For Quick Alerts
  ALLOW NOTIFICATIONS  
  For Daily Alerts

  ಪ್ರಧಾನಿ ಮೋದಿ ದಾಖಲೆ ಮುರಿಯಲಾಗಲಿಲ್ಲ ರಜನೀಕಾಂತ್ ಗೆ

  |

  ಸಿನಿಮಾಕ್ಕೆ ಸಂಬಂಧಿಸಿದಂತೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದಾರೆ ರಜನೀಕಾಂತ್. ತಾವು ಕಾಣಿಸಿಕೊಂಡ ಮೊದಲ ಟಿವಿ ಕಾರ್ಯಕ್ರಮದಲ್ಲೂ ರಜನೀಕಾಂತ್ ದಾಖಲೆಗಳನ್ನು ಬರೆದಿದ್ದಾರೆ. ಆದರೆ ಮೋದಿ ನಿರ್ಮಿಸಿದ್ದ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.

  MAN VS WILD RAJINI :ಮ್ಯಾನ್ vs ವೈಲ್ಡ್ ಕಾರ್ಯಕ್ರಮದಲ್ಲಿ ರಜಿನಿಕಾಂತ್ | RAJNIKANTH | FILMIBEAT KANNADA

  ರಜನೀಕಾಂತ್ ಅವರು ಸಾಹಸಿ ಬಿಯರ್ ಗ್ರಿಲ್ಸ್ ಅವರ 'ಇನ್‌ ಟು ದಿ ವೈಲ್ಡ್‌' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವು ಮಾರ್ಚ್ 23 ರಂದು ಪ್ರಸಾರವಾಗಿತ್ತು.

  ಜೀವ ಪಣಕ್ಕಿಟ್ಟು ಹಿಂದೆಂದೂ ಮಾಡದ ಸಾಹಸಗಳನ್ನು ಮಾಡಿದ ರಜನೀಕಾಂತ್ಜೀವ ಪಣಕ್ಕಿಟ್ಟು ಹಿಂದೆಂದೂ ಮಾಡದ ಸಾಹಸಗಳನ್ನು ಮಾಡಿದ ರಜನೀಕಾಂತ್

  ರಜನೀಕಾಂತ್ ಕಾಣಿಸಿಕೊಂಡಿದ್ದ ಈ ಶೋ ಹೊಸ ದಾಖಲೆ ಬರೆದಿದ್ದು, ಈ ವರ್ಷದಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಣೆಗೆ ಒಳಪಟ್ಟ ಶೋ ಎಂಬ ಖ್ಯಾತಿ ಗಳಿಸಿದೆ. ಆದರೆ ಸ್ವಲ್ಪವೇ ಅಂತರದಲ್ಲಿ ಮೋದಿ ಅವರ ದಾಖಲೆಗಳನ್ನು ಹಿಂದಿಕ್ಕುವ ಕಳೆದುಕೊಂಡಿದೆ.

  ಬಂಡಿಪುರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು

  ಬಂಡಿಪುರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು

  ಬಿಯರ್ ಗ್ರಿಲ್ಸ್‌ ಜೊತೆಗೆ 'ಇನ್‌ ಟು ದಿ ವೈಲ್ಡ್‌' ಶೋ ನಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದರು. ಇದರ ಚಿತ್ರೀಕರಣ ರಾಜ್ಯದ ಬಂಡಿಪುರ ಕಾಡಿನಲ್ಲಿ ನಡೆದಿತ್ತು. ಶೋ ನಲ್ಲಿ ರಜನೀಕಾಂತ್ ಅದ್ಭುತ ಸಾಹಸಗಳನ್ನು ಸ್ವತಃ ಮಾಡಿದ್ದರು. ಭಾರಿ ಕ್ರೇಜ್ ಹುಟ್ಟಿಸಿದ್ದ ಶೋ ಇದಾಗಿದ್ದು, ಈ ವರ್ಷದಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದ ಶೋ ಇದೆಂಬ ಖ್ಯಾತಿ ಗಳಿಸಿದೆ.

  ಮೋದಿ ಸಹ ಶೋ ನಲ್ಲಿ ಕಾಣಿಸಿಕೊಂಡಿದ್ದರು

  ಮೋದಿ ಸಹ ಶೋ ನಲ್ಲಿ ಕಾಣಿಸಿಕೊಂಡಿದ್ದರು

  ನರೇಂದ್ರ ಮೋದಿ ಅವರು ಸಹ ಬಿಯರ್ ಗ್ರಿಲ್ಸ್ ಅವರ ಶೋ ನಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಈ ಶೋ ಪ್ರದರ್ಶನವಾಗಿತ್ತು. ಇದನ್ನು ಜಿಮ್ ಕಾರ್ಬೆಟ್ ಅರಣ್ಯದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ಶೋ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಶೋ ಎಂಬ ಖ್ಯಾತಿ ಗಳಿಸಿತ್ತು.

  ಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿ

  ಈ ವರ್ಷದ ಅತಿ ಜನಪ್ರಿಯ ಎಪಿಸೋಡ್‌

  ಈ ವರ್ಷದ ಅತಿ ಜನಪ್ರಿಯ ಎಪಿಸೋಡ್‌

  ರಜನೀಕಾಂತ್ ಕಾಣಿಸಿಕೊಂಡಿದ್ದ ಶೋ ಅನ್ನು 30.32 ಕೋಟಿ ಮಂದಿ ವೀಕ್ಷಿಸಿದ್ದಾರೆ. ಚಾನೆಲ್‌ನ ಪ್ರಕಾರ 3.32 ಬಿಲಿಯನ್ ಇಂಪ್ರೆಶನ್ ಅನ್ನು ರಜನೀಕಾಂತ್ ಶೋ ದಾಖಲಿಸಿದೆ.

  ವಿಶ್ವದಲ್ಲಿ ಹೆಚ್ಚು ಟಿಆರ್‌ಪಿ ಪಡೆದಿದ್ದ ಮೋದಿ ಎಪಿಸೋಡ್‌

  ವಿಶ್ವದಲ್ಲಿ ಹೆಚ್ಚು ಟಿಆರ್‌ಪಿ ಪಡೆದಿದ್ದ ಮೋದಿ ಎಪಿಸೋಡ್‌

  ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಸಾರವಾಗಿದ್ದ ಮೋದಿ ಅವರು ಪಾಲ್ಗೊಂಡಿದ್ದ ಇದೇ ಶೋ ನ ಎಪಿಸೋಡ್‌ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿದ್ದ ಶೋ ಎಂಬ ಖ್ಯಾತಿ ಗಳಿಸಿತ್ತು. ಆ ಶೋ ವನ್ನು 30.60 ಕೋಟಿ ಜನ ನೋಡಿದ್ದರು. ಚಾನೆಲ್ ಹೇಳುವಂತೆ 3.60 ಬಿಲಿಯನ್ ಇಂಪ್ರೆಶನ್ ದಾಖಲಿಸಿತ್ತು.

  English summary
  Rajinikanth's In to the wild show with Bear Grylls grab hiegst TRP in this year 2020. Modi's show got world highest TRP, which telecast last year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X