For Quick Alerts
  ALLOW NOTIFICATIONS  
  For Daily Alerts

  ಸಿಎಂ ಸಿನಿಮಾ ನೋಡಿದ್ರು, ಮಾಳವಿಕಾ ಮೇಡಂ ಮಜಾ ಮಾಡ್ತಿದ್ದಾರೆ ಅಂದ್ರು!

  By Bharath Kumar
  |

  ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಬಾಹುಬಲಿ-2' ಚಿತ್ರವನ್ನ ಕುಟುಂಬದ ಸಮೇತ ವೀಕ್ಷಿಸಿದ್ದರು. ಅದೇ ದಿನ ಅಪೂರ್ವ ಕಾಸರವಳ್ಳಿ ನಿರ್ದೇಶನದ 'ನಿರುತ್ತರ' ಚಿತ್ರವನ್ನ ನೋಡಿದ್ದರು. ಹೀಗೆ, ಹಿಂದಿಂದೆನೇ ಸಿನಿಮಾ ನೋಡಿದ್ದಕ್ಕೆ ಮುಖ್ಯಮಂತ್ರಿಗಳ ವಿರುದ್ಧ ಟೀಕೆಗಳ ಪ್ರಹಾರವೇ ಕೇಳಿ ಬಂತು.[ಎಲ್ಲ ಬಿಟ್ಟು ಸಿ.ಎಂ ಸಾಹೇಬ್ರು 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದ್ಯಾಕೆ.?]

  ಇದೀಗ, ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಮುಖ್ಯಮಂತ್ರಿಗಳ ವಿರುದ್ಧ ಸಮರ ಸಾರಿದ್ದಾರೆ. ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಪೋಸ್ಟ್ ಮಾಡುವುದರ ಮೂಲಕ ಸಿದ್ದರಾಮಯ್ಯ ಅವರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....

  ರಾಜ್ಯದಲ್ಲಿ ಬರಗಾಲ: ದೊರೆಗೆ ಮಜಾ

  ರಾಜ್ಯದಲ್ಲಿ ಬರಗಾಲ: ದೊರೆಗೆ ಮಜಾ

  ಕರ್ನಾಟಕ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ನೀರಿಲ್ಲದೇ ರೈತರು ಕಂಗಾಲಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಗಳು ಸಾಲು ಸಾಲು ಸಿನಿಮಾಗಳನ್ನ ನೋಡಿ ಮಜಾ ಮಾಡುತ್ತಿದ್ದಾರೆಂದು ನಟಿ ಹಾಗೂ ರಾಜಕಾರಣಿ ಮಾಳವಿಕಾ ವಿರೋಧ ವ್ಯಕ್ತಪಡಿಸಿದ್ದಾರೆ.

  1050 ಕೊಟ್ಟು ಸಿನಿಮಾ ನೋಡಿದ್ದು ತಪ್ಪು!

  1050 ಕೊಟ್ಟು ಸಿನಿಮಾ ನೋಡಿದ್ದು ತಪ್ಪು!

  ರೈತರು ಸಂಕಷ್ಟದಲ್ಲಿರುವಾಗ 1050 ರೂಪಾಯಿ ಕೊಟ್ಟು ದುಬಾರಿ ವೆಚ್ಚದಲ್ಲಿ 'ಬಾಹುಬಲಿ-2' ಸಿನಿಮಾ ನೋಡಿದ್ದಾರೆ. ಸಿಎಂಗೆ ಮತ್ತು ಅವರ ಕುಟುಂದವರಿಗೆ ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಎಂಬುದು ಮುಖ್ಯವಾಯಿತಾ? ಎಂದು ಮಾಳವಿಕಾ ಪ್ರಶ್ನಿಸಿದ್ದಾರೆ.[ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.!]

  200 ಆದೇಶ ನೀಡಿ 1000 ಕೊಟ್ಟ ಸಿಎಂ!

  200 ಆದೇಶ ನೀಡಿ 1000 ಕೊಟ್ಟ ಸಿಎಂ!

  ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ನೀತಿಯನ್ನ ಆದೇಶ ಮಾಡಿದ್ದ ಸಿಎಂ ತಾವೇ 1050 ರೂಪಾಯಿ ಕೊಟ್ಟು ಸಿನಿಮಾ ನೋಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆದೇಶ ಮಾಡಿ ದಿನಗಳೇ ಕಳೆದರು ಇನ್ನು ಟಿಕೆಟ್ ದರ ಮಾತ್ರ ಕಮ್ಮಿಯಾಗಿಲ್ಲ.[ಮೇ ತಿಂಗಳಿಂದ 'ಮಲ್ಟಿಪ್ಲೆಕ್ಸ್'ಗಳಲ್ಲಿ 200 ರೂ ಟಿಕೆಟ್ ಕಡ್ಡಾಯ: ಸಿದ್ದರಾಮಯ್ಯ]

  'ಬಾಹುಬಲಿ' ಜೊತೆಗೆ 'ನಿರುತ್ತರ' ವೀಕ್ಷಣೆ

  'ಬಾಹುಬಲಿ' ಜೊತೆಗೆ 'ನಿರುತ್ತರ' ವೀಕ್ಷಣೆ

  ದುಬಾರಿ ವೆಚ್ಚದಲ್ಲಿ 'ಬಾಹುಬಲಿ-2' ಸಿನಿಮಾ ನೋಡಿದ್ದ ಮುಖ್ಯಮಂತ್ರಿಗಳು ಅದೇ ದಿನ ಕನ್ನಡ ಚಿತ್ರ 'ನಿರುತ್ತರ' ಚಿತ್ರವನ್ನ ವೀಕ್ಷಿಸಿದ್ದಾರೆ. ಹೀಗೆ, ಹಿಂದಿಂದೆನೆ ಸಿನಿಮಾ ನೋಡುತ್ತಾ ರಾಜ್ಯದ ದೊರೆ ಮಜಾ ಮಾಡುತ್ತಿದ್ದಾರೆ ಎಂದು ಮಾಳವಿಕಾ ಟೀಕಿಸಿದ್ದಾರೆ.

  'ರಾಜಕುಮಾರ' ನೋಡಿದ್ದ ಸಿದ್ದು ಸಾಹೇಬ್ರು

  'ರಾಜಕುಮಾರ' ನೋಡಿದ್ದ ಸಿದ್ದು ಸಾಹೇಬ್ರು

  'ಬಾಹುಬಲಿ-2' ಹಾಗೂ 'ನಿರುತ್ತರ' ಸಿನಿಮಾ ನೋಡುವುದಕ್ಕೂ ಮುಂಚೆ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಡಿದ್ದರು.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

  ಸಿಎಂ ಹೆಚ್ಚಾಗಿದ್ಯಾ ಸಿನಿಮಾ ಗೀಳು?

  ಸಿಎಂ ಹೆಚ್ಚಾಗಿದ್ಯಾ ಸಿನಿಮಾ ಗೀಳು?

  ಅದ್ಯಾಕೋ ಸಿಎಂ ಸಿದ್ದುಗೆ ಸಿನಿಮಾಗಳ ಮೇಲೆ ಒಲವು ಹೆಚ್ಚಾಗಿದೆ ಅನ್ಸುತ್ತೆ. ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಬಿಡುವು ಮಾಡಿಕೊಂಡು ಬ್ಯಾಕ್ ಟು ಬ್ಯಾಕ್ ಸಿನಿಮಾ ನೋಡುತ್ತಿದ್ದಾರೆ. ಇದು ಕನ್ನಡ ಸಿನಿಮಾಗಳ ಮೇಲೆ ಅಭಿಮಾನನಾ ಅಥವಾ ಮನರಂಜನೆ ದೃಷ್ಟಿನಾ ಗೊತ್ತಿಲ್ಲ. ಆದ್ರೆ, ಹೀಗೆ, ಸಾಲು ಸಾಲು ಸಿನಿಮಾ ನೋಡುತ್ತಿರುವುದು ಮಾತ್ರ ಹಲವು ಟೀಕೆಗಳಿಗೆ ಗುರಿಯಾಗಿದೆ.

  ಮಾಳವಿಕಾ ಅವರ ಕಾಮೆಂಟ್ ಇದು!

  ಮಾಳವಿಕಾ ಅವರ ಕಾಮೆಂಟ್ ಇದು!

  ರೈತರು ಬರಗಾಲದಲ್ಲಿರುವಾಗ, ಮುಖ್ಯಮಂತ್ರಿಗಳು 1050 ರೂಪಾಯಿ ಟಿಕೆಟ್ ಕೊಟ್ಟು 'ಬಾಹುಬಲಿ', 'ನಿರುತ್ತರ' ಸಿನಿಮಾ ನೋಡ್ಕೊಂಡು ಮಜಾ ಮಾಡ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

  English summary
  Kannada Actress and Politician Malavika Avinash Post a Comment on CM Siddaramaiah About CM Watched Baahubali-2 Movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X