For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ಆಪ್ತ ಮಾಡಿದ್ದ ವಾಟ್ಸ್‌ಆಪ್‌ ಸಂದೇಶಗಳು ಬಹಿರಂಗ

  |

  ಮಾದಕ ವಸ್ತು ಮಾರಾಟಗಾರರೊಂದಿಗೆ ಸಂಪರ್ಕ ಹಾಗೂ ಮಾದಕ ವಸ್ತು ಸೇವನೆಗೆ ಉತ್ತೇಜನೆ ಆರೋಪದಲ್ಲಿ ನಟಿ ರಾಗಿಣಿ, ಸಂಜನಾ ಸೇರಿ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

  ಪ್ರಕರಣ ಕುರಿತು ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್‌ ನಲ್ಲಿ ರಾಗಿಣಿ ಹಾಗೂ ಇತರರನ್ನು ಯಾವ ಕಾರಣಕ್ಕೆ ಬಂಧಿಸಬೇಕಾದ ಅನಿವಾರ್ಯತೆ ಇದೆ ಎಂಬ ಬಗ್ಗೆ ಪೊಲೀಸರು ಉಲ್ಲೇಖಿಸಿದ್ದಾರೆ. ಇದೇ ಪತ್ರದಲ್ಲಿ ರಾಗಿಣಿ ಆಪ್ತ ಮಾಡಿರುವ ಸಂದೇಶಗಳ ಉಲ್ಲೇಖವೂ ಇದೆ.

  ರಾಗಿಣಿ, ಮಾಜಿ ಸಚಿವರ ಮಗ ಸೇರಿ 12 ಮಂದಿ ವಿರುದ್ಧ ಎಫ್‌ಐಆರ್: ಇಲ್ಲಿದೆ ಪಟ್ಟಿರಾಗಿಣಿ, ಮಾಜಿ ಸಚಿವರ ಮಗ ಸೇರಿ 12 ಮಂದಿ ವಿರುದ್ಧ ಎಫ್‌ಐಆರ್: ಇಲ್ಲಿದೆ ಪಟ್ಟಿ

  ರಾಗಿಣಿ ಆಪ್ತ, ಆರ್‌ಟಿಓ ನೌಕರ ರವಿಶಂಕರ್ ಹಾಗೂ ಡ್ರಗ್ ಪೆಡ್ಲರ್ ಸೈಮನ್ ನಡುವೆ ನಡೆದಿರುವ ವಾಟ್ಸ್‌ಆಪ್ ಸಂದೇಶಗಳು, ರವಿಶಂಕರ್ ಹಾಗೂ ಆತನ ಗೆಳೆಯನೊಟ್ಟಿಗೆ ವಿನಿಮಯವಾಗಿರುವ ಸಂದೇಶಗಳ ಬಗ್ಗೆ ರಿಮ್ಯಾಂಡ್‌ ನಲ್ಲಿ ಮಾಹಿತಿ ಇದೆ.

  ಪೆಡ್ಲರ್‌ಗೆ ಸಂದೇಶ ಕಳಿಸಿದ್ದ ರಾಗಿಣಿ ಆಪ್ತ ರವಿಶಂಕರ್

  ಪೆಡ್ಲರ್‌ಗೆ ಸಂದೇಶ ಕಳಿಸಿದ್ದ ರಾಗಿಣಿ ಆಪ್ತ ರವಿಶಂಕರ್

  ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್‌ಗೆ 2019 ರ ಜೂನ್ 16 ರಂದು ಸಂದೇಶ ಕಳಿಸಿದ್ದ ರಾಗಿಣಿ ಆಪ್ತ ರವಿಶಂಕರ್, 'ಅತ್ಯತ್ತದ್ಭುತವಾದ 'ಮಾಲು' ಕೊಡು' ಎಂದು ಮತ್ತೆ, '2ಜಿ ಸೆಲೆಬ್ರಿಟಿ ಮಾಲು ಕೊಡು' ಎಂದು ಕಳಿಸಿದ್ದಾನೆ.

  'ಡ್ರಗ್ಸ್ ಪ್ರಕರಣದಲ್ಲಿ ಮೂವರು ನಟಿಯರು ಮಾತ್ರನಾ'? ಪಾರೂಲ್ ಯಾದವ್ ಪ್ರಶ್ನೆ'ಡ್ರಗ್ಸ್ ಪ್ರಕರಣದಲ್ಲಿ ಮೂವರು ನಟಿಯರು ಮಾತ್ರನಾ'? ಪಾರೂಲ್ ಯಾದವ್ ಪ್ರಶ್ನೆ

  ಒಂದು ಗ್ರಾಂ ಗಿಂತಲೂ ಕಡಿಮೆ ಕೊಡೆಂದು ಬೇಡಿಕೆ

  ಒಂದು ಗ್ರಾಂ ಗಿಂತಲೂ ಕಡಿಮೆ ಕೊಡೆಂದು ಬೇಡಿಕೆ

  ಮತ್ತೆ ಈ ವರ್ಷದ ಏಪ್ರಿಲ್ 12 ರಂದು ಪೆಡ್ಲರ್ ಲೂಮ್ ಪೆಪ್ಪರ್‌ಗೆ ಸಂದೇಶ ಕಳುಹಿಸಿದ ರವಿಶಂಕರ್, 'ಒಂದು ಗ್ರಾಂ ಗಿಂತಲೂ ಕಡಿಮೆ ಕೊಡು' ಎಂದಿರುತ್ತಾನೆ. ಇದಕ್ಕೆ ಮಾರನೇಯ ದಿನ ಪ್ರತಿಕ್ರಿಯಿಸುವ ಲೂಮ್ ಪೆಪ್ಪರ್, 'ಸಾಧ್ಯವಿಲ್ಲ, ಅದು ಪೂರ್ಣ ಕಲ್ಲಿನ ಮಾದರಿಯಲ್ಲಿದೆ, ಹಾಗಾಗಿ ಅದು ಪೂರ್ತಿ 1ಜಿ' ಎಂದಿರುತ್ತಾನೆ.

  ಡ್ರಗ್ಸ್ ಜಾಲದ ತನಿಖೆ ಬಗ್ಗೆ ಎಚ್ಚರಿಕೆ ನೀಡಿದ್ದ ರವಿಶಂಕರ್

  ಡ್ರಗ್ಸ್ ಜಾಲದ ತನಿಖೆ ಬಗ್ಗೆ ಎಚ್ಚರಿಕೆ ನೀಡಿದ್ದ ರವಿಶಂಕರ್

  ನಂತರ ಕಳೆದ ಜೂನ್ 24 ರಂದು ರವಿಶಂಕರ್ ತನ್ನ ಸ್ನೇಹಿತ ಪ್ರಶಾಂತ್ ರಾಂಕಾ ಗೆ ಸಂದೇಶ ಕಳುಹಿಸಿ, ಡ್ರಗ್ಸ್ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಎಚ್ಚರಿಸುತ್ತಾನೆ. ಅವರಿಬ್ಬರ ಸಂಭಾಷಣೆಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಸರೂ ಸಹ ಬಂದಿದೆ. ಪ್ರಶಾಂತ್ ರಾಂಕಾ ಸಹ ಬಂಧನಕ್ಕೆ ಒಳಗಾಗಿದ್ದಾನೆ.

  ಡ್ರಗ್ ಪೆಡ್ಲರ್ ಓರ್ವನ ಬಂಧನ, ರಾಗಿಣಿ ಕಾರುಚಾಲಕ ವಶಕ್ಕೆಡ್ರಗ್ ಪೆಡ್ಲರ್ ಓರ್ವನ ಬಂಧನ, ರಾಗಿಣಿ ಕಾರುಚಾಲಕ ವಶಕ್ಕೆ

  Recommended Video

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
  ಕೋಡ್‌ವರ್ಡ್ ಇಟ್ಟುಕೊಂಡು ಮಾತನಾಡುತ್ತಿದ್ದರು

  ಕೋಡ್‌ವರ್ಡ್ ಇಟ್ಟುಕೊಂಡು ಮಾತನಾಡುತ್ತಿದ್ದರು

  ಪೊಲೀಸರ ಮಾಹಿತಿಯಂತೆ ಹಲವು ಕೋಡ್‌ವರ್ಡ್‌ಗಳನ್ನು ಇಟ್ಟುಕೊಂಡು ಇವರು ಮಾತನಾಡುತ್ತಿದ್ದರಂತೆ. ಒಂದೊಂದು ಬಗೆಯ ಡ್ರಗ್ಸ್‌ಗೆ ಒಂದೊಂದು ಕೋಡ್‌ವರ್ಡ್‌ಗಳನ್ನು ಇಟ್ಟುಕೊಂಡಿದ್ದರಂತೆ. ಐಶಾರಾಮಿ ಹೋಟೆಲ್‌ಗಳು, ಪಾರ್ಟಿಗಳಲ್ಲಿ ಮದ್ಯದ ಜೊತೆಗೆ ಡ್ರಗ್ಸ್ ಅನ್ನು ವಿತರಿಸುತ್ತಿದ್ದರಂತೆ ಈ ಆಸಾಮಿಗಳು.

  English summary
  Actress Ragini's close friend Ravishankar messaged drug peddler several times. Also he alerted his friends about police investigation about drugs.
  Thursday, September 10, 2020, 9:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X