twitter
    For Quick Alerts
    ALLOW NOTIFICATIONS  
    For Daily Alerts

    Prakash Raj: ನಾನು ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆ!

    |

    ಪ್ರಕಾಶ್ ರಾಜ್ ಜನಪ್ರಿಯ ನಟ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಿರೂಪಕ ಮತ್ತು ರಾಜಕಾರಣಿ. ಇವರನ್ನು ಬಹುಮುಖ ಪ್ರತಿಭೆ ಎಂದೇ ಕರೆಯಲಾಗುತ್ತದೆ. ಪ್ರಕಾಶ್ ರಾಜ್ ಅವರು ಯಾವುದೊ ಒಂದು ಚಿತ್ರರಂಗ ಅಲ್ಲ. ಭಾರತದ ಬಹುತೇಕ ಚಿತ್ರರಂಗಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಇವರ ಬಗ್ಗೆ ಹೇಳಲು ಕಾರಣ ಇದೆ.

    ಪ್ರಕಾಶ್ ರಾಜ್ ಅವರು ಸಿನಿಮಾ ಮಾತ್ರ ಅಲ್ಲ, ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿ ಆಗಿದ್ದಾರೆ. ರಾಜಕೀಯ ಹೇಳಿಕೆಗಳ ಮೂಲಕ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ. ಈಗ ಪ್ರಕಾಶ್ ರಾಜ್ ಅವರ ಮಾತನಾಡಲು ಕಾರಣ ಅವರು ನೀಡಿರುವ ಹೊಸ ಹೇಳಿಕೆ.

    Prakash Raj: 'ಅಪ್ಪು ಎಕ್ಸ್‌ಪ್ರೆಸ್' ಆರಂಭಿಸಿದ ಪ್ರಕಾಶ್ ರಾಜ್!Prakash Raj: 'ಅಪ್ಪು ಎಕ್ಸ್‌ಪ್ರೆಸ್' ಆರಂಭಿಸಿದ ಪ್ರಕಾಶ್ ರಾಜ್!

    ಹೆಸರಾಂತ ನಟ ಪ್ರಕಾಶ್ ರಾಜ್‌ ಈ ಹಿಂದೆ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇಂತಹ ನಿರ್ಧಾರವನ್ನು ಅವರು ಮಾಡಿದ್ದೇಕೆ. ನಂತರ ಆ ನೋವಿನಿಂದ ಹೊರ ಬಂದಿದ್ದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ...

    ಮಗನ ಸಾವಿನ ನಂತರ ಪ್ರಕಾಶ್ ರಾಜ್ ಆತ್ಮ ಹತ್ಯೆ ನಿರ್ಧಾರ!

    ಮಗನ ಸಾವಿನ ನಂತರ ಪ್ರಕಾಶ್ ರಾಜ್ ಆತ್ಮ ಹತ್ಯೆ ನಿರ್ಧಾರ!

    ನಟ ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ಕುಮಾರಿ ಅವರಿಗೆ ಮೂರು ಮಂದಿ ಮಕ್ಕಳಿದ್ದರು. ಮೇಘನಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಸಿದ್ದು ಎಂಬ ಒಬ್ಬ ಮಗ ಇದ್ದ. ಅದರೆ ದುರದೃಷ್ಟವಶಾತ್ ಮಗ ಸಿದ್ದು ಚಿಕ್ಕವಯಸ್ಸಿನಲ್ಲಿ ನಿಧನ ಹೊಂದಿದ. ಅದೇ ನೊವಿನಿಂದಲೆ ನಟ ಪ್ರಕಾಶ್ ರಾಜ್ ತಾವು ಕೂಡ ಆತ್ಮ ಹತ್ಯೆ ಮಾಡಿಕೊಳ್ಳ ಬೇಕು ಎಂದು ನಿರ್ಧರಿಸಿ ಬಿಟ್ಟಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

    Prakash Raj: ಯಶ್ ಅಭಿಮಾನಿಗಳಿಗೆ ಪ್ರಕಾಶ್ ರಾಜ್‌ರದ್ದೇ ಚಿಂತೆPrakash Raj: ಯಶ್ ಅಭಿಮಾನಿಗಳಿಗೆ ಪ್ರಕಾಶ್ ರಾಜ್‌ರದ್ದೇ ಚಿಂತೆ

    5 ವರ್ಷದ ಮಗ ಸತ್ತಿದ್ದು ಹೇಗೆ?

    5 ವರ್ಷದ ಮಗ ಸತ್ತಿದ್ದು ಹೇಗೆ?

    ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಪುತ್ರ ಸಿದ್ದು 5 ವರ್ಷದವನಿದ್ದಾಗ, ಫಾರ್ಮ್ ಹೌಸ್‌ ಕಟ್ಟಡದಿಂದ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಇದು ನಡೆದಿದ್ದು 2004ರಲ್ಲಿ. ಆಗಲೆ ಪ್ರಕಾಶ್ ರಾಜ್ ತಾವು ಕೂಡ ಈ ಲೋಕ ಬಿಟ್ಟು ಹೂಗಬೇಕು ಎಂದು ನಿರ್ಧಾರಿಸಿ ಆತ್ಮ ಹತ್ಯಗೆ ಮುಂದಾಗಿದ್ದರಂತೆ. ಆದರೆ ತಮ್ಮ ನಿರ್ಧಾರವನ್ನು ಬೇರೆ ಕಾರಣಕ್ಕೆ ಬದಲಿಸಿಕೊಂಡರು.

    ಆತ್ಮ ಹತ್ಯೆ ನಿರ್ಧಾರ ಕೈ ಬಿಟ್ಟಿದ್ದು ಜನರಿಗೆ ಸಹಾಯ!

    ಆತ್ಮ ಹತ್ಯೆ ನಿರ್ಧಾರ ಕೈ ಬಿಟ್ಟಿದ್ದು ಜನರಿಗೆ ಸಹಾಯ!

    ಇನ್ನು ನಟ ಪ್ರಕಾಶ್ ರಾಜ್‌ ತಾವು ಆತ್ಮ ಹತ್ಯೆ ಮಾಡುಕೊಳ್ಳುವ ನಿರ್ಧಾರವನ್ನು ಕೈ ಬಿಡಲು ಕಾರಣ ಜನಸೇವೆ ಎಂದು ಹೇಳಿಕೊಂಡಿದ್ದಾರೆ. ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಲೆಂದು ನಟ ಪ್ರಕಾಶ್ ರಾಜ್ ತಮ್ಮ ಆತ್ಮ ಹತ್ಯೆ ನಿರ್ಧಾರ ಕೈ ಬಿಟ್ಟು, ಗ್ರಾಮಗಳನ್ನು ದತ್ತು ಪಡೆದು ಜನರಿಗೆ ಸಹಾಯ ಹಸ್ತ ಚಾಕಿದ್ದಾರೆ. ಪ್ರಕಾಶ್ ರಾಜ್ ಸಿನಿಮಾ, ರಾಜಕೀಯ ಬಿಟ್ಟು ತಮ್ಮ ಹಲವು ಸಮಾಜಮುಖಿ ಕಾರ್ಯಗಳ ಮೂಲ ಗುರುತಿಸಿಕೊಂಡಿದ್ದಾರೆ.

    Prakash Raj: 'ದಿ ಕಾಶ್ಮೀರ್ ಫೈಲ್ಸ್' ಬಳಿಕ ಈ ಸಿನಿಮಾಗಳು ಯಾವಾಗ ಎಂದ ಪ್ರಕಾಶ್ ರಾಜ್?Prakash Raj: 'ದಿ ಕಾಶ್ಮೀರ್ ಫೈಲ್ಸ್' ಬಳಿಕ ಈ ಸಿನಿಮಾಗಳು ಯಾವಾಗ ಎಂದ ಪ್ರಕಾಶ್ ರಾಜ್?

    ಪುತ್ರನ ನಿಧನದ ಬಳಿಕ ಎರಡನೇ ಮದುವೆ!

    ಪುತ್ರನ ನಿಧನದ ಬಳಿಕ ಎರಡನೇ ಮದುವೆ!

    ಪ್ರಕಾಶ್ ರಾಜ್ ಅವರು ನಟಿ ಲಲಿತಾ ಕುಮಾರಿ ಅವರನ್ನು 1994 ರಲ್ಲಿ ವಿವಾಹವಾದರು. ನಂತರ ಅವರ ಪುತ್ರ ನಿಧನ ಹೊಂದಿದ ಬಳಿಕಾ 2009 ರಲ್ಲಿ ವಿಚ್ಛೇದನ ಪಡೆದು ಮೊದಲ ಪತ್ನಿಯಿಂದ ದೂರಾಗಿದ್ದಾರೆ. 24 ಆಗಸ್ಟ್ 2010 ರಂದು ಪ್ರಕಾಶ್ ರಾಜ್ ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರೊಂದಿಗೆ ವಿವಾಹ ಆಗಿದ್ದಾರೆ. ಈ ದಂಪತಿಗೆ 2015ರಲ್ಲಿ ಗಂಡು ಮಗು ಜನಿಸಿದೆ. ಮಗನಿಗೆ ವೇದಾಂತ್ ಎಂದು ನಾಮಕರಣ ಮಾಡಿದ್ದಾರೆ.

    ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

    English summary
    Prakash Raj Decide once decided to end his life after his son's death, But change his decision later,
    Tuesday, March 29, 2022, 17:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X