾರವಾಗಿ ಹರಿಣಿ ತಂದೆ ಎಕೆ ರಾವ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾಗಿದ್ದ ಮರುದಿನವೇ ಎಕೆ ರಾವ್ ನಿಧನರಾಗಿದ್ದಾರೆ.

    ನವೆಂಬರ್ 23ರಂದು ಯಲಹಂಕ ರೈಲು ನಿಲ್ದಾಣದ ಬಳಿ ಎಕೆ ರಾವ್ ಶವ ದೊರೆತಿದೆ. ಅವರ ಶವದ ಸಮೀತ ಚಾಕು ಪತ್ತೆಯಾಗಿದೆ. ಕೈ ಹಾಗೂ ಕುತ್ತಿಗೆಯ ಭಾಗದಲ್ಲಿ ಚಾಕುವಿನಿಂದ ಇರಿದ ಗುರುತುಗಳಿವೆ. ಜೊತೆಗೆ ಅವರ ಶವದ ಬಳಿ ದೂರು ಪ್ರತಿಯೊಂದು, ಕೆಲವು ದಾಖಲೆಗಳು, ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಎಕೆ ರಾವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಪಡೆದಿದ್ದು, ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೊ ಗೊತ್ತಾಗುತ್ತದೆ. ಮೃತ ಎಕೆ ರಾವ್ ಅವರು ಸುಜನಾ ಫೌಂಡೇಶನ್ ಸಂಸ್ಥೆಯಲ್ಲಿ ಸಿಇಓ ಆಗಿ ಕೆಲಸ ಮಾಡುತ್ತಿದ್ದರು. ಜನಪ್ರಿಯ ಸುಜನಾ ಚೌಧರಿ ಈ ಸಂಸ್ಥೆಯನ್ನು ನಡೆಸುತ್ತಾರೆ.

    ಹರಿಣಿ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿದ್ದಾರೆ. ನೂರಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಆರಂಭದ ಸಿನಿಮಾಗಳಲ್ಲಿ ಹಲವು ಹಾಡುಗಳನ್ನು ಹಾಡಿರುವ ಹರಿಣಿ, ಮಣಿಶರ್ಮಾ, ಹ್ಯಾರಿಸ್ ಜಯರಾಜ್, ದೇವಿಶ್ರೀಪ್ರಸಾದ್, ಎಸ್ ತಮನ್ ಇನ್ನೂ ಹಲವು ಜನಪ್ರಿಯ ಸಂಗೀತ ನಿರ್ದೇಶಕರಿಗಾಗಿ ಹಾಡುಗಳನ್ನು ಹಾಡಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ತಮಿಳಿನಲ್ಲಿಯೂ ನೂರಾರು ಹಿಟ್ ಗೀತೆಗಳನ್ನು ಹರಿಣಿ ನೀಡಿದ್ದಾರೆ.

    English summary
    Police investigating singer Harini's father AK Rao death case. Police found that death has related to 390 crore rs loan money.
    Saturday, November 27, 2021, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X