For Quick Alerts
  ALLOW NOTIFICATIONS  
  For Daily Alerts

  Gandhada Gudi Trailer: ಜುರಾಸಿಕ್ ಪಾರ್ಕ್, ಗಾಜನೂರು ಸುತ್ತಾಮುತ್ತಾ ಮುಗ್ಧ ಅಪ್ಪು 'ಗಂಧದಗುಡಿ'ಯ ರೋಚಕ ಪಯಣ

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಡಾಕ್ಯುಮೆಂಟರಿ ಸಿನಿಮಾ 'ಗಂಧದಗುಡಿ' ಅಫೀಷಿಯಲ್ ಟ್ರೈಲರ್ ರಿಲೀಸ್ ಆಗಿದೆ. ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರಲ್ಲಿ ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಯುವರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬದ ಸದಸ್ಯರು ಭಾಗಿ ಆಗಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ರೈಲರ್ ರಿಲೀಸ್ ಮಾಡಿದರು.

  ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಜಗತ್ತನ್ನು 'ಗಂಧದಗುಡಿ' ಡಾಕ್ಯುಮೆಂಟರಿಯಲ್ಲಿ ಅನಾವರಣ ಮಾಡಲಾಗಿದೆ. ಗಾಜನೂರಿನ ಸುತ್ತಾ ಮುತ್ತ ಇರುವ ಕಾಡುಗಳಲ್ಲೂ ನಿರ್ದೇಶಕ ಅಮೋಘವರ್ಷ ಜೊತೆ ಪುನೀತ್ ರಾಜ್‌ಕುಮಾರ್ ಸುತ್ತಾಡಿ ಬಂದಿದ್ದರು. ಅದನ್ನು ಹೈಲೆಟ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದೆ. ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಡ್‌ಸ್ಕಿಪರ್ ಸಂಸ್ಥೆ ಜಂಟಿಯಾಗಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಮಾಡಿವೆ. ಅಂತರಾಷ್ಟ್ರೀಯ ಗುಣಮಟ್ಟದ ಡಾಕ್ಯುಮೆಂಟರಿ ಮೇಕಿಂಗ್ ಹುಬ್ಬೇರಿಸುವಂತಿದೆ.

  'ಗಂಧದಗುಡಿ' ಮೇಕಿಂಗ್ ವಿಡಿಯೋ: ಶೂಟಿಂಗ್ ವೇಳೆ ನಗುವಿನ ರಾಜಕುಮಾರ ಕಂಡಿದ್ದು ಹೀಗೆ!'ಗಂಧದಗುಡಿ' ಮೇಕಿಂಗ್ ವಿಡಿಯೋ: ಶೂಟಿಂಗ್ ವೇಳೆ ನಗುವಿನ ರಾಜಕುಮಾರ ಕಂಡಿದ್ದು ಹೀಗೆ!

  ಈ ಹಿಂದೆ 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿ ಮಾಡಿ ಅಮೋಘ ವರ್ಷ ಸೈ ಅನ್ನಿಸಿಕೊಂಡಿದ್ದರು. ಅವರ ಜೊತೆ ಸೇರಿ ಪುನೀತ್ ಕರುನಾಡಿನ 'ಗಂಧದಗುಡಿ' ಜಗತ್ತಿಗೆ ತೋರಿಸಲು ಮುಂದಾಗಿದ್ದರು. ಆದರೆ ಟೀಸರ್ ರಿಲೀಸ್‌ಗೆ ಹೊಸ್ತಿಲಲ್ಲಿ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ರು. ಇದೀಗ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಟ್ರೈಲರ್ ಸದ್ದು ಮಾಡ್ತಿದೆ.

  ಜುರಾಸಿಕ್‌ ಪಾರ್ಕ್‌ಗೆ ಅಪ್ಪು ಪಯಣ

  ಜುರಾಸಿಕ್‌ ಪಾರ್ಕ್‌ಗೆ ಅಪ್ಪು ಪಯಣ

  ಜೀಪ್ ಏರಿ ಪುನೀತ್ ರಾಜ್‌ಕುಮಾರ್‌ ಹಾಗೂ ಅಮೋಘವರ್ಷ ರಾಜ್ಯದ ಮೂಲೆ ಮೂಲೆಗೆ ಸುತ್ತಾಡಿದ್ದಾರೆ. ಟ್ರೈಲರ್ ಆರಂಭದಲ್ಲೇ ದ್ವೀಪವೊಂದಕ್ಕೆ ಇಬ್ಬರು ಹೊರಟಿದ್ದಾರೆ. ಅಪ್ಪು ವಾಯ್ಸ್‌ನಲ್ಲಿ ಟ್ರೈಲರ್ ಶುರುವಾಗುತ್ತೆ. ಇಲ್ಲೇನಾದರೂ ಬೇರೆ ತರಹದ ಪಕ್ಷಿಗಳನ್ನು ತೋರಿಸಲು ಕರ್ಕೊಂಡ್ ಬಂದಿದ್ದೀರಾ? ಸಮುದ್ರದ ಬಳಿ ಎಂದು ಅಪ್ಪು ಕೇಳಿದಾಗ, ಇಲ್ಲ ಇಲ್ಲೊಂದು ಐಲ್ಯಾಂಡ್ ಇದೆ ಎಂದು ಅಮೋಘವರ್ಷ ಹೇಳ್ತಾರೆ. ಆಗ ಅಪ್ಪ ಓಹ್ ಜುರಾಸಿಕ್ ಪಾರ್ಕ್ ಎನ್ನುತ್ತಾರೆ. ಇಲ್ಲಿಂದ ಮುಂದೆ ಸುಂದರ ದ್ವೀಪದ ದರ್ಶನವಾಗುತ್ತದೆ.

  ನೀರಿಗೆ ಜಿಗಿದ ಅಪ್ಪು- ಅಮೋಘವರ್ಷ

  ನೀರಿಗೆ ಜಿಗಿದ ಅಪ್ಪು- ಅಮೋಘವರ್ಷ

  ಇನ್ನು ದ್ವೀಪದಲ್ಲಿ ವಿಹರಿಸಿದ ಅಪ್ಪು- ಅಮೋಘವರ್ಷ ಸ್ಕೂಬಾ ಡೈವ್ ಮಾಡಿ ಸಮುದ್ರದ ಆಳದ ಜಲಚರಗಳ ನೋಡಿದ್ದಾರೆ. ಎಲ್ಲರಿಗೂ ತೋರಿಸಿದ್ದಾರೆ. ಬಹಳ ಸೊಗಸಾಗಿ ಪ್ರತಿ ದೃಶ್ಯವನ್ನು ಕಟ್ಟಿಕೊಡಲಾಗಿದೆ. ಇನ್ನು ಅಪ್ಪು ಬಹಳ ಮುಗ್ಧವಾಗಿ ಪ್ರತಿಯೊಂದರ ಬಗ್ಗೆ ತಿಳಿದುಕೊಳ್ಳುತ್ತಾ, ನಮಗೂ ತಿಳಿಸುತ್ತಾ ಸಾಗುತ್ತಾರೆ. ಪ್ರತೀಕ್ ಶೆಟ್ಟಿ ಅಂಡ್ ಟೀಮ್ ಡ್ರೋನ್ ಕ್ಯಾಮರಾಗಳನ್ನು ಬಳಸಿ ಬಹಳ ರೋಚಕವಾಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

  ಗಾಜನೂರಿನ ಸುತ್ತಾಮುತ್ತಾ ರೋಚಕ ಪಯಣ

  ಗಾಜನೂರಿನ ಸುತ್ತಾಮುತ್ತಾ ರೋಚಕ ಪಯಣ

  ಸುಂದರವಾದ ದ್ವೀಪದಿಂದ 'ಗಂಧದಗುಡಿ' ಗಾಜನೂರಿನ ಪಕ್ಕ ಬೆಟ್ಟದ ಕಡೆಗೆ ಸಾಗುತ್ತದೆ. ಕಾಡಿಗೆ ಅಂಟಿಕೊಂಡಂತೆ ಗಾಜನೂರು ಇರುವುದು ಗೊತ್ತೇಯಿದೆ. ಪುನೀತ್ ರಾಜ್‌ಕುಮಾರ್ ಸಾಕಷ್ಟು ಬಾರಿ ತಂದೆ ಹುಟ್ಟೂರಿಗೆ ಹೋಗಿ ಬಂದಿದ್ದಾರೆ. ಈ ಬಾರಿ ಅವರ ಪಯಣ ಬಹಳ ರೋಚಕವಾಗಿತ್ತು. ತಮ್ಮ ಊರಿನ ಸುತ್ತಾಮುತ್ತಾ ಏನೇನಿದೆ ಎನ್ನುವುದನ್ನು ತಿಳಿಸಿದುಕೊಂಡು ಖುಷಿಯಾಗಿದ್ದಾರೆ. ಬೆಟ್ಟಗುಡ್ಡ, ಕಾಡು ಮೇಡು ಏರಿ ಇಳಿದಿದ್ದಾರೆ. ಟ್ರೈಲರ್‌ನಲ್ಲಿ 'ವಸಂತಗೀತಾ' ಚಿತ್ರದಲ್ಲಿ ಅಪ್ಪು ಹಾಗೂ ಡಾ. ರಾಜ್‌ಕುಮಾರ್ ಜೊತೆಗಿರುವ ಸಣ್ಣ ವಿಡಿಯೋ ಝಲಕ್‌ ಅನ್ನು ತೋರಿಸಿದ್ದಾರೆ.

  ಅಣ್ಣಾವ್ರ ಹುಟ್ಟಿದ ಮನೆಗೆ ಅಪ್ಪು- ಅಮೋಘವರ್ಷ

  ಅಣ್ಣಾವ್ರ ಹುಟ್ಟಿದ ಮನೆಗೆ ಅಪ್ಪು- ಅಮೋಘವರ್ಷ

  ಇನ್ನು ಗಾಜನೂರಿಗೆ ಹೋಗಿ ಅಣ್ಣಾವ್ರ ಮನೆ ನೋಡದೇ ಇದ್ದರೆ ಹೇಗೆ? ಅಮೋಘವರ್ಷ ಅವರನ್ನು ತಮ್ಮ ತಂದೆ ಹುಟ್ಟಿದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ತಂದೆ ಹುಟ್ಟಿ ಬೆಳೆದ ಊರಿನಲ್ಲಿ ಸುತ್ತಾಡಿದ್ದಾರೆ. ಜೋಗ ಜಲಪಾತ ಸುತ್ತಾ ಓಡಾಡಿದ್ದಾರೆ. ಜಾನಪದ ಕಲೆ, ಸಂಸ್ಕೃತಿಯ ಬಗ್ಗೆ ಚರ್ಚೆಸಿದ್ದಾರೆ. ವನ್ಯ ಜೀವಿನ ಸಂಕುಲವನ್ನು ನೋಡಿ ಬೆರಗಾಗಿದ್ದಾರೆ. 'ಗಂಧದಗುಡಿ' ಟ್ರೈಲರ್ ನಿಜಕ್ಕೂ ಸಖತ್ ಥ್ರಿಲ್ಲಿಂಗ್ ಆಗಿದೆ. ಅಕ್ಟೋಬರ್ 28ಕ್ಕೆ ಸಿಲ್ವರ್‌ ಸ್ಕ್ರೀನ್‌ಗಳ ಮೇಲೆ 'ಗಂಧದಗುಡಿ' ಡಾಕ್ಯೂಮೆಂಟರಿ ಸಿನಿಮಾ ಅಪ್ಪಳಿಸಲಿದೆ.

  English summary
  Puneeth Rajkumar Starrer Gandhada gudi Docudrama film trailer Released. Know More.
  Sunday, October 9, 2022, 11:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X