For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿ ದ್ವಿವೇದಿಗೆ ಒಲಿದು ಬಂತು ಅದೃಷ್ಟ!

  |

  ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದ ಬಳಿಕ, ಕೆಲ ಕಾಲ ಸುಮ್ಮನೆ ಇದ್ದರು. ಅವರು ಮತ್ತೆ ಯಾವ ಸಿನಿಮಾದಲ್ಲಿ ಮಾಡುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು. ಅದಕ್ಕೆ ಬ್ರೇಕ್ ಬಿದ್ದಿದೆ. ಕನ್ನಡದಲ್ಲಿ ರಾಣ ಸಿನಿಮಾದ ಒಂದು ಹಾಡಿನಲ್ಲಿ ರಾಗಿಣಿ ಡಾನ್ಸ್ ಮಾಡಿದ್ದಾರೆ.

  ನಂತರ 'ಸಾರಿ ಕರ್ಮಾ ರಿಟರ್ನ್' ಎನ್ನು ಟೈಟಲ್‌ ಅಡಿಯಲ್ಲಿ ದ್ವಿಭಾಷಾ ಸಿನಿಮಾವನ್ನು ರಾಗಿಣಿ ಪ್ರಕಟ ಮಾಡಿದ್ದಾರೆ. ಈಗ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲೂ ಕೂಡ ರಾಗಿಣಿ ಸಿಕ್ಕಾಪಟ್ಟೆ ಬ್ಯುಸಿ ಆಗುವ ಲಕ್ಷಣಗಳು ಕಾಣಿಸುತ್ತಿದೆ.

  Recommended Video

  ಮತ್ತೆ ಬಾಲಿವುಡ್ ಗೆ ಎಂಟ್ರಿಕೊಟ್ಟ ರಾಗಿಣಿ

  ಯಾಕೆಂದರೆ ಇತ್ತೀಚೆಗೆಷ್ಟೇ ಶೈಲಾ ಎನ್ನುವ ಮಲಯಾಳಂ ಚಿತ್ರವನ್ನು ರಾಗಿಣಿ ಪ್ರಕಟ ಮಾಡಿದ್ದರು. ಈಗ ಅವರ ಮುಂದಿನ ತಮಿಳು ಚಿತ್ರ ಪ್ರಕಟ ಆಗಿದೆ. ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಸಮಾರಂಭದ ಫೋಟೊಗಳನ್ನು ರಾಗಿಣಿ ಹಂಚಿಕೊಂಡಿದ್ದಾರೆ.

  ರಾಗಿಣಿ ಮುಂದಿನ ಚಿತ್ರ ತಮಿಳಿನ 1 ಟು 1!

  ನಟಿ ರಾಗಿಣಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಾ ಇದ್ದಾರೆ. ಇದೀಗ ತಮಿಳಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ. 'ಒನ್​ 2 ಒನ್' ಎನ್ನುವುದು ಈ ತಮಿಳು ಚಿತ್ರದ ಟೈಟಲ್. ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಹೂರ್ತ ನೆರವೇರಿಸಲಾಯಿತು. ಈಗ ಶೂಟಿಂಗ್​ ಕೂಡ ಆರಂಭ ಆಗಿದೆ. ಫ್ಯಾಮಿಲಿ ಡ್ರಾಮಾ ಜೊತೆ ಸಸ್ಪೆನ್ಸ್ ಕಥೆ ಈ ಸಿನಿಮಾದಲ್ಲಿ ಇರಲಿದೆ. ರಾಗಿಣಿ ಸೀರೆ ತೊಟ್ಟು ಹೋಮ್ಲಿ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಿರುಜ್ಞಾನಮ್​ ನಿರ್ದೇಶನ ಮಾಡುತ್ತಿರುವ 'ಒನ್​ 2 ಒನ್' ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲಿಯೇ ರಾಗಿಣಿ ನೀಡಲಿದ್ದಾರೆ.

  ಮಲಯಾಳಂನಲ್ಲಿ 'ಶೈಲಾ' ಚಿತ್ರ ಆರಂಭಿಸಿದ ರಾಗಿಣಿ!

  ನಟಿ ರಾಗಿಣಿ, ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ಬಹಳ ಬೋಲ್ಡ್ ಆದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇರಳದ 200 ವರ್ಷ ಹಳೆಯ ಟೀ ಎಸ್ಟೇಟ್‌ನಲ್ಲಿ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿತ್ತು. ಸಿನಿಮಾಕ್ಕೆ 'ಶೈಲಾ' ಎಂದು ಹೆಸರಿಡಲಾಗಿದೆ. ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಕೊಲೆಯ ಸುತ್ತ ನಡೆಯುವ ಕತೆಯಾಗಿದೆ. ಸಿನಿಮಾವನ್ನು ಬಾಲು ನಾರಾಯಣ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ.

  English summary
  Ragini Dwivedi Luck Change: She Got More Movie Offers From Tamil, Malayalam
  Tuesday, January 18, 2022, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X