»   » 'ದಾಸ್ವಾಳ' ಕಣ್ಣಿಗೊತ್ತಿ ಕಿವಿಗಿಟ್ಟುಕೊಳ್ಳುವ ಸಮಯ

'ದಾಸ್ವಾಳ' ಕಣ್ಣಿಗೊತ್ತಿ ಕಿವಿಗಿಟ್ಟುಕೊಳ್ಳುವ ಸಮಯ

Posted By:
Subscribe to Filmibeat Kannada

ದಸರಾ ಹಬ್ಬಕ್ಕೆ ಜೋಗಯ್ಯ ಪ್ರೇಮ್ ಎಲ್ಲರಿಗೂ 'ದಾಸ್ವಾಳ' ಕೊಡಲು ಬರುತ್ತಿದ್ದಾರೆ. ಈ ದಾಸ್ವಾಳ ಗಿಡಕ್ಕೆ ನೀರೆದು ಗೊಬ್ಬರ ಹಾಕಿ ಪೋಷಿಸಿರುವವರು ರಕ್ಷಿತಾ ಪ್ರೇಮ್ ಹಾಗೂ ಅಣಜಿ ನಾಗರಾಜ್. ಈಗದು ಅರಳಿ ನಿಂತಿದೆ. ಇದೇ ಅಕ್ಟೋಬರ್ 11ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ.

ಈಗಾಗಲೆ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ. ಪ್ರೇಮ್ ಅಡ್ಡ ಚಿತ್ರದ ಬಳಿಕ ಪ್ರೇಮ್ ಮತ್ತೆ ಬಣ್ಣ ಹಚ್ಚಿರುವ ಚಿತ್ರ. ದಾಸ್ವಾಳ ಚಿತ್ರಕ್ಕೆ ಎಂ.ಎಸ್.ರಮೇಶ್ ಆಕ್ಷನ್ ಕಟ್ ಹೇಳಿದ್ದಾರೆ.


ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಹಲವಾರು ಐತಿಹಾಸಿಕ ತಾಣಗಳನ್ನು ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಒಟ್ಟು ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಈಗ 'ದಾಸ್ವಾಳ' ಅರಳಿ ನಿಂತಿದೆ.

ಈ ಬಾರಿ ಪ್ರೇಮ್ ಗೆ ಜೊತೆಯಾಗಿರುವವರು ಹೇಮಾ ಚೌದರಿ. ರಂಗಾಯಣ ರಘು, ಅವಿನಾಶ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಗುರುಕಿರಣ್ ಅವರ ಸಂಗೀತ, ದಾಸರಿ ಸೀನು ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರೇಮ್ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದೊಂದು ಸಂಬಂಧಗಳ ಸುತ್ತುವ ಕಥೆ. ನಾಲ್ಕು ಮಂದಿಯ ಕಥೆ ಎನ್ನುತ್ತದೆ ಚಿತ್ರತಂಡ. ಪ್ರೇಮ್ ಮತ್ತು ರಂಗಾಯಣ ರಘು ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಹಾಡುಗಳಿಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎನ್ನುತ್ತಾರೆ ನಿರ್ದೇಶಕರು. (ಏಜೆನ್ಸೀಸ್)

English summary
Director cum actor Prem starer 'Dasvala' is all set to release on the 11th of October. The movie is being directed by MS Ramesh. Prem, Rangayana Raghu, Hema Chaudhary, Avinash are in cast.
Please Wait while comments are loading...