»   » ಮಗ ಸೂರ್ಯ, ಪತ್ನಿ ರಕ್ಷಿತಾ ಜತೆ ಪ್ರೇಮ್ ಸ್ಟೆಪ್

ಮಗ ಸೂರ್ಯ, ಪತ್ನಿ ರಕ್ಷಿತಾ ಜತೆ ಪ್ರೇಮ್ ಸ್ಟೆಪ್

Posted By:
Subscribe to Filmibeat Kannada

ಅದು 'ಡಿ ಕೆ' ಸಾಮ್ರಾಜ್ಯದ ಕನಕಪುರದ ಒಂದು ಗ್ರಾಮ. ಅಲ್ಲಿ 'ಡಿಕೆ' ಪಕ್ಷದ 2000 ಬಾವುಟಗಳು ರಾರಾಜಿಸುತ್ತಿದ್ದವು. 400 ನೃತ್ಯಗಾರರ ಸಂಚಲನ, ಕಣ್ಣು ಕೋರೈಸುವ ಮೆರಗು, ಒಟ್ಟಾರೆ ಅದು ಹಬ್ಬದ ವಾತಾವರಣ. ಆ ಸ್ಥಳಕ್ಕೆ ಆಗಮಿಸುವ ನಾಯಕ, ಮುಗಿಲು ಮುಟ್ಟುವ ಚಪ್ಪ್ಪಾಲೆ. ಹೌದು ಅದು 'ಡಿಕೆ' ಚಿತ್ರದ ಚಿತ್ರೀಕರಣ!

ವಿಶೇಷವೆಂದರೆ ಈ ಚಿತ್ರದಲ್ಲಿ ರಕ್ಷಿತಾ ಮತ್ತು ಪ್ರೇಮ್ ಪುತ್ರ ಸೂರ್ಯ ಪಿ ಗೌಡ ಕೂಡಾ ಸ್ಟೆಪ್ ಹಾಕಿದ್ದಾನೆ. ಕನಕಪುರದ ಬಳಿ ವಿಶೇಷವಾಗಿ ನಿರ್ಮಿಸಲಾಗಿದ್ದ ಕಲಾಮೇಳದ ಸೆಟ್ ನಲ್ಲಿ ಒಟ್ಟು ಐದು ದಿನಗಳ ಕಾಲ "ಬಂದ ಬಂದ ಡಿ ಕೆ ಬಂದ..." ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. [ಪ್ರೇಮ್ 'ಡಿಕೆ' ಚಿತ್ರಕ್ಕೆ ಅಮೀರ್ 'ಪಿಕೆ' ಸ್ಫೂರ್ತಿನಾ?]

A still from DK

ಇದು ನಾಯಕ ಪ್ರೇಮ್ ಅವರ ಇಂಟ್ರಡಕ್ಷನ್ ಸಾಂಗು. ಪ್ರೇಮ್ ಅವರಿಗೆ ತಕ್ಕಂತೆ ಮಗ ಸೂರ್ಯ ಕೂಡಾ ಅಪ್ಪನಿಗೆ ತಕ್ಕಂತೆ ಹೋಲುವ ವೇಷ ಭೂಷಣ ತೊಟ್ಟು ವಿಜೃಂಭಿಸಿದ್ದಾನೆ. ಅಪ್ಪನ ಬೂಟಿಗೆ ತನ್ನ ಬೂಟಿನ ಹೋಲಿಕೆ ಸರಿ ಇಲ್ಲ ಎಂಬ ಕಾರಣಕ್ಕೆ ಮಾಸ್ಟರ್ ಸೂರ್ಯ ಹಟ ಮಾಡಿಬಿಟ್ಟನಂತೆ. ಈ ಕಾರಣಕ್ಕಾಗಿ ಕೆಲವು ಗಂಟೆಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು.

'ಡಿ ಕೆ' ಚಿತ್ರದ ಮುಹೂರ್ತದ ದಿನ ಕಪಾಲಿ ಚಿತ್ರಮಂದಿರದಲ್ಲಿ ಟ್ರೇಲರ್ ಸಹ ಬಿಡುಗಡೆ ಆಗಿತ್ತು. ಈ ಚಿತ್ರದಿಂದ ಉದಯ ಪ್ರಕಾಶ್ ಅವರು ವಿಜಯ್ ಕಂಪಳಿ ಎಂದು ಹೊಸ ಹೆಸರನ್ನು ನಾಮಕರಣ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಜೊತೆಗೆ ಸಂಭಾಷಣೆಯನ್ನೂ ಒದಗಿಸಿದ್ದಾರೆ.

ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಚಿಸಿದ್ದಾರೆ. ಆನಂದ್, ಮಾಸ್ ಮಾಧ, ಶ್ರೀನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಭದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.

"ಆಬ್ ಕಿ ಬಾರ್ ಮೇರೆ ಸರ್ಕಾರ್" ಎನ್ನುವ 'ಡಿ ಕೆ' ಚಿತ್ರವನ್ನು ಜೆಜೆ ಸಿನಿ ಪ್ರೊಡಕ್ಷನ್ ನ ಗ್ಲೆನ್ ಡಿಯಸ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ. ಪ್ರೇಮ್ ಅವರಿಗೆ ಚೈತ್ರ ಜೋಡಿಯಾಗಿ ನಟಿಸಿದ್ದಾರೆ. ಮಾತ್ರವಲ್ಲದೆ, ಶೋಭರಾಜ್, ಶರತ್ ಲೋಹಿತಾಶ್ವ, ಋಷಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾ ಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Sandalwood director Prem's much expected Kannada movie 'DK' shooting is in progress. Recently song picturised on Prem and his son Surya, wife Rakshita at Kanakapura. The film directed by Vijay Kampali, formerly known as Udaya Prakash, who directed films such as Kalla Malla Sulla and Auto Raja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada