ವರ್ಮಾ ಮಗಳ ನಿಶ್ಚಿತಾರ್ಥ ನಿರ್ವಿಘ್ನವಾಗಿ ಸಂಪನ್ನ

By Mahesh

RGV with daughter Revati
ವಿವಾದತ್ಮಕ ಕಮ್ ಸೃಜನಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಗಳ ನಿಶ್ಚಿತಾರ್ಥ ನಿರ್ವಿಘ್ನವಾಗಿ ನೆರವೇರಿದೆ. ಎಂಬಿಬಿಎಸ್ ಓದುತ್ತಿರುವ ವರ್ಮಾ ಮಗಳು ರೇವತಿ ವರ್ಮಾ ಅವರು ತಮ್ಮ ಗೆಳೆಯ ವೈದ್ಯ ಪವನ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೈದರಾಬಾದಿನ ರಾಡಿಸನ್ ಹೋಟೆಲ್ ನಲ್ಲಿ ಜ.2 ರಂಉದ್ ನಡೆದ ಈ ಶುಭ ಸಮಾರಂಭದಲ್ಲಿ ಕೇವಲ ಆಪ್ತ ಬಂಧು ವರ್ಗಕ್ಕಷ್ಟೇ ಆಹ್ವಾನ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಆದರೆ, ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಟ್ವೀಟ್ ನಂತರವಷ್ಟೇ ರೇವತಿ ವರ್ಮಾ ನಿಶ್ಚಿತಾರ್ಥದ ಸುದ್ದಿ ಹೊರ ಜಗತ್ತಿಗೆ ತಿಳಿಯಿತು.

ವರ್ಮಾ ಅಂತೂ ಎಂದಿನಂತೆ ಮದುವೆ, ಮಗಳ ಬಗ್ಗೆ ಮಾತನಾಡುವುದಿರಲಿ, ಟ್ವೀಟ್ ಕೂಡಾ ಮಾಡಿಲ್ಲ.

"Had the pleasure/previlage of watching @RGVzoomin playing a dutiful father at revathi's reception. What a sight!!!! Ha ha ha ha." ಎಂದು ರಾಜಮೌಳಿ ಟ್ವೀಟ್ ಮಾಡಿದ್ದರು.

ರೇವತಿ ಅವರ ಮದುವೆ ದಿನಾಂಕದ ಬಗ್ಗೆ ಇನ್ನೂ ಕುಟುಂಬ ವರ್ಗ ನಿರ್ಧರಿಸಿಲ್ಲ. ರೇವತಿ ಸೆಲೆಬ್ರಿಟಿ ಅಲ್ಲ ಆಕೆ ಮದುವೆಗೆ ಅನಗತ್ಯವಾಗಿ ಮಾಧ್ಯಮಗಳಲ್ಲಿ ಹೈಪ್ ನೀಡುವುದು ಇಷ್ಟವಿಲ್ಲ ಎಂದು ತಿಳಿದು ಬಂದಿದೆ.

ಪ್ರಚಾರದಿಂದ ದೂರ ಉಳಿಯಲು ಬಯಸುವ ಮಗಳು ಒಂದೆಡೆಯಾದರೆ, ಪ್ರಚಾರ ಪ್ರಿಯ ನಿರ್ದೇಶಕ ವರ್ಮಾ ತಮ್ಮ ತರ್ಲೆ ಟ್ವೀಟ್ ಗಳ ಮೂಲಕ ಎಲ್ಲರನ್ನು ಕಾಡುವುದು ಮಾಮೂಲಿ.

ಹಲವಾರು ವರ್ಷಗಳ ಕಾಲ ತಮಗೆ ಮಗಳಿದ್ದಾಳೆ ಎಂಬ ವಿಚಾರವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಪತ್ರಕರ್ತರು ಮದುವೆ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಿದ್ದರು. ಮದುವೆ ಸಂಬಂಧಗಳಲ್ಲಿ ನನಗೆ ನಂಬಿಕೆ ಇಲ್ಲ ಎನ್ನುತ್ತಿದ್ದರು. ಆದರೆ ಅವರಿಗೆ ಮಗಳೊಬ್ಬರು ಇದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬಂದಿತ್ತು.

ವರ್ಮಾ ಸಹೋದರಿಯ ಮಗನ ಮದುವೆ ಸಮಾರಂಭದಲ್ಲಿ ರಾಮ್ ಗೋಪಾಲ್ ಅವರ ಪುತ್ರಿ ರೇವತಿ ಕಾಣಿಸಿಕೊಂಡಿದ್ದರು. ವರ್ಮಾ ಅವರ ಮಾಜಿ ಹೆಂಡತಿ ರತ್ನಶ್ರೀ ಅವರು ಕೂಡಾ ಮದುವೆ ಸಮಾರಂಭದಲ್ಲಿದ್ದರು. ಆದರೆ, ವರ್ಮಾ ಮಾತ್ರ ಈ ಬಗ್ಗೆ ಯಾರಲ್ಲೂ ಏನು ಹೇಳಿರಲಿಲ್ಲ.

ರಕ್ತ ಚರಿತ ಚಿತ್ರದ ಸರಣಿ ಹೊರ ತರುವಲ್ಲಿ ನಿರತರಾಗಿದ್ದ ವರ್ಮಾ ಕೊಂಚ ಬ್ರೇಕ್ ತೆಗೆದುಕೊಂಡು ಸಹೋದರಿ ಮಗನ ಮದುವೆಗೆ ಹೋಗಿ ಬಂದಿದ್ದರು. ಆದರೆ, ಅಲ್ಲಿ ತಮ್ಮ ಮಗಳನ್ನು ಕಂಡ ಬಗ್ಗೆ ಹೇಳಿರಲಿಲ್ಲ.

More from Filmibeat

English summary
Controversial filmmaker Ram Gopal Varma's daughter Revathi Varma, who is doing MBBS, has recently got engaged to her boyfriend Pravan, who is also a doctor. Revathi's engagement, which was held at Radisson Hotel in Hyderabad on January 2, 2013, was a private ceremony and was attended by close friends like SS Rajamouli and few others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X