»   » ಆಸ್ಕರ್ ಗೆ ಭಾರತೀಯ ಚಿತ್ರ: 1 ಕೋಟಿ ಬಂಪರ್ ಆಫರ್

ಆಸ್ಕರ್ ಗೆ ಭಾರತೀಯ ಚಿತ್ರ: 1 ಕೋಟಿ ಬಂಪರ್ ಆಫರ್

Posted By:
Subscribe to Filmibeat Kannada

ಪ್ರತಿಷ್ಠಿತ 'ಆಸ್ಕರ್' ಗೆ ಆಯ್ಕೆಯಾಗುವ ಚಿತ್ರಗಳಿಗೆ ಬಂಪರ್ ಆಫರ್ ಸಿಕ್ಕಿದೆ. ಕೇವಲ ಆಸ್ಕರ್ ಗೆ ನಾಮಿನೇಟ್ ಆದ್ರೆ ಮಾತ್ರವಲ್ಲ, ಜಗತ್ತಿನ ಬೇರೆ ಯಾವುದೇ ಚಲನ ಚಿತ್ರೋತ್ಸವಗಳಿಗೆ ಆಯ್ಕೆಯಾದ್ರೂ ಈ ಆಫರ್ ಉಂಟು.

ಹೌದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಭಾರತೀಯ ಚಿತ್ರಗಳಿಗೆ ಪ್ರೋತ್ಸಾಹ ಧನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ವಿಚಾರವನ್ನು ಖುದ್ದು ಕೇಂದ್ರ ಮಂತ್ರಿಗಳಾಗಿರುವ ವೆಂಕಯ್ಯನಾಯ್ಡು ಅವರೇ ನಿನ್ನೆ (ನವೆಂಬರ್-1) ಸ್ವಷ್ಟಪಡಿಸಿದ್ದಾರೆ. '47ನೇ ಭಾರತೀಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಮತ್ತು ಪ್ರಸರಣ ಇಲಾಖೆಯಿಂದ ಈ ನೂತನ ಯೋಜನೆಯನ್ನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.[ಆಸ್ಕರ್ ಪ್ರಶಸ್ತಿ ನಾಮಿನೇಷನ್ 2016 ಪಟ್ಟಿ]

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಚಿತ್ರಗಳಿಗೆ ಪಬ್ಲಿಸಿಟಿ, ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ಪ್ರಯಾಣ ದರ, ಚಲನ ಚಿತ್ರೋತ್ಸವದಲ್ಲಿ ಸುದ್ದಿಗೋಷ್ಠಿ ನಡೆಸಲು..ಹೀಗೆ ಹಲವು ಕೆಲಸಗಳಿಗೆ ಈ ಹಣ ಸಹಾಯವಾಗಲಿ ಎಂಬ ಕಾರಣಕ್ಕೆ ಈ ಪ್ರೋತ್ಸಾಹ ಧನ ನೀಡಲಾಗುವುದು. ಸಂಪೂರ್ಣ ವರದಿ ಇಲ್ಲಿದೆ ಓದಿರಿ..

'ಆಸ್ಕರ್' ಗೆ ನಾಮಿನೇಟ್ ಆದ್ರೆ 1 ಕೋಟಿ

ಭಾರತದಿಂದ ಪ್ರತಿಷ್ಠಿತ 'ಆಸ್ಕರ್' ಅವಾರ್ಡ್ ಗೆ ಆಯ್ಕೆಯಾಗುವ ಚಿತ್ರಕ್ಕೆ, 50 ಲಕ್ಷದಿಂದ 1 ಕೋಟಿಯವರೆಗೂ ಪ್ರೋತ್ಸಾಹ ಧನ ನೀಡಲಾಗುವುದು.

Cannes ಚಿತ್ರೋತ್ಸವಕ್ಕೆ 20 ಲಕ್ಷ

ಫ್ರಾನ್ಸ್ ದೇಶದಲ್ಲಿ ನಡೆಯುವ 'Cannes ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ'ದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾದರೆ 20 ಲಕ್ಷ ನೀಡಲಾಗುವುದಂತೆ. ಇನ್ನೂ Cannes ಫಿಲ್ಮ್ ಫೆಸ್ಟಿವಲ್ ನಲ್ಲಿ 'Un Certain Regard' ಹಾಗೂ 'Director's Fortnight' ವಿಭಾಗಗಳಿಗೆ ಆಯ್ಕೆಯಾದರೆ ತಲಾ 15 ಲಕ್ಷ ಘೋಷಿಸಲಾಗಿದೆ..

'ವೆನಿಸ್' ಚಲನ ಚಿತ್ರೋತ್ಸವಕ್ಕೆ 15 ಲಕ್ಷ

ಇಟಲಿ ದೇಶದಲ್ಲಿ ನಡೆಯುವ 'ವೆನಿಸ್ ಚಲನ ಚಿತ್ರೋತ್ಸವ'ದಲ್ಲಿ ಭಾಗಿಯಾದರೆ 15 ಲಕ್ಷ ಪ್ರೋತ್ಸಾಹ ಧನ ಕೇಂದ್ರ ಸರ್ಕಾರ ನೀಡುತ್ತದೆ.

'Toronto' ಹಾಗೂ 'ಬುಸನ್' ಚಿತ್ರೋತ್ಸವ

'Toronto ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ' ಹಾಗೂ 'ಬುಸನ್ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ'ಕ್ಕೆ ಸೆಲೆಕ್ಟ್ ಆದ್ರೆ, 10 ಲಕ್ಷ ನಿಗದಿಯಾಗಿದೆ. ಇನ್ನೂ 'Toronto ಚಲನ ಚಿತ್ರೋತ್ಸವ' ಹಾಗೂ 'ಲೊಕಾರ್ನೋ ಚಲನ ಚಿತ್ರೋತ್ಸವ'ದಲ್ಲಿ ಏಷ್ಯಾ ವಿಭಾಗಕ್ಕೆ ಆಯ್ಕೆಯಾದರೆ, 7.5 ಲಕ್ಷ ನೀಡಲಾಗುತ್ತಂತೆ.

ಬೇರೆ ಬೇರೆ ಚಿತ್ರೋತ್ಸವಗಳಿಗೂ ಆಫರ್

ಕೇವಲ ನಿರ್ದಿಷ್ಟವಾದ ಫಿಲ್ಮ್ ಫೆಸ್ಟಿವಲ್ ಗಳಿಗೆ ಮಾತ್ರವಲ್ಲ, 'ಸನ್ಡಾನ್ಸ್', 'ರೋಟರ್ಡ್ಯಾಮ್' ಮತ್ತು 'ಬರ್ಲಿನ್ ಫಿಲ್ಮ್ ಫೆಸ್ಟಿವಲ್' ಗಳಿಗೆ ಆಯ್ಕೆಯಾದರೂ ಈ ಮೊತ್ತ ನೀಡಲಾಗುವುದು.

ಯಾವ ಆಧಾರದಲ್ಲಿ ಆಯ್ಕೆ,?

ಯಾವ ಚಿತ್ರಗಳಿಗೆ ಪ್ರೋತ್ಸಾಹ ಧನ ನೀಡಬೇಕು ಎಂಬುದನ್ನ ನಿರ್ಣಯ ಮಾಡುವುದಕ್ಕೆ ಒಂದು ಸಮಿತಿಯನ್ನ ಆಯ್ಕೆ ಮಾಡಲಾಗುವುದು. ಈ ಸಮಿತಿ ಸದಸ್ಯರು ಆಯ್ಕೆ ಮಾಡಿದ ಚಿತ್ರಗಳಿಗೆ ಈ ಹಣವನ್ನ ನೀಡಲಾಗವುದು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

English summary
Ministry of Information & Broadcasting has announced a film promotion fund to India’s official entry to Academy awards under the foreign film category and to films that are officially selected for major international festivals.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada