For Quick Alerts
  ALLOW NOTIFICATIONS  
  For Daily Alerts

  ಓಡೋಡಿ ಬಂದು ತಬ್ಬಿಕೊಂಡ ರಕ್ಷಿತ್‌: ಕಣ್ಣೀರಿಟ್ಟ ರಿಷಬ್ ಶೆಟ್ಟಿ

  |

  ಕನ್ನಡದ ಭರವಸೆಯ ನಿರ್ದೇಶಕ ಎಂದೆಸಿಸಿಕೊಂಡಿದ್ದ ರಿಷಬ್‌ ಶೆಟ್ಟಿ ಮತ್ತೊಮ್ಮೆ ತಮ್ಮ ನಿರ್ದೇಶಕನದ ಚಾಣಕ್ಯತೆಯನ್ನು ಸಾಬೀತು ಮಾಡಿದ್ದಾರೆ. ರಿಷಬ್‌ ಶೆಟ್ಟಿ ನಿರ್ದೇಶನದ ಹಾಗೂ ಅಭಿನಯದ ಕಾಂತಾರ ಚಿತ್ರ ಇಂದು(ಸಪ್ಟೆಂಬರ್‌ ೩೦) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಕಾಂತಾರ ಚಿತ್ರವನ್ನು ಹಲವರು ಕಣ್ತುಂಬಿಕೊಂಡರೆ ಇನ್ನೂ ಕೆಲವರು ಹೃದಯ ತುಂಬಿಕೊಂಡು ರಿಷಬ್‌ ಶೆಟ್ಟಿ ನಿರ್ದೇಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ವಿಶ್ವದಾದ್ಯಂತ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ಚಿತ್ರದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನ ಕಾಂತಾರ ವೀಕ್ಷಣೆಗೆ ಮುಗಿಬಿದ್ದಿದ್ದಾರೆ. ಕಾಂತಾರ ಒಂದು ನೋಡಿ ಮರೆಯುವ ಚಿತ್ರವಲ್ಲ, ಅದು ನೋಡಿ ಅನುಭವಿಸುವ ಸಿನಿಮಾ ಎನ್ನುವುದು ಕಾಂತಾರಾ ಸಿನಿಮಾ ನೋಡಿರುವ ಪ್ರೇಕ್ಷಕರ ಅಭಿಪ್ರಾಯ. ಕಾಂತಾರ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ನಟರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದರಲ್ಲಿ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮೊದಲಿಗರು.

  'ಕಾಂತಾರ' ಮೊದಲ ದಿನದ ಗಳಿಕೆ ಲೆಕ್ಕಾಚಾರವೇನು? ಬಾಕ್ಸಾಫೀಸ್‌ನಲ್ಲಿ ಆದ ಕಲೆಕ್ಷನ್ ಎಷ್ಟು?'ಕಾಂತಾರ' ಮೊದಲ ದಿನದ ಗಳಿಕೆ ಲೆಕ್ಕಾಚಾರವೇನು? ಬಾಕ್ಸಾಫೀಸ್‌ನಲ್ಲಿ ಆದ ಕಲೆಕ್ಷನ್ ಎಷ್ಟು?

  ರಿಷಬ್‌ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ಮೊದಲ ಬಾರಿಗೆ ನೋಡಿದ ರಕ್ಷಿತ್‌ ಶೆಟ್ಟಿ ಸಂಭ್ರಮಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ರಿಷಬ್‌ ಶೆಟ್ಟಿ ಮಾತಿನಂತೆ ಈ ಮೊದಲು ಕಾಂತಾರವನ್ನು ವೀಕ್ಷಿಸಿದ ರಕ್ಷಿತ್‌ ಶೆಟ್ಟಿ ನಿನ್ನೆ(ಸಪ್ಟೆಂಬರ್ ೨೯) ಮೊದಲ ಬಾರಿಗೆ ಪ್ರೀಮಿಯರ್‌ ಶೋನಲ್ಲಿ ವೀಕ್ಷಿಸಿದ್ದಾರೆ.

  ಕಾಂತಾರ ಚಿತ್ರ ಮುಗಿದ ಮೇಲೆ ರಕ್ಷಿತ್ ಎರಡೂ ಕೈಗಳನ್ನು ಮೇಲಕೆತ್ತಿ ಚಪ್ಪಾಳೆ ಹೊಡೆಯುತ್ತಾರೆ. ಬಳಿಕ ತಾವಿದ್ದ ಸ್ಥಳದಿಂದ ಜಿಗಿದು ಓಡೋಡಿ ಬಂದು ರಿಷಬ್‌ ಶೆಟ್ಟಿಯನ್ನು ತಬ್ಬಿಕೊಳ್ಳುತ್ತಾರೆ. ಮೊದಲೇ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಭಾವುಕರಾಗಿದ್ದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ತಬ್ಬಿಕೊಳ್ಳುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ಈ ವೇಳೆ ರಿಷಬ್ ಪತ್ನಿ ಪ್ರಗತಿ ಕೂಡ ಭಾವುಕರಾಗಿದ್ದಾರೆ. ನಿನ್ನೆ ನಡೆದ ಕಾಂತಾರ ಪ್ರೀಮಿಯರ್‌ ಶೋ ಈ ಒಂದು ಸುಂದರ ಘಳಿಗೆಗೆ ಸಾಕ್ಷಿಯಾಯಿತು. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಸ್ನೇಹಕ್ಕೆ ಮನಸೋತಿದ್ದಾರೆ.

  ಕಾಂತಾರ ನೋಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಕ್ಷಿತ್‌ ಶೆಟ್ಟಿ, 'ಕಾಂತಾರ' ಚಿತ್ರದ ಕೊನೆಯ ಅರ್ಧಗಂಟೆ ಬ್ರಿಲಿಯಂಟ್‌, ತುಂಬಾ ಒಳ್ಳೆ ಸಿನಿಮಾ. ಕೊನೆಯ ಅರ್ಧ ಗಂಟೆ ನನಗೆ ರೋಮಾಂಚನ ಆಯ್ತು. ಸಿನಿಮಾ ಹಿಟ್‌ ಆಗುತ್ತದೆ ಅದರ ಬಗ್ಗೆ ನನಗೆ ಡೌಟಿಲ್ಲ. ಈ ಹಿಂದೆ ಯಾವ ಸಿನಿಮಾವೂ ನನಗೆ ಅಂತಹ ಅನುಭವ ಕೊಟ್ಟಿಲ್ಲ. ನನಗೆ ಗೊತ್ತು ಜನ ಈ ಚಿತ್ರವನ್ನು ಇಷ್ಟಪಡುತ್ತಾರೆ. ಕಾಂತಾರ ಯಾವಾಗಲೂ ನೆನಪಿನಲ್ಲಿರುವ ಸಿನಿಮಾವಾಗುತ್ತದೆ ಎಂದಿದ್ದರು. ಅಲ್ಲದೇ ತಮ್ಮ ಸೋಶಿಯಲ್‌ ಮೀಡಿಯಾದಲ್ಲೂ ಕಾಂತಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಕ್ಷಿತ್‌ ಶೆಟ್ಟಿ, ಚಿತ್ರದ ನಾಯಕ ರಿಷಬ್ ಶೆಟ್ಟಿ ಸೇರಿದಂತೆ ಸಂಪೂರ್ಣ ಚಿತ್ರತಂಡವನ್ನು ಅಭಿನಂದಿಸಿದ್ದರು.

  ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಕನ್ನಡ ಚಿತ್ರರಂಗದ ಭರವಸೆಯ ಕಲಾವಿದರು. ಒಬ್ಬೊರಿಗಿಂತ ಮತ್ತೊಬ್ಬರು ಉತ್ತಮ ಸಿನಿಮಾಗಳನ್ನೇ ಸ್ಯಾಂಡಲ್‌ವುಡ್‌ಗೆ ನೀಡಿದ್ದಾರೆ. ಹಾಗೆ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ನೀಡುವ ಪ್ರೋತ್ಸಾಹ ಕೂಡ ಅಷ್ಟೇ ಗಮನಾರ್ಹ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದ ರಿಕ್ಕಿ ಹಾಗೂ ಕಿರಿಕ್‌ ಪಾರ್ಟಿ ಎರಡೂ ಚಿತ್ರಗಳು ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಜೊತೆಯಾಗಿ ಮಾಡುವ ಮುಂದಿನ ಚಿತ್ರಕ್ಕಾಗಿ ಸಿನಿಮಾ ಪ್ರಿಯರು ಕಾತುರರಾಗಿದ್ದಾರೆ.

  English summary
  Sandalwood actor Rakshith Shetty hugs Rishab Shetty after watching Kantara movie. Know more about it.
  Friday, September 30, 2022, 21:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X