ಪ್ರಿಯಾಂಕಾ ಹೇರ್ ಸ್ಟೈಲ್ ಬಗ್ಗೆ ನಿಲ್ಲದ ಟ್ರೋಲ್, ವರ್ಮಾ ಹೇಳಿದ್ದೇನು?

ಮೆಟ್ ಗಾಲಾ 2019ರಲ್ಲಿ ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ಕಾಸ್ಟ್ಯೂಮ್ ಹಾಗೂ ಹೇರ್ ಸ್ಟೈಲ್ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಪಿಗ್ಗಿಯ ಈ ಫೋಟೋ ಇಟ್ಕೊಂಡು ಹೇಗೆ ಬೇಕೋ ಹಾಗೆ ಟ್ರೋಲ್ ಮಾಡ್ತಿದ್ದಾರೆ.

ಪ್ರಿಯಾಂಕಾ ತಮ್ಮ ಡ್ರೆಸ್ ಹಾಗೂ ಕಿವಿಯೋಲೆಗಳಿಗೆ ಮಾತ್ರ ಸುಮಾರು 55 ಲಕ್ಷ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ವೀರಪ್ಪನ್ ಮೀಸೆಯ ಕೆಳಗೆ ಪ್ರಿಯಾಂಕಾ ಹೇರ್ ಸ್ಟೈಲ್ ನ ಹೊಂದಿಸಿ ಟ್ರೋಲ್ ಮಾಡ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೀಗೆ, ಎಲ್ಲ ರೀತಿಯಲ್ಲೂ ಪ್ರಿಯಾಂಕಾ ಟ್ರೋಲ್ ಆಗ್ತಿದ್ರೆ, ಮತ್ತೊಂದೆಡೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಸಲ್ಯೂಟ್ ಹೇಳಿದ್ದಾರೆ.

Ram gopal varma tweet on priyanka chopra hair style

ಈ ಬಗ್ಗೆ ಟ್ವೀಟ್ ಮಾಡಿರುವ ಆರ್.ಜಿ.ವಿ ''ಅತ್ಯಂತ ಜನಪ್ರಿಯವಾಗಿರುವ ವೀರಪ್ಪನ್ ಮೀಸೆಯ ಕೆಳಗೆ ಅಂಟಿಕೊಂಡಿರುವಂತೆ ಪ್ರಿಯಾಂಕಾ ಹೇರ್ ಸ್ಟೈಲ್ ಮಾಡಿರುವ ಆ ಹೇರ್ ಸ್ಟೈಲಿಸ್ಟ್ ಗೆ ನನ್ನ ಸಲ್ಯೂಟ್. ಐ ಲವ್ ಇಟ್'' ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಅಮೇರಿಕಾದಲ್ಲಿ ನಡೆದ 2019ನೇ ವರ್ಷದ ಮಟ್ ಗಾಲಾ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಒಟ್ಟಿಗೆ ಹೆಜ್ಜೆ ಹಾಕಿದ್ದರು. ವಿಶ್ವದ ಖ್ಯಾತ ನಟಿಯರು ಹಾಗೂ ಮಾಡೆಲ್ ಗಳು ಇಲ್ಲಿ ಮೋಡಿ ಮಾಡಿದ್ದರು. ಭಾರತದಿಂದ ಪ್ರಿಯಾಂಕ ಮತ್ತು ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು.

English summary
Director Ram gopal varma has tweet on priyanka chopra look at met gala 2019 and he salute to priyanka's hair stylist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X