»   » ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಾಲ್ಕನೇ ಆವೃತ್ತಿಗೆ ವೇದಿಗೆ ಸಿದ್ಧವಾಗುತ್ತಿದೆ. ಇದೇ ಡಿಸೆಂಬರ್ 20ಕ್ಕೆ ಮುಂಬೈನಲ್ಲಿ ಸಿಸಿಎಲ್ 4ನೇ ಆವೃತ್ತಿ ಆರಂಭವಾಗಲಿದೆ. ಇದಕ್ಕಾಗಿ ಈಗಿನಿಂದಲೇ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿ ವಿಶೇಷ ಎಂದರೆ ಮಾಸ್ಟರ್ ಬ್ಲಾಸ್ಟರ್ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸುತ್ತಿರುವುದು. ಈ ಬಾರಿಯ ಆವೃತ್ತಿಯನ್ನು ಮತ್ತಷ್ಟು ವರ್ಣರಂಜಿತವಾಗಿಸಲು ಕಾರ್ಯಕ್ರಮ ನಿರ್ವಾಹಕರು ಪ್ರಯತ್ನಿಸುತ್ತಿದ್ದಾರೆ. [ಫೆಬ್ರವರಿಯಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 4 ಶುರು]

Sachin Tendulkar

ಈ ಬಾರಿಯೂ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸುದೀಪ್ ನಾಯಕತ್ವ ವಹಿಸುತ್ತಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ 2014ರ ಜನವರಿ ಕೊನೆಗೆ ಆಟ ಶುರುವಾಗಲಿದೆ. ಫೈನಲ್ ಮ್ಯಾಚ್ ಫೆಬ್ರವರಿ ಕೊನೆಗೆ ನಡೆಯಲಿದೆ.

ಇದೊಂದು ನಾನ್ ಪ್ರೊಫೆಷನಲ್ ಪುರುಷರ ಕ್ರಿಕೆಟ್ ಮ್ಯಾಚ್ ಅನ್ನಿಸಿಕೊಂಡಿದ್ದರೂ, ನಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಾರೆಗಳು ಆಡಿದ್ದಾರೆ. ಪಕ್ಕಾ ಪ್ರೊಫೆಷನಲ್ ಆಟ ಅಲ್ಲದಿದ್ದರೂ ಒಂದು ಮಟ್ಟಕ್ಕೆ ಅಭಿಮಾನಿಗಳನ್ನು ರಂಜಿಸಿದ್ದಾರೆ.

2011ರಲ್ಲಿ ಆರಂಭವಾದ ಸಿಸಿಎಲ್ ಲೀಗ್ ಗಳು ಬರುಬರುತ್ತಾ ಜನಪ್ರಿಯತೆ ಗಳಿಸಿಕೊಂಡವು. ಐಸಿಸಿ ಕ್ರಿಕೆಟ್ ಮ್ಯಾಚ್ ಗಳಿಗೂ ಇದರಿಂದ ಕೊಂಚ ಹೊಡೆತಬಿತ್ತು. ಸಿಸಿಎಲ್ ಮ್ಯಾಚ್ ಗಳಿಗೆ ಮಾಧ್ಯಮಗಳು ಸಾಕಷ್ಟು ಪ್ರಚಾರ ಕೊಡುವ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿತು.

ಇದುವರೆಗೂ ನಡೆದ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ಹಂತ ತಲುಪಿರುವುದು ವಿಶೇಷ. 2013ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಮಣ್ಣುಮುಕ್ಕಿಸಿ ಸಿಸಿಎಲ್ ಕಪ್ ತನ್ನದಾಗಿಸಿಕೊಂಡಿದೆ. (ಏಜೆನ್ಸೀಸ್)

English summary
Cricketer Bharat Ratna Sachin Tendulkar to launch the fourth edition of the Celebrity Cricket League in Mumbai on December 20, 2013. Celebrity Cricket League 2014 (CCL 4) is likely to start in the last week of January 2014. The final would take place in February end. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada