twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆ ಸಿನಿಮಾಗಳಿಂದ ಮತ್ತೊಮ್ಮೆ ಕನ್ನಡ ಭಾಷೆಯ ನಿರ್ಲಕ್ಷ್ಯ

    |

    ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಬಂದಾಗಿನಿನಂದಲೂ ಸಿನಿಮಾಗಳು ಐದಾರು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತಿವೆ, ಯಶಸ್ಸನ್ನೂ ಗಳಿಸುತ್ತಿವೆ. ಪ್ಯಾನ್ ಇಂಡಿಯಾ ಪದ್ಧತಿಯಿಂದಾಗಿ ಪರಭಾಷೆಯ ಸಿನಿಮಾಗಳನ್ನೂ ಸಹ ಮಾತೃಭಾಷೆಯಲ್ಲಿಯೇ ನೋಡಲುವ ಅನುಕೂಲ ಸಿನಿಪ್ರಿಯರಿಗೆ ಲಭ್ಯವಾಗುತ್ತಿದೆ.

    ಪ್ಯಾನ್ ಇಂಡಿಯಾ ಸಿನಿಮಾ ಕಲ್ಚರ್‌ನಿಂದ ಇತರ ರಾಜ್ಯದವರಿಗೆ ಅನುಕೂಲವಾಗಿದೆಯಾದರೂ ಕರ್ನಾಟಕದ ಸಿನಿಮಾ ಪ್ರೇಕ್ಷಕರಿಗೆ ಮಾತ್ರ ಮಾತೃಭಾಷೆಯ ಲಾಭ ಧಕ್ಕುತ್ತಿಲ್ಲ. ಇತರ ರಾಜ್ಯಗಳ ಸಿನಿ ಪ್ರೇಕ್ಷಕರು ಪರಭಾಷೆಯ ಸಿನಿಮಾಗಳನ್ನು ತಮ್ಮ ಮಾತೃಭಾಷೆಯಲ್ಲಿ ನೋಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೂಲ ಭಾಷೆಯಲ್ಲಿಯೇ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

    ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗದೆ ಮೂಲ ಭಾಷೆಯಲ್ಲಿಯೇ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ. ಅಥವಾ ಕನ್ನಡಕ್ಕೆ ಡಬ್ ಆದರೂ ನಾಮ್‌ ಕೆ ವಾಸ್ತೆ ಒಂದು ಚಿತ್ರಮಂದಿರ ಹೆಚ್ಚೆಂದರೆ ಎರಡು ಚಿತ್ರಮಂದಿರದಲ್ಲಿ ಮಾತ್ರವೇ ಬಿಡುಗಡೆ ಆಗಿ ನಿರಾಸೆ ಮೂಡಿಸುತ್ತಿವೆ. ಇದೀಗ ಈ ಕುಕೃತ್ಯವನ್ನು ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮಾಡಿದೆ.

    ಕನ್ನಡದಲ್ಲಿ ನಾಮ್‌ ಕೆ ವಾಸ್ತೆ ಬಿಡುಗಡೆ

    ಕನ್ನಡದಲ್ಲಿ ನಾಮ್‌ ಕೆ ವಾಸ್ತೆ ಬಿಡುಗಡೆ

    ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತಮಿಳು ಸೇರಿದಂತೆ ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಿಗೆ ಡಬ್ ಆಗಿದೆ. ಸಿನಿಮಾದ ಟ್ರೈಲರ್ ಸಹ ಈ ಐದೂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಆಂಧ್ರ-ತೆಲಂಗಾಣಗಳಲ್ಲಿ ತೆಲುಗಿನಲ್ಲಿ, ಮುಂಬೈ ಹಾಗೂ ಇನ್ನಿತರೆ ಉತ್ತರ ಭಾರತದಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿರುವ ಸಿನಿಮಾ ಕರ್ನಾಟಕದಲ್ಲಿ ಮಾತ್ರ ಕನ್ನಡದಲ್ಲಿ ನಾಮ್‌ ಕೆ ವಾಸ್ತೆ ಎಂಬಂತೆ ಒಂದೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ.

    'ಪೊನ್ನಿಯಿನ್ ಸೆಲ್ವನ್' ಕನ್ನಡ ಆವೃತ್ತಿಗೆ ಎರಡನೇ ಶೋ!

    'ಪೊನ್ನಿಯಿನ್ ಸೆಲ್ವನ್' ಕನ್ನಡ ಆವೃತ್ತಿಗೆ ಎರಡನೇ ಶೋ!

    ಬೆಂಗಳೂರಿನ ಕೇವಲ ಒಂದು ಚಿತ್ರಮಂದಿರದಲ್ಲಿ ಎರಡು ಶೋಗಳನ್ನಷ್ಟೆ 'ಪೊನ್ನಿಯಿನ್ ಸೆಲ್ವನ್'ನ ಕನ್ನಡ ಆವೃತ್ತಿಗೆ ನೀಡಲಾಗಿದೆ. ಅದೇ ತೆಲುಗು, ತಮಿಳು ಹಾಗೂ ಹಿಂದಿ ಆವೃತ್ತಿಗೆ ಹಲವು ಚಿತ್ರಮಂದಿರಗಳು, ಶೋಗಳು ಲಭಿಸಿವೆ. ಬೆಂಗಳೂರಿನಲ್ಲಿ ಕೇವಲ ನಾಮ್‌ ಕೆ ವಾಸ್ತೆ ಎಂಬಂತೆ ಕನ್ನಡ ಆವೃತ್ತಿಯ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಸಿನಿಮಾ ಪ್ರೇಮಿಗಳನ್ನು ಚಿತ್ರತಂಡ ನಿರ್ಲಕ್ಷಿಸಿದೆ ಎಂಬುದಕ್ಕೆ ಇದು ಬಹು ಉತ್ತಮ ಸಾಕ್ಷಿ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಕೇವಲ ಎರಡು ಶೋಗಳಲ್ಲಿ ಮಾತ್ರವೇ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಕನ್ನಡ ಆವೃತಿ ಪ್ರದರ್ಶಿಸಲಾಗುತ್ತಿದೆ.

    ಯಾವ ಭಾಷೆಗೆ ಎಷ್ಟು ಚಿತ್ರಮಂದಿರಗಳು

    ಯಾವ ಭಾಷೆಗೆ ಎಷ್ಟು ಚಿತ್ರಮಂದಿರಗಳು

    'ಪೊನ್ನಿಯಿನ್ ಸೆಲ್ವನ್' ಸಿನಿಮಾದ ತೆಲುಗು ಆವೃತ್ತಿಗೆ ಬೆಂಗೂರಿನಲ್ಲಿ ಎಂಟು ಚಿತ್ರಮಂದಿರಗಳನ್ನು ನೀಡಲಾಗಿದ್ದು ಸುಮಾರು 24 ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಹಿಂದಿ ಭಾಷೆಗೆ ಮೂರು ಚಿತ್ರಮಂದಿರಗಳನ್ನು ನೀಡಲಾಗಿದ್ದು, ತಲಾ ಒಂದೊಂದು ಶೋಗಳಂತೆ ದಿನಕ್ಕೆ ಮೂರು ಶೋಗಳನ್ನು ಮಾತ್ರವೇ ನೀಡಲಾಗಿದೆ. ಇನ್ನು ತಮಿಳು ಭಾಷೆಗೆ ಬೆಂಗಳೂರು ಒಂದರಲ್ಲೇ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಸೇರಿ 71 ಚಿತ್ರಮಂದಿರಗಳನ್ನು ನೀಡಲಾಗಿದೆ. ಸೆಪ್ಟೆಂಬರ್ 30 ರಂದು 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ತಮಿಳು ಆವೃತ್ತಿಯ ಸುಮಾರು 350 ಶೋಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿವೆ.

    ಹಲವು ಸಿನಿಮಾಗಳು ಕನ್ನಡ ಪ್ರೇಕ್ಷಕನನ್ನು ನಿರ್ಲಕ್ಷಿಸಿವೆ

    ಹಲವು ಸಿನಿಮಾಗಳು ಕನ್ನಡ ಪ್ರೇಕ್ಷಕನನ್ನು ನಿರ್ಲಕ್ಷಿಸಿವೆ

    ಪ್ಯಾನ್ ಇಂಡಿಯಾ ಸಿನಿಮಾಗಳು ಹೀಗೆ ಬೆಂಗಳೂರಿನಲ್ಲಿ ಕನ್ನಡ ಆವೃತ್ತಿಗಳನ್ನು ಹೆಚ್ಚಿಗೆ ಬಿಡುಗಡೆ ಮಾಡದೇ ಇರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 'ಅಂಟೆ ಸುಂದರಾನಿಕಿ' ಸಿನಿಮಾವನ್ನು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿತ್ತು. 'RRR' ಸಿನಿಮಾದ ಕನ್ನಡ ಆವೃತ್ತಿ ಸಹ ಬಹಳ ಕಡಿಮೆ ಬಿಡುಗಡೆ ಆಗಿತ್ತು. ಹಿಂದಿಯ '83' ಸಿನಿಮಾ ಸಹ ಕನ್ನಡಕ್ಕೆ ಡಬ್ ಆಗಿದ್ದರೂ ಅತ್ಯಂತ ಕಡಿಮೆ ಚಿತ್ರಮಂದಿರಗಳಲ್ಲಿ ಆ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. 'ರಾಧೆ-ಶ್ಯಾಮ್' ಸಿನಿಮಾದ ಕನ್ನಡ ಆವೃತ್ತಿ ಸಹ ಹೆಚ್ಚು ಬಿಡುಗಡೆ ಆಗಿರಲಿಲ್ಲ. ಕನ್ನಡಕ್ಕೆ ಡಬ್ ಮಾಡಿದ್ದರೂ ಕನ್ನಡ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇರುವ ಬಗ್ಗೆ ಅಸಮಾಧಾನ ಹೊರಹಾಕಲಾಗುತ್ತಲೇ ಬರಲಾಗುತ್ತಿದೆ. ಆದರೆ ಪರಭಾಷೆಯ ಸಿನಿಮಾಗಳು ಕನ್ನಡ ಪ್ರೇಕ್ಷಕನನ್ನು ನಿರ್ಲಕ್ಷಿಸುತ್ತಲೇ ಬಂದಿವೆ.

    English summary
    Ponniyin Selvan Tamil movie's Kannada dubbing version releasing only in one theater in Bengaluru. That with only two shows.
    Wednesday, September 28, 2022, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X