Don't Miss!
- Automobiles
ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ
- News
ಪ್ರಧಾನಿ, ರಾಷ್ಟ್ರಪತಿ ಸೇರಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8ವರ್ಷದ ಬಾಲಕನ ಸಾಧನೆ ಏನು? ತಿಳಿಯಿರಿ
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Technology
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರೀಮುರಳಿ ಮಾಸ್ಕ್ ಧರಿಸಿ ದರ್ಶನ ಕೊಡುತ್ತಿರುವುದೇಕೆ? ಅಭಿಮಾನಿಗಳಿಗೆ ಶುರುವಾಯಿತು ಅನುಮಾನ
'ಉಗ್ರಂ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ ಗೆಲುವಿನ ಓಟ ಮುಂದುವರೆದಿದೆ. 'ಮಫ್ತಿ' ನಂತರ 'ಭರಾಟೆ' ಸಿನಿಮಾ ಕೂಡ ಹಿಟ್ ಆಗಿತ್ತು. ಕಳೆದ ವರ್ಷ ಶ್ರೀಮುರಳಿ ನಟಿಸಿದ 'ಮದಗಜ' ಬಹಳ ಸದ್ದು ಮಾಡಿತ್ತು. ಇದೀಗ 'ಬಘೀರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ರೋರಿಂಗ್ ಸ್ಟಾರ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಮಾಡಿದ್ದಾರೆ. ತಡವಾದರೂ ಸರಿ ಒಳ್ಳೆ ಒಳ್ಳೆ ಸಿನಿಮಾಗಳನ್ನು ಕೊಡಲು ಮನಸ್ಸು ಮಾಡಿದ್ದಾರೆ. ಕಥೆಗಳ ಆಯ್ಕೆ ವಿಚಾರದಲ್ಲಿ ಬಹಳ ಚ್ಯೂಸಿ ಆಗಿದ್ದಾರೆ. ಅಭಿಮಾನಿಗಳು ಬಾಸ್ ಬೇಗ ಬೇಗ ಸಿನಿಮಾ ಮಾಡಿ ಎಂದು ಕೇಳುತ್ತಿದ್ದಾರೆ. 'ಮದಗಜ' ರಿಲೀಸ್ ಆಗಿ ವರ್ಷ ಕಳೆದಿದೆ. ಇನ್ನು 6 ತಿಂಗಳು 'ಬಘೀರ' ಪ್ರೇಕ್ಷಕರ ಮುಂದೆ ಬರುವುದು ಡೌಟ್. ಮುಂದಿನ ವರ್ಷಾಂತ್ಯಕ್ಕೆ ತೆರೆಮೇಲೆ ಶ್ರೀಮುರಳಿ ಆರ್ಭಟ ಶುರುವಾಗುವ ಸಾಧ್ಯತೆಯಿದೆ.
ಶ್ರೀಮುರಳಿ
ಹುಟ್ಟುಹಬ್ಬಕ್ಕೆ
ಹೊಂಬಾಳೆ
ಫಿಲ್ಮ್ಸ್
ರಿಲೀಸ್
ಮಾಡಿದ
'ಬಘೀರ'
ಪೋಸ್ಟರ್‌ಗೆ
ಕೆಟ್ಟ
ಪ್ರತಿಕ್ರಿಯೆ!
ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೂ ಶ್ರೀಮುರಳಿ ಬ್ರೇಕ್ ಹಾಕಿದ್ದರು. ಆದರೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಸ್ಪೆಷಲ್ ವಿಡಿಯೋ ಮಾಡಿ ಧನ್ಯವಾದ ತಿಳಿಸಿದ್ದರು. ಇತ್ತೀಚಿಗೆ ರೋರಿಂಗ್ ಸ್ಟಾರ್ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಮಾಸ್ಕ್ ಹಾಕಿಕೊಂಡು ದರ್ಶನ
ನಟ ಶ್ರೀಮುರಳಿ 'ಬಘೀರ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡರೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಿದ್ಧಾರೆ. ಕೆಲವರಿಗೆ ಇದು ಅಚ್ಚರಿ ತಂದಿದೆ. ಇತ್ತೀಚೆಗೆ ಹುಟ್ಟುಹಬ್ಬಕ್ಕೆ ಬಾತ್ರೋಬ್ ಡ್ರೆಸ್‌ನಲ್ಲಿ ದರ್ಶನ ಕೊಟ್ಟಿದ್ದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಿಡಿಯೋ ಮಾಡಿದ್ದರು. ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಶ್ರೀಮುರಳಿ ಖಂಡಿಸಿದ್ದಾರೆ. ಅದಕ್ಕಾಗಿ ಮಾಡಿದ ವಿಡಿಯೋದಲ್ಲೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾರೆ.

'ಬಘೀರ' ಲುಕ್ ರಿವೀಲ್ ಆಗುವ ಭಯ?
ಹೌದು ರೋರಿಂಗ್ ಸ್ಟಾರ್ ಈ ರೀತಿ ಮುಖ ಮುಚ್ಚಿಕೊಂಡು ವಿಡಿಯೋಗಳನ್ನು ಮಾಡುತ್ತಿರುವುದು ಯಾಕೆ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. 'ಬಘೀರ' ಚಿತ್ರಕ್ಕಾಗಿ ಶ್ರೀಮುರಳಿ ವಿಭಿನ್ನ ಲುಕ್ ಟ್ರೈ ಮಾಡುತ್ತಿದ್ದಾರೆ. ಅದು ರಿವೀಲ್ ಆಗುವುದು ಬೇಡ ಎನ್ನುವ ಕಾರಣಕ್ಕೆ ಈ ರೀತಿ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಆ ಲುಕ್ ಒಳ್ಳೆ ರೀತಿಯಲ್ಲಿ ರಿವೀಲ್ ಆಗಬೇಕು, ಅಲ್ಲಿವರೆಗೂ ಕುತೂಹಲ ಇರಲಿ ಎಂದು ಈ ರೀತಿ ದರ್ಶನ ಕೊಡುತ್ತಿದ್ದಾರಂತೆ.

ಪೋಸ್ಟರ್‌ಗೆ ಮಿಶ್ರ ಪ್ರತಿಕ್ರಿಯೆ
ಇತ್ತೀಚೆಗೆ ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಬಘೀರ' ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿತ್ತು. ಆದರೆ ಈ ಪೋಸ್ಟರ್ ಬಗ್ಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಹಳೇ ಪೋಸ್ಟರ್‌ನ ಕೊಂಚ ಬದಲಿಸಿ ಮತ್ತೆ ರಿಲೀಸ್ ಮಾಡಿದ್ದಾರೆ. ಬೇರೆ ಫೋಟೊ ಇರಲಿಲ್ಲವಾ? ಎಂದು ಕಾಮೆಂಟ್ ಮಾಡಿದ್ದರು. ಮತ್ತೆ ಕೆಲವರು ಪೋಸ್ಟರ್ ಚೆನ್ನಾಗಿದೆ ಎಂದಿದ್ದರು. ಅಂದಹಾಗೆ 'ಬಘೀರ' ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಡಾ. ಸೂರಿ ಆಕ್ಷನ್ ಕಟ್ ಹೇಳ್ತಿದ್ದಾರೆ.

ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್
ನಟ ಶ್ರೀಮುರಳಿ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಲೇಶ್ ಕೊಗುಂಡಿ ಎಂಬುವವರು ಹೇಳಿರುವ ಕಥೆ ರೋರಿಂಗ್ ಸ್ಟಾರ್‌ಗೆ ಇಷ್ಟವಾಗಿದೆ. ಇದೊಂದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಥೀಮ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. 'ಬಘೀರ' ನಂತರ ಈ ಸಿನಿಮಾ ಸೆಟ್ಟೇರಲಿದೆ. ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನಲಾಗ್ತಿದೆ.