For Quick Alerts
  ALLOW NOTIFICATIONS  
  For Daily Alerts

  ಹೊಸ ಬರಹಗಾರರ ಹುಡುಕಾಟದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ

  |

  ಒಂದು ಸಿನಿಮಾದ ಆತ್ಮ ಇರುವುದು ಕಥೆಯಲ್ಲಿ. ಒಂದು ಒಳ್ಳೆಯ ಸಿನಿಮಾ ಮಾಡಬೇಕು ಅಂದರೆ, ಮೊದಲು ಒಂದು ಒಳ್ಳೆಯ ಕಥೆ ಬೇಕು. ಹೀಗಿದ್ದರೂ, ಕನ್ನಡ ಇಂಡಸ್ಟ್ರಿಯಲ್ಲಿ ಬರಹಗಾರರಿಗೆ ಬೆಲೆ ನೀಡುವುದಿಲ್ಲ ಎಂಬ ಆರೋಪ ಇದ್ದೇ ಇದೆ.

  ಆದರೆ, ಇಂದಿನ ದಿನದಲ್ಲಿ ಒಳ್ಳೆ ಒಳ್ಳೆಯ ಕಥೆಯ ಸಿನಿಮಾಗಳು ಗೆಲ್ಲುತ್ತಿದೆ. ಅನೇಕ ಸಿನಿಮಾಗಳಲ್ಲಿ ಕಥೆಯೇ ಸ್ಟಾರ್ ಆಗಿದೆ. ಆ ಕಾರಣ ರೈಟರ್ ಗಳಿಗೆ ಸಹ ಹೀಗಿಗಾ ಒಳ್ಳೆಯ ಅವಕಾಶಗಳು ಸಿಗುತ್ತಿದೆ.

  ನಿರ್ದೇಶಕ, ನಟ, ನಿರ್ಮಾಪಕ ರಿಷಬ್ ಶೆಟ್ಟಿ ಈಗ ಬರಹಗಾರರಿಗೆ ಒಂದು ಒಳ್ಳೆಯ ಅವಕಾಶ ನೀಡಿದ್ದಾರೆ. ಮೂರು ಪ್ರಶ್ನೆಗಳನ್ನು ನೀಡಿದ್ದು, ಅದಕ್ಕೆ ಸರಿಯಾದ ಉತ್ತರ ಬರೆದು ಕಳುಹಿಸಿದವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡಲಿದ್ದಾರೆ.

  ಅಂತ್ಯಸಂಸ್ಕಾರದ ಸಮಯದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವೊಂದನ್ನು ಸಂಭಾಷಣೆ ಸಹಿತ ದೃಶ್ಯವಾಗಿ ಬರೆಯುವುದು, ಕ್ಯಾರೆಕ್ಟರ್ ಸ್ಕೆಚ್ ಬರೆಯುವುದು, ಹಾಗೂ ಕಿರಿಕ್ ಪಾರ್ಟಿ ಸಿನಿಮಾ ಗ್ಯಾಂಗ್ ಸ್ಟರ್ ಶೈಲಿಯ ಚಿತ್ರವಾಗಿದ್ದರೆ, ಅದರ ಕಥೆಯ ಏಳೆಯನ್ನು ಬರೆದು ಕಳುಹಿಸಬೇಕಾಗಿದೆ.

  ಈ ಮೂರು ಪ್ರಶ್ನೆಗಳಿಗೆ ಕೆಲವು ನಿಯಮಗಳು ಇದು ಅವನ್ನು ಒಂದು ಪೋಸ್ಟರ್ ಮೂಲಕ ತಿಳಿಸಲಾಗಿದೆ. ಇದಕ್ಕೆ ಮೇ 23 ರವರೆಗೆ ಸಮಯಾವಕಾಶ ನೀಡಲಾಗಿದೆ. ನಿಮ್ಮ ಬರಹವನ್ನು writersf@gmail.com ಈ ಮೇಲ್ ವಿಳಾಸಕ್ಕೆ ಕಳುಹಿಸಬಹಬೇಕಾಗಿದೆ.

  English summary
  kannada director Rishab Shetty searching for a new writers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X