For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದ್ದಾರೆ ಜೇಕಬ್, ಅಪ್ಪು

  |

  ಕನ್ನಡದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳಲ್ಲಿ ಏನಾದರೊಂದು ಸ್ಪೆಷಾಲಿಟಿ ಇದ್ದೆ ಇರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಪುನೀತ್ ಸಿನಿಮಾಗಳನ್ನ ಇಷ್ಟ ಪಟ್ಟು ನೋಡುತ್ತಾರೆ. ಸಾಲು ಸಾಲು ಹಿಟ್ ಚಿತ್ರಗಳನ್ನ ನೀಡಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಅಪ್ಪು ಕೈ ಯಲ್ಲಿ ಈಗಲು ಸಾಕಷ್ಟು ಪ್ರಾಜೆಕ್ಟ್‌ಗಳಿದ್ದು, ಒಂದಾದ ಮೇಲೊಂದರಂತೆ ಶೂಟಿಂಗ್ ಕಂಪ್ಲೀಟ್ ಮಾಡುತ್ತಿದ್ದಾರೆ. ಈಗ ಬಂದಿರುವ ಸುದ್ದಿ ಪ್ರಕಾರ ಅಪ್ಪು ಮತ್ತೊಂದು ಚಿತ್ರದ ಕಥೆ ಕೇಳಿ ಫೈನಲ್ ಮಾಡಿದ್ದಾರಂತೆ.

  ಅಪ್ಪು ಕೈಯಲ್ಲಿ ವರ್ಷಪೂರ್ತಿ ಮಾಡುವಷ್ಟು ಸಿನಿಮಾ ಇದ್ದರೂ ಒಳ್ಳೆ ಕಥೆ ಬಂದರೆ ಅದನ್ನ ತಿರಸ್ಕರಿಸೋದಿಲ್ಲ. ಸಮಯ ಎಷ್ಟೇ ಆಗಲಿ ಸಿನಿಮಾ ಮಾಡೋಣ ಎಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿರ್ತಾರೆ. ಸದ್ಯ ಈಗ ನಿರ್ದೇಶಕ ಜೇಕಬ್ ವರ್ಗೀಸ್ ಚಿತ್ರದಲ್ಲಿ ನಟಿಸಲು ಅಪ್ಪು ಓಕೆ ಎಂದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಲ್ಲದೇ ಈ ಚಿತ್ರ ಅಪ್ಪು ಅವರ ಪಿಆರ್‌ಕೆ ಬ್ಯಾನರ್‌ನಲ್ಲೆ ಬರಲಿದ್ದು, ಚಿತ್ರದ ಟೈಟಲ್ ಆದಷ್ಟು ಬೇಗ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

  2010ರಲ್ಲಿ ಬಂದ ಪೃಥ್ವಿ ಸಿನಿಮಾದ ಮೂಲಕ ಒಂದಾಗಿದ್ದ ನಿರ್ದೇಶಕ ಜೇಕಬ್ ವರ್ಗೀಸ್ ಮತ್ತು ಅಪ್ಪು ಕಾಂಬಿನೇಷನ್ ಮ್ಯಾಜಿಕ್ ಮಾಡಿತ್ತು. ಚಿತ್ರದಲ್ಲಿ ಅಪ್ಪುಗೆ ಪಾರ್ವತಿ ಮೆನನ್ ಜೋಡಿಯಾಗಿ ಅಭಿನಯಿಸಿದ್ದರು. ಐಎಎಸ್ ಆಫೀಸರ್ ಆಗಿ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರದಲ್ಲಿ ಅಪ್ಪು ಅಭಿನಯಿಸಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದರು. ಹಾಡುಗಳು ಕೂಡ ಜನ ಮೆಚ್ಚುಗೆ ಪಡೆದಿತ್ತು. 2010 ರಲ್ಲಿ ಈ ರೀತಿಯ ಸಿನಿಮಾ ಕೊಟ್ಟಿದ್ದ ಜೇಕಬ್ ಇದೀಗ ಮತ್ತೊಂದು ಹೊಸ ಬಗೆಯ ಕಥೆಯನ್ನ ಅಪ್ಪು ಮುಂದೆ ಇಟ್ಟಿದ್ದಾರೆ. ಈ ಕಥೆ ಕೇಳಿ ಪುನೀತ್‌ ರಾಜ್ ಕುಮಾರ್ ಕೂಡ ಇಷ್ಟ ಪಟ್ಟಿದ್ದು ಒಪ್ಪಿಕೊಂಡಿರೋ ಸಿನಿಮಾಗಳು ಮುಗಿದ ನಂತರ ಈ ಪ್ರಾಜೆಕ್ಟ್ ಕೈಗೆತ್ತಿಕೊಳ್ಳೋಣ ಎಂದಿದ್ದಾರಂತೆ.

  ಹೀಗಾಗಿ ಚಿತ್ರತಂಡ ಕಲಾವಿದರ ಆಯ್ಕೆ ಮತ್ತು ತಾಂತ್ರಿಕ ತಂಡಗಳನ್ನ ಒಟ್ಟು ಮಾಡುತ್ತಿದ್ದು 2022 ಫೆಬ್ರವರಿಯಲ್ಲಿ ಈ ಹೊಸ ಸಿನಿಮಾ ಸೆಟ್ಟೆರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೂ ಮುಂಚೆ ಅಪ್ಪು ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಇದಾದ ಬಳಿಕ ಪವನ್ ಕುಮಾರ್ ನಿರ್ದೇಶನದ ದ್ವಿತ್ವ, ಹಾಗೇ ನಿರ್ದೇಶಕ ದಿನಕರ್ ತೂಗುದೀಪ ಮತ್ತು ಸಂತೋಷ್ ಆನಂದ್ ರಾಮ್ ಹಾಗೂ ಎಸ್ ಕೃಷ್ಣ ಸಿನಿಮಾಗಳು ಮುಗಿಸಿದ ನಂತರದಲ್ಲಿ ಜೇಕಬ್ ವರ್ಗೀಸ್ ಮತ್ತು ಅಪ್ಪು ಸಿನಿಮಾ ಸೆಟ್ಟೇರಲಿದೆ.

  Puneeth Rajkumar and Jacob Verghese is teaming up for a film again

  ಕನ್ನಡಕ್ಕೆ ಚಂಬಲ್, ಸವಾರಿ 2, ಪೃಥ್ವಿ ಯಂತ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಜೇಕಬ್ ವರ್ಗೀಸ್ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದು, ಸಿನಿಮಾ ಯಾವ ಜಾನರ್‌ನಲ್ಲಿ ಬರುತ್ತೆ, ಬೇರೆ ಯಾರೆಲ್ಲ ಕಲಾವಿದರು ಚಿತ್ರದಲ್ಲಿ ಇರುತ್ತಾರೆ ಎಂಬೆಲ್ಲ ಪ್ರಶ್ನೆಗಳಿಗೆ ಇನ್ನಷ್ಟೆ ಉತ್ತರಸಿಗಬೇಕಿದ್ದು, ಚಿತ್ರ ಸೆಟ್ಟೆರುವವರೆಗೂ ಕಾಯಲೇಬೇಕು.

  English summary
  Director Jacob Varghese and Puneeth Rajkumar who worked together in Prithvi in 2010, are now gearing up for another film. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X