For Quick Alerts
  ALLOW NOTIFICATIONS  
  For Daily Alerts

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸುದ್ದಿ ಕೇಳಿ ನಟಿ ರಕ್ಷಿತಾ ಹೃದಯ ಛಿದ್ರ

  By Harshitha
  |

  ಹಿರಿಯ ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ, ವಿಚಾರವಾದಿ ಗೌರಿ ಲಂಕೇಶ್ (55) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ನಿವಾಸದ ಮುಂಭಾಗದಲ್ಲಿಯೇ ಮಂಗಳವಾರ (ಸೆಪ್ಟೆಂಬರ್ 5) ಸಂಜೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿದೆ.

  ನಿರ್ಭೀತ ಪತ್ರಕರ್ತೆ ಗೌರಿ ಲಂಕೇಶ್ ರವರ ಹತ್ಯೆಯ ಸುದ್ದಿ ಕೇಳಿ ನಟಿ ರಕ್ಷಿತಾ ಪ್ರೇಮ್ ಹೃದಯ ಛಿದ್ರವಾಗಿದೆ.

  ''ಗೌರಿ ಲಂಕೇಶ್ ರವರ ಹತ್ಯೆ ನಿಜಕ್ಕೂ ಹೃದಯ ವಿದ್ರಾವಕ ಘಟನೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದರಲ್ಲೂ, ಬೆಂಗಳೂರು ನಗರ ತುಂಬಾ ಸುರಕ್ಷಿತ ಎಂದು ಎಲ್ಲರೂ ಭಾವಿಸುತ್ತಾರೆ. ಅಂಥದ್ರಲ್ಲಿ ಒಬ್ಬರ ಹತ್ಯೆ ಆಗಿದೆ. ಅದು ಆಕೆಯ ಮನೆಯ ಮುಂದೆ. ನಮಗೆ ರಕ್ಷಣೆ ಇದ್ಯಾ ಅನ್ನೋದೇ ಈಗ ಪ್ರಶ್ನೆಯಾಗಿದೆ. ಗೌರಿ ಅಮ್ಮ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

  ಗೌರಿ ಲಂಕೇಶ್ ರವರ ಹತ್ಯೆಗೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹಲವು ಗಣ್ಯರು ಕೂಡ ಗೌರಿ ಲಂಕೇಶ್ ಹತ್ಯೆಯನ್ನ ಖಂಡಿಸಿದ್ದಾರೆ.

  English summary
  Kannada Actress, Producer, Rakshitha Prem has taken her facebook account to express condolences towards murder of Kannada Journalist, Gauri Lankesh (55)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X