»   » ಅಭಿಮಾನಿಗಳಿಗೆ ರಜನಿಕಾಂತ್ ಪತ್ರ ಬರೆದಿದ್ದಾರೆ, ಓದಿ

ಅಭಿಮಾನಿಗಳಿಗೆ ರಜನಿಕಾಂತ್ ಪತ್ರ ಬರೆದಿದ್ದಾರೆ, ಓದಿ

Posted By:
Subscribe to Filmibeat Kannada
Superstar Rajinikanth
ಸ್ಟೈಲ್ ಕಿಂಗ್ ರಜನಿಕಾಂತ್ ಮೌನ ಮುರಿದಿದ್ದಾರೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆಯುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ, ಕಾಳಜಿ ವಹಿಸಿದ, ಪ್ರೀತಿ ಸ್ಪುರಿಸಿದ, ಆರಾಧಿಸಿದ ಅಭಿಮಾನಕ್ಕೆ ವಂದನೆ ಸಲ್ಲಿಸಿದ್ದಾರೆ.

ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಿಂದ ಈ ವಾರದ ಆರಂಭದಲ್ಲಿ ಬಿಡುಗೊಡೆಗೊಂಡಿದ್ದರು. ಈಗ ಸಿಂಗಪುರದಲ್ಲಿ ರೆಸ್ಟ್ ಪಡೆಯುತ್ತಿದ್ದಾರೆ. ಅಲ್ಲಿಂದಲೇ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

"ನಿಮ್ಮ ಪ್ರೀತಿಯೇ ನಾನು ಚೇತರಿಸಿಕೊಳ್ಳಲು ಕಾರಣ ಮತ್ತು ನಿಮ್ಮ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಅದು ನನ್ನ ಹೃದಯದಲ್ಲಿ ಚಿರಸ್ಥಾಹಿ. ಈಗ ನನ್ನ ಒಂದೇ ಗುರಿ ನಿಮಗೆ ಮನರಂಜನೆ ನೀಡುವುದು. ನಿಮ್ಮನ್ನು ರಂಜಿಸಲು ನಾನು "ರಾಣಾ" ಚಿತ್ರದಲ್ಲಿ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತೇನೆ" ಎಂದು ಪತ್ರದಲ್ಲಿ ಬರೆದಿದ್ದಾರೆ.

ಇಷ್ಟು ದಿನ ಪ್ರತಿಕ್ರಿಯೆ ನೀಡದ ಕುರಿತು ರಜನಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. "ನಿಮಗೆ ಬೇಸರವಾಗಿರಬಹುದು. ನಿಮ್ಮ ಪ್ರೀತಿಯ ಆಳ ನನಗೆ ಗೊತ್ತು. ನನಗೆ ನೀವೇ ಜಗತ್ತು" ಎಂದು ಬರೆದಿದ್ದಾರೆ.

ರಜನಿಕಾಂತ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ(ಜೂನ್ 15) ಕುರಿತು ಅವರಳಿಯ ಧನುಶ್ ಟ್ವಿಟ್ ಮಾಡಿ ತಿಳಿಸಿದ್ದರು. ಸಿಂಗಪುರದಿಂದ ಜುಲೈನಲ್ಲಿ ಅವರು ಭಾರತಕ್ಕೆ ಹಿಂತುರುಗುತ್ತಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದ್ದವು. ಏಪ್ರಿಲ್ 29ರ ನಂತರ ರಾಣಾ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ಮೇ 28ರಂದು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಾಗಿದ್ದರು.

English summary
Superstar Rajinikanth wrote a letter to his fans. "It was your love that enabled me to recover and I will never forget your love. My only goal now is to entertain you. Soon I will return with Rana to make you happy," he said.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada