»   » ಶಿವಣ್ಣನ 'ಟಗರು' ಅಡ್ಡದ 'ಶೇರ್' ಹೇಗಿದ್ದಾನೆ ಅಂತ ನೀವೇ ನೋಡಿ...

ಶಿವಣ್ಣನ 'ಟಗರು' ಅಡ್ಡದ 'ಶೇರ್' ಹೇಗಿದ್ದಾನೆ ಅಂತ ನೀವೇ ನೋಡಿ...

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಚಿತ್ರ 'ಟಗರು'. ಮೇಕಿಂಗ್ ಮತ್ತು ಮ್ಯೂಸಿಕ್ ಟ್ರ್ಯಾಕ್ ನಿಂದಲೇ ಫೇಮಸ್ ಆಗಿರುವ 'ಟಗರು' ಸಿನಿಮಾ ಮುಂದಿನ ವರ್ಷ (2018) ಪ್ರಾರಂಭದಲ್ಲೇ ರಿಲೀಸ್ ಆಗಲಿದೆ.

ಶಿವಣ್ಣನ ಜೊತೆಯಲ್ಲಿ ಧನಂಜಯ ಹಾಗೂ ವಸಿಷ್ಠ ಸಿಂಹ ಮುಖ್ಯಪಾತ್ರವನ್ನ ನಿರ್ವಹಿಸುತ್ತಿದ್ದು ಮಾನ್ವಿತಾ ಹರೀಶ್ ಹಾಗೂ ಜಾಕಿ ಭಾವನಾ ನಾಯಕಿಯರಾಗಿ ಕಾಣಿಸಿಕೊಳ್ಳುತಿದ್ದಾರೆ.

ಮಲ್ಟಿ ಸ್ಟಾರರ್ ಸಿನಿಮಾ ಆಗಿರುವ 'ಟಗರು' ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಜೊತೆಯಲ್ಲಿ ಟಗರು ಕೂಡ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ. ಹಾಗಾದ್ರೆ ಶಿವಣ್ಣನ ಆಕ್ಟ್ ಮಾಡಿರೋ ಟಗರು ಯಾವುದು, ಸಿನಿಮಾಗಾಗಿ ಟಗರನ್ನ ಹೇಗೆ ರೆಡಿ ಮಾಡಲಾಯ್ತು ಅನ್ನೋದರ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಗಾಗಿ ಮುಂದೆ ಓದಿ....

ಶಿವಣ್ಣ ವರ್ಸಸ್ ಟಗರು

ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದಲ್ಲಿ ನಿಜವಾದ ಟಗರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ. ಚಿತ್ರಕ್ಕಾಗಿಯೇ ಟಗರನ್ನ ತಯಾರು ಮಾಡಲಾಗಿದೆ. ಶರೀಫ್ ಅನ್ನೋರು ಈ ಟಗರನ್ನ ಸಾಕಿದ್ದು ಚಿತ್ರೀಕರಣಕ್ಕಾಗಿ ವಿಶೇಷ ತಾಲೀಮನ್ನೂ ಮಾಡಿಸಿದ್ದಾರೆ.

ಸೆಟ್ ನಲ್ಲಿ ಪ್ರೀತಿಯ ಶೇರ್

ಚಿತ್ರೀಕರಣಕ್ಕಾಗಿ ಟಗರನ್ನ ಕರೆತಂದ ದಿನದಿಂದ ಟಗರು ಎಲ್ಲರ ಪ್ರೀತಿಯನ್ನ ಗಳಿಸಿದೆ. ನಿರ್ದೇಶಕ ಸೂರಿ ಮತ್ತು ಶಿವಣ್ಣನಿಗಂತೂ ಟಗರು ಅಂದ್ರೆ ಬಹು ಅಚ್ಚುಮೆಚ್ಚು. ಶಿವರಾಜ್ ಕುಮಾರ್ ಶೇರ್ ಅಂತ ಟಗರಿಗೆ ನಾಮಕರಣ ಮಾಡಿದ್ದು, ಈಗ ಟಗರು ಚಿತ್ರದ ಶೇರ್ ಅಂತಾನೇ ಫೇಮಸ್ ಆಗಿದೆ.

ಹಾಲು ಕುಡಿಯುತ್ತಾನೆ ಶೇರ್

ಒಂದುವರೆ ವರ್ಷದ ವಯಸ್ಸಿನ ಈ ಶೇರ್ ಅನ್ನ ತುಂಬಾ ಕಾಳಜಿ ವಹಿಸಿ ಸಾಕುತಿದ್ದಾರೆ. ಪ್ರತಿನಿತ್ಯ ಮೂರು ಬಾರಿ ಹಾಲನ್ನ ಆಹಾರವಾಗಿ ನೀಡಲಾಗುತ್ತೆ. ಇದರ ಜೊತೆಗೆ ಬಾದಾಮಿ, ಪಿಸ್ತಾ ಕೂಡ ತಿನ್ನಿಸಲಾಗುತ್ತಂತೆ. ಬೆಳಗ್ಗೆ ತಿಂಡಿಗೆ ಗೋಧಿ ತಿನ್ನುವ ಶೇರ್ ನೋಡುವುದಕ್ಕೆ ಅಷ್ಟೇ ಅಲ್ಲದೆ ಸಖತ್ ಸ್ಟ್ರಾಂಗ್ ಆಗಿಯೂ ಇದ್ದಾನೆ.

ಟಗರು ಸಿನಿಮಾದಲ್ಲಿ ಮುಖ್ಯಪಾತ್ರ

ಬೆಂಗಳೂರಿನ ಮೈಸೂರು ರಸ್ತೆ ಬಳಿ ಇರುವ ಗೋರಿಪಾಳ್ಯದ ಶರೀಫ್ ಅನ್ನೋರಿಗೆ ಸೇರಿದ ಟಗರು ಈ ಶೇರ್. ಸಿನಿಮಗಾಗಿ ಟ್ರೈನಿಂಗ್ ನೀಡಲಾಗಿದ್ಯಂತೆ. ಶರೀಫ್ ಮಾತ್ರವಲ್ಲದೆ ಮನೆಯ ಮಂದಿಗೆಲ್ಲಾ ಶೇರ್ ಅಂದರೆ ತುಂಬಾ ಅಚ್ಚುಮೆಚ್ಚು. ಟಗರು ತೆರೆಗೆ ಬಂದ ನಂತರ ಮತ್ತಷ್ಟು ಸಿನಿಮಾಗಳಲ್ಲಿ ಶೇರ್ ಅಭಿನಯಿಸಲು ಸಿದ್ದನಾಗುತ್ತಿದ್ದಾನೆ.

English summary
Real Tagaru has acted in Kannada movie 'Tagaru' starring Shivaraj Kumar directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada