For Quick Alerts
  ALLOW NOTIFICATIONS  
  For Daily Alerts

  140 ದಿನದ ನಂತರ ರಾ'ಗಿಣಿ' ಬಿಡುಗಡೆ: ಕಾನೂನು ಹೋರಾಟದಲ್ಲಿ ನಟಿ ಕಂಡ ಏಳು ಬೀಳು!

  |

  ಡ್ರಗ್ಸ್ ಪ್ರಕರಣದಲ್ಲಿ ಕನ್ನಡ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಬರೋಬ್ಬರಿ 140 ದಿನಗಳ ಕಾಲ ಜೈಲಿನಲ್ಲಿ ಬಂಧಿಯಾಗಿದ್ದ ರಾಗಿಣಿ ಇಂದು (ಶುಕ್ರವಾರ) ಬಿಡುಗಡೆಯಾಗಲಿದ್ದಾರೆ. ಡ್ರಗ್ ಪೆಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ಸುಮಾರು ನಾಲ್ಕುವರೆ ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸಿದ್ದರು.

  ಗುರುವಾರ (ಜನವರಿ 21) ಸುಪ್ರೀಂಕೋರ್ಟ್‌ನಿಂದ ಜಾಮೀನು ಸಿಕ್ಕಿದೆ. ಶುಕ್ರವಾರ ಪರಪ್ಪನ ಅಗ್ರಹಾರಕ್ಕೆ ಆದೇಶ ಪ್ರತಿ ತಲುಪುವ ಸಾಧ್ಯತೆ ಇದ್ದು, ಶುಕ್ರವಾರ ಜೈಲಿನಿಂದ ರಾಗಿಣಿ ಹೊರಬರಬಹುದು ಎಂಬ ನಿರೀಕ್ಷೆ ಇದೆ. ಈ 140 ದಿನಗಳ ಕಾನೂನು ಹೋರಾಟದಲ್ಲಿ ನಟಿ ರಾಗಿಣಿಯ ಏಳು ಬೀಳು ಹೇಗಿತ್ತು ಎಂಬುದರ ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ....

  14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ

  ಸೆಪ್ಟೆಂಬರ್ 4 ರಂದು ಬಂಧನ

  ಸೆಪ್ಟೆಂಬರ್ 4 ರಂದು ಬಂಧನ

  ಡ್ರಗ್ ಪೆಡ್ಲರ್‌ಗಳ ಜೊತೆ ನಂಟು ಹೊಂದಿದ್ದಾರೆ ಎಂಬ ಅನುಮಾನದ ಹಿನ್ನೆಲೆ ಸೆಪ್ಟೆಂಬರ್ 4 ರಂದು ಸಿಸಿಬಿ ಪೊಲೀಸರು ನಟಿ ರಾಗಿಣಿ ಅವರ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಸೇವನೆ ಹಾಗೂ ಪೆಡ್ಲರ್‌ಗಳ ಜೊತೆ ಸಂಪರ್ಕದಲ್ಲಿರುವುದರ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ನಟಿಯರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಅಧಿಕೃತವಾಗಿ ರಾಗಿಣಿಯನ್ನು ಬಂಧಿಸಿದ್ದರು.

  ಸೆಪ್ಟೆಂಬರ್ 14 ರಂದು ನ್ಯಾಯಾಂಗ ಬಂಧನ

  ಸೆಪ್ಟೆಂಬರ್ 14 ರಂದು ನ್ಯಾಯಾಂಗ ಬಂಧನ

  ಸೆಪ್ಟೆಂಬರ್ 4 ರಂದು ಅರೆಸ್ಟ್ ಆಗಿದ್ದ ರಾಗಿಣಿ ಅವರನ್ನು ಸುಮಾರು ಹತ್ತು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿಟ್ಟುಕೊಳ್ಳಲಾಗಿತ್ತು. ಬಳಿಕ ಸಿಸಿಬಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಸೆಪ್ಟೆಂಬರ್ 14 ರಂದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶ ಮಾಡಿತ್ತು.

  ಸೆಪ್ಟೆಂಬರ್ 28ಕ್ಕೆ ಜಾಮೀನು ಅರ್ಜಿ ವಜಾ

  ಸೆಪ್ಟೆಂಬರ್ 28ಕ್ಕೆ ಜಾಮೀನು ಅರ್ಜಿ ವಜಾ

  ನ್ಯಾಯಾಂಗ ಬಂಧನದಲ್ಲಿದ್ದ ನಟಿ ರಾಗಿಣಿ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೆಪ್ಟೆಂಬರ್ 28 ರಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಅಲ್ಲಿಗೆ ಕೆಳಹಂತದ ಕೋರ್ಟ್‌ನಲ್ಲಿ ರಾಗಿಣಿಗೆ ಹಿನ್ನಡೆ ಆಯಿತು.

  ಧ್ರುವ ಸರ್ಜಾಗೆ ನಿಜಕ್ಕೂ ಮೈಲೇಜ್ ಕೊಡುತ್ತಾ ಪೊಗರು | Fimibeat Kannada
  ಹೈ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ

  ಹೈ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ

  ಎನ್‌ಡಿಪಿಎಸ್ ಕೋರ್ಟ್‌ನಲ್ಲಿ ಜಾಮೀನಿ ಸಿಗದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಕರ್ನಾಟಕ ಹೈ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ದುರಾದೃಷ್ಟವಶಾತ್ ಹೈ ಕೋರ್ಟ್‌ನಲ್ಲೂ ನಟಿಯರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ನವೆಂಬರ್ 3 ರಂದು ರಾಗಿಣಿ ಜಾಮೀನು ಅರ್ಜಿ ವಜಾಗೊಂಡಿತು.

  ಸುಪ್ರೀಂಕೋರ್ಟ್‌ನಲ್ಲಿ ಸಿಕ್ತು ಬೇಲ್

  ಸುಪ್ರೀಂಕೋರ್ಟ್‌ನಲ್ಲಿ ಸಿಕ್ತು ಬೇಲ್

  ಕಳೆದ ಡಿಸೆಂಬರ್ ತಿಂಗಳಿನಲ್ಲಿಯೇ ಸುಪ್ರೀಂಕೋರ್ಟ್‌ನಲ್ಲಿ ನಟಿ ರಾಗಿಣಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಜನವರಿಯಲ್ಲಿ ವಿಚಾರಣೆ ಮಾಡುವುದಾಗಿ ತಿಳಿಸಿತ್ತು. ಅಂತಿಮವಾಗಿ ನಟಿ ರಾಗಿಣಿಗೆ ಜನವರಿ 21 ರಂದು ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

  English summary
  Sandalwood Drug Case: Ragini Dwivedi Gets Bail after 140 Days in Jail; Here is Actress legal fight details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X