For Quick Alerts
  ALLOW NOTIFICATIONS  
  For Daily Alerts

  ರಾಜೇಶ್ ಕೃಷ್ಣನ್ ಪುರುಷತ್ವಕ್ಕೆ ರಮ್ಯಾ ಸವಾಲ್

  By ಉದಯರವಿ
  |

  ಕನ್ನಡದ ಜನಪ್ರಿಯ ಗಾಯಕ ರಾಜೇಶ್ ಕೃಷ್ಣನ್ ಅವರ ಮೂರನೆ ಮದುವೆ ಮುರಿದು ಬೀಳುವ ಹಂತ ತಲುಪಿದೆ. ಅವರ ಪತ್ನಿ ರಮ್ಯಾ ವಸಿಷ್ಠ ಅವರು ವಿವಾಹ ರದ್ದತಿ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

  ಇಷ್ಟಕ್ಕೂ ಮದುವೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಸಾಕಷ್ಟು ಗಂಭೀರ ಕಾರಣಗಳನ್ನು ನೀಡಲಾಗಿದೆ. ಅವು ಏನು ಎಂದು ನೋಡುವ ಮೊದಲು ಕೆಲವೊಂದು ಸಂಗತಿಗಳ ಕಡೆಗೆ ಗಮನ ಹರಿಸೋಣ. 2011ರ ನವೆಂಬರ್ 7ರಂದು ರಮ್ಯಾ ವಸಿಷ್ಠ ಅವರನ್ನು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ರಾಜೇಶ್ ವರಿಸಿದ್ದರು.

  "ಸುಮ್ ಸುಮ್ನೇ ನಗ್ತಾಳೆ...." ಎಂದು ಹಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದ ಗಾಯಕ ರಾಜೇಶ್ ಕೃಷ್ಣನ್. ಈ ಹಿಂದೆ ಎರಡು ಬಾರಿ ರಾಜೇಶ್ ವಿವಾಹ ಮಾಡಿಕೊಂಡಿದ್ದಾರೆ. ಅವರ ಪ್ರಥಮ ಧರ್ಮಪತ್ನಿ ಸೌಮ್ಯಾ ರಾವ್. ಒಂದಷ್ಟು ದಿನ ಸಂಸಾರ ಮಾಡಿದ ಅವರು ವಿಚ್ಛೇದನದಲ್ಲಿ ಬೇರ್ಪಟ್ಟಿದ್ದರು.

  ಬಳಿಕ ಹರಿಪ್ರಿಯಾ ಎಂಬ ದಂತವೈದ್ಯರನ್ನು ಕೈಹಿಡಿದಿದ್ದರು ರಾಜೇಶ್. ಈ ಮದುವೆಯೂ ಬಹಳ ದಿನ ಉಳಿಯಲಿಲ್ಲ. ರಾಜೇಶ್ ಮತ್ತೆ ಏಕಾಂಗಿಯಾಗಿದ್ದರು. ಆಗ ಇವರ ಬಾಳಿನಲ್ಲಿ ಮೂರನೆಯವರಾಗಿ ಪ್ರವೇಶಿಸಿದವರೇ ರಮ್ಯಾ ವಸಿಷ್ಠ.

  ರಮ್ಯಾ ವಸಿಷ್ಠ ಅವರು ಕಿರುತೆರೆ ನಟಿ ಕಮ್ ಗಾಯಕಿ. ಈಟಿವಿ ಕನ್ನಡ ವಾಹಿಹಿಯ ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರೂ ಜೊತೆಯಲಿ ಜೊತೆ ಜೊತೆಯಲಿ...ಎಂದು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಈಗ ಇವರಿಬ್ಬರ ಸಂಬಂಧದಲ್ಲೂ ಭಾರಿ ಬಿರುಕು ಕಾಣಿಸಿಕೊಂಡಿದೆ. ಇಷ್ಟಕ್ಕೂ ರಮ್ಯಾ ವಸಿಷ್ಠ ಅವರು ಮದುವೆ ರದ್ದತಿಗೆ ನೀಡಿರುವ ಕಾರಣಗಳು ಹೀಗಿವೆ...

  ಒಂದು ವರ್ಷದಿಂದ ಲೈಂಗಿಕ ಸಂಪರ್ಕವಿಲ್ಲ

  ಒಂದು ವರ್ಷದಿಂದ ಲೈಂಗಿಕ ಸಂಪರ್ಕವಿಲ್ಲ

  ಮದುವೆಯಾಗಿ ಒಂದು ವರ್ಷವಾದರೂ ಅವರು ಲೈಂಗಿಕ ಸಂಪರ್ಕ ನಡೆಸಿಲ್ಲ. ಅವರಿಗೆ ದೈಹಿಕ ಮತ್ತು ಮಾನಸಿಕ ಶಕ್ತಿ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ ರಮ್ಯಾ.

  ಪುರುಷತ್ವದ ಕೊರತೆ ಇದೆ

  ಪುರುಷತ್ವದ ಕೊರತೆ ಇದೆ

  ಪುರುಷತ್ವದ ಕೊರತೆ ಇರುವ ಅವರು ಕೇವಲ ನನ್ನ ಜೊತೆ ಅಷ್ಟೇ ಅಲ್ಲ ಮತ್ತಿನ್ಯಾವ ಮಹಿಳೆ ಜೊತೆಗೂ ಅವರು ಲೈಂಗಿಕ ಸಂಪರ್ಕ ನಡೆಸಲು ಸಾಧ್ಯವಿಲ್ಲ.

  ವೀರ್ಯಾಣುವಿನಲ್ಲಿ ಶೇ.2ರಷ್ಟು ಸತ್ವ

  ವೀರ್ಯಾಣುವಿನಲ್ಲಿ ಶೇ.2ರಷ್ಟು ಸತ್ವ

  ಅವರಿಗೆ ಲೈಂಗಿಕ ಆಸಕ್ತಿ ಕಡಿಮೆ ಇದೆ. ವೈದ್ಯರ ಬಳಿ ಪರೀಕ್ಷಿಸಿದಾಗ ಅವರ ವೀರ್ಯಾಣುವಿನಲ್ಲಿ ಶೇ.2ರಷ್ಟು ಸತ್ವವಿರುವುದು ಗೊತ್ತಾಯಿತು.

  ಹೊರ ರಾಜ್ಯದಲ್ಲಿ ಚಿಕಿತ್ಸೆ ಪಡೆಯಲು ಆಸಕ್ತಿ

  ಹೊರ ರಾಜ್ಯದಲ್ಲಿ ಚಿಕಿತ್ಸೆ ಪಡೆಯಲು ಆಸಕ್ತಿ

  ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿದ್ದರು. ಆದರೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದರೆ ವಿಷಯ ಬಹಿರಂಗವಾಗುತ್ತದೆ ಎಂದು ಅವರು ಹೊರ ರಾಜ್ಯದಲ್ಲಿ ಚಿಕಿತ್ಸೆ ಪಡೆಯಲು ಬಯಸಿದ್ದರು.

  ಚೆನ್ನೈನಲ್ಲಿ ಅಪಾಯಿಂಟ್ ಮೆಂಟ್ ಫಿಕ್ಸ್ ಆಗಿತ್ತು

  ಚೆನ್ನೈನಲ್ಲಿ ಅಪಾಯಿಂಟ್ ಮೆಂಟ್ ಫಿಕ್ಸ್ ಆಗಿತ್ತು

  ಆದರೆ ಚಿಕಿತ್ಸೆಗೆ ಹಿಂದೇಟು ಹಾಕಿದ್ದರು. ಚೆನ್ನೈನಲ್ಲಿ ವೈದ್ಯರನ್ನು ಸಂಪರ್ಕಿಸಿ ಅಪಾಯಿಂಟ್ ಮೆಂಟ್ ಸಹ ಫಿಕ್ಸ್ ಆಗಿತ್ತು. ಆದರೆ ಅವರು ಚಿಕಿತ್ಸೆಗೆ ಬರಲು ಒಪ್ಪಲಿಲ್ಲ. ಕೇವಲ ಒಂದು ಬಾರಿ ಮಾತ್ರ ವೈದ್ಯರ ಬಳಿ ಬಂದಿದ್ದರು.

  ಕೃತಕ ಗರ್ಭಧಾರಣೆಗೆ ಸೂಚಿಸಿದ್ದರು

  ಕೃತಕ ಗರ್ಭಧಾರಣೆಗೆ ಸೂಚಿಸಿದ್ದರು

  ತಮ್ಮ ದೌರ್ಬಲ್ಯವನ್ನು ಮುಚ್ಚಿಡಲು ಮಗು ಬಯಸಿದ್ದರು. ಅದಕ್ಕಾಗಿ ಕೃತಕ ಗರ್ಭಧಾರಣೆ ಸಲಹೆ ನೀಡಿದ್ದರು. ಆದರೆ ಅದಕ್ಕೆ ತಾನು ವಿರೋಧ ವ್ಯಕ್ತಪಡಿಸಿದೆ. ನಂಜನಗೂಡಿನಲ್ಲೂ ಚಿಕಿತ್ಸೆ ತೆಗೆದುಕೊಳ್ಳಲಾಗಿತ್ತು.

  ಪತ್ನಿ ಮೇಲೆ ಬಹುತೇಕ ಆಸಕ್ತಿ ಕಳೆದುಕೊಂಡಿದ್ದರು

  ಪತ್ನಿ ಮೇಲೆ ಬಹುತೇಕ ಆಸಕ್ತಿ ಕಳೆದುಕೊಂಡಿದ್ದರು

  ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಸಂಬಂಧ ಮದುವೆ ಎನ್ನಿಸಿಕೊಳ್ಳಲಾಗದು. ಪತ್ನಿಯ ಮೇಲೆ ಬಹುತೇಕ ಆಸಕ್ತಿ ಕಳೆದುಕೊಂಡಿದ್ದಾರೆ. ಅವರಿಗೆ ನರದೌರ್ಬಲ್ಯವಿದೆ ಎಂದು ರಮ್ಯಾ ಅವರು ಆರೋಪಿಸಿದ್ದಾರೆ.

  ಅತ್ತೆಯಿಂದಲೂ ಯಾವುದೇ ಸಹಕಾರವಿರಲಿಲ್ಲ

  ಅತ್ತೆಯಿಂದಲೂ ಯಾವುದೇ ಸಹಕಾರವಿರಲಿಲ್ಲ

  ಚಿಕಿತ್ಸೆ ಪಡೆಯಲು ಅತ್ತೆಯಿಂದ ಯಾವುದೇ ಸಹಕಾರವಿರಲಿಲ್ಲ. ಇನ್ನೊಂದು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

  English summary
  According to the sources Ramya Vasishta has given few reasons saying Rajesh is not able to have sex with her and till now she is virgin. Ramya Vasishta has filed for a divorce against Singer turned actor Rajesh Krishnan at the Family Court in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X