»   » ತುಪ್ಪದ ಬೆಡಗಿ ರಾಗಿಣಿಯ ಬೆಣ್ಣೆಯಂತಹ ಚಿತ್ರಗಳು

ತುಪ್ಪದ ಬೆಡಗಿ ರಾಗಿಣಿಯ ಬೆಣ್ಣೆಯಂತಹ ಚಿತ್ರಗಳು

By: ಉದಯರವಿ
Subscribe to Filmibeat Kannada

ಒಂದೇ ಒಂದು ಐಟಂ ಸಾಂಗ್ ಮೂಲಕ ಕನ್ನಡ ಬೆಳ್ಳಿಪರದೆ ಮೇಲೆ ಬೆಳ್ಳಿಚುಕ್ಕಿ ಮೂಡಿಸಿದ ತಾರೆ ರಾಗಿಣಿ ದ್ವಿವೇದಿ. ಎಲ್ಲರಿಗೂ ಗೊತ್ತೇ ಇದೆ. ಗೊತ್ತಿಲ್ಲದಿದ್ದರೆ ಇನ್ನೊಮ್ಮೆ ಹೇಳಲೇಬೇಕಾದಂತಹ ಹಾಡು ಅದು. 'ಕಳ್ಳ ಮಳ್ಳ ಸುಳ್ಳ' ಚಿತ್ರದ ತುಪ್ಪ ಬೇಕಾ ತುಪ್ಪಾ ನಾಟಿ ತುಪ್ಪ....

ಈ ಹಾಡಿಗೆ ರಾಗಿಣಿ ಸೊಂಟ ಬಳುಕಿಸಿದ್ದನ್ನು ಎಷ್ಟು ಬಾರಿ ನೋಡಿದರೂ ಕಣ್ಮನ ತಣಿಯುವುದಿಲ್ಲ. ಅಷ್ಟೊಂದು ನೀಟಾಗಿ ರಸಮಯವಾಗಿ ಕುಣಿಯುವ ಮೂಲ ಕಲಾರಸಿಕರ ಪಾಲಿಗೆ ಹೋಳಿಗೆ ತುಪ್ಪವಾದರು. ಈಗ ಮತ್ತೊಂದು ಐಟಂ ಸಾಂಗ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ರಾಗಿಣಿ.

ಈ ಬಾರಿಯೂ ಅವರ ಐಟಂ ಹಾಡು ಭರ್ಜರಿಯಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಚಿತ್ರಗಳೇ ಅದಕ್ಕೆ ಸಾಕ್ಷಿ. ಐಟಂ ಹಾಡಿನ ಚಿತ್ರಗಳು ಒನ್ಇಂಡಿಯಾ ಕನ್ನಡಕ್ಕೆ ದೊರಕಿದ್ದು ಒಂದಕ್ಕಿಂತ ಒಂದು ಸೂಪರ್ ಆಗಿರುವುದನ್ನು ಕಣ್ಣಾರೆ ಸವಿಯಬಹುದು.

ಈ ಸಲ ಅವರು ತುಪ್ಪಾ ಬೇಕಾ ತುಪ್ಪಾ ಅಂತಾರೋ ಅಥವಾ ಬೆಣ್ಣೆ ಕೊಡುತ್ತಾರೋ ನೋಡಬೇಕು. ಆದರೆ ಫೋಟೋಗಳು ಮಾತ್ರ ಬೆಣ್ಣೆಯಂತೆಯೇ ಇವೆ. ಒಮ್ಮೆ ಸ್ಲೈಡ್ ಗಳಲ್ಲಿ ನೋಡಿ ಆಸ್ವಾದಿಸಿ.

ಮಿಣಮಿಣ ಮಿನುಗುವ ಪಾರದರ್ಶನ ಉಡುಗೆ

ಅಂದಹಾಗೆ ಈ ಬಾರಿ ರಾಗಿಣಿ ಹೆಜ್ಜೆ ಹಾಕುತ್ತಿರುವುದು ಹಾಸ್ಯನಟ ಶರಣ್ ಅವರ 'ವಿ' ಸಿಂಬಲ್ಲಿನ ಚಿತ್ರದಲ್ಲಿ. ಈ ಚಿತ್ರದಲ್ಲಿ ರಾಗಿಣಿ ಮಿಣಮಿಣ ಮಿನುಗುವ ಪಾರದರ್ಶಕ ಉಡುಗೆಯಲ್ಲಿ ಕುಣಿದಿದ್ದಾರೆ. ಜೋಕಾಲಿಯಲ್ಲಿ ಜೀಕಿದ್ದಾರೆ.

ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ

ಕೈಲಾಶ್ ಖೇರ್ ಹಾಡಿರುವ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಈ ಹಾಡಿಗೆ ರಾಗಿಣಿ ಮಸ್ತ್ ಆಗಿ ಕುಣಿದಿರುವುದು. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಎಂದ ಮೇಲೆ ಸೊಂಟ ಕಂಟ್ರೋಲಲ್ಲಿ ಇರುತ್ತಾ ಹೇಳಿ.

ಮೂರು ಸೆಟ್ ಗಳಲ್ಲಿ ಹಾಡಿನ ಚಿತ್ರೀಕರಣ

ನಂದಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಾಗಿಣಿ 50 ಮಂದಿ ಸಹನರ್ತಕಿರಯ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. "ಮೂರು ವಿಭಿನ್ನ ಸೆಟ್ ಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.

ಐಟಂ ಅಲ್ಲ ಇದು ಸ್ಪೆಷಲ್ ಸಾಂಗ್

ಈ ಹಾಡಿಗಾಗಿ ರಾಗಿಣಿ ಸಿಕ್ಕಾಪಟ್ಟೆ ರಿಹರ್ಸಲ್ ಮಾಡಿ ಕಡೆಗೂ ಅಂದುಕೊಂಡಂತೆ ಸಾಧಿಸಿದ್ದಾರೆ. ಆದರೆ ಇದನ್ನು ಐಟಂ ಹಾಡು ಎಂದು ಕರೆಯಲು ಅವರಿಗೆ ಇಷ್ಟವಿಲ್ಲ. ಅವರ ಪ್ರಕಾರ ಇದು ಸ್ಪೆಷಲ್ ಸಾಂಗ್.

ಚಿಕ್ನಿ ಚಮೇಲಿ ನೆನಪಿಸುವ ಹಾಡು

ರಾಗಿಣಿ ಹೊಸ ಐಟಂ ಹಾಡಿನ ಚಿತ್ರಗಳನ್ನು ನೋಡುತ್ತಿದ್ದರೆ ಇದು ಹಿಂದಿಯ 'ಅಗ್ನಿಪಥ್' ಚಿತ್ರದ ಚಿಕ್ನಿ ಚಮೇಲಿ ಹಾಡನ್ನು ನೆನಪಿಸುವಂತಿದೆ. ಆದರೂ ರಾಗಿಣಿ ತಮ್ಮದೇ ಮುದ್ರೆ ಒತ್ತಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ.

ಅಕ್ಕ ನಿನ್ನ ಮಗಳು ನನಗೆ ಚಿಕ್ಕೋಳಲ್ವಾ...

"ಅಕ್ಕ ನಿನ್ನ ಮಗಳು ನನಗೆ ಚಿಕ್ಕೋಳಲ್ವಾ..." ಎಂಬ ಜಾನಪದ ಹಾಡಿಗೆ ಒಂದಷ್ಟು ಅಂಶಗಳನ್ನು ಸೇರಿಸಿ ಹಾಡನ್ನು ಹೆಣೆದಿದ್ದಾರೆ ಶಿವು. ಈ ಹಾಡು ಸೆಕೆಂಡ್ ಆಫ್ ನಲ್ಲಿ ಮೂಡಿಬರುತ್ತದಂತೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದು ಎಂದು ಹೇಳುತ್ತದೆ ಚಿತ್ರತಂಡ.

English summary
Kannada hot beauty Ragini Dwivedi's sweet photos. The actress done a special number with Sharan in his new film whose title is the victory symbol. The song featuring her with Sharan will be choreographed by Imran Sardaria.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada