»   » ಯುವತಿ ಮೇಲಿನ ಕಿರುಕುಳ ಆರೋಪಕ್ಕೆ ಸಾಧುಕೋಕಿಲಾ ಪ್ರತಿಕ್ರಿಯೆ

ಯುವತಿ ಮೇಲಿನ ಕಿರುಕುಳ ಆರೋಪಕ್ಕೆ ಸಾಧುಕೋಕಿಲಾ ಪ್ರತಿಕ್ರಿಯೆ

Posted By:
Subscribe to Filmibeat Kannada

ಮೈಸೂರಿನ ಸ್ಪಾ ಸೆಂಟರ್ ನಲ್ಲಿ ನನ್ನ ಮೇಲೆ ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್ ಅವರು ದೌರ್ಜನ್ಯವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದರು. ಈ ಆರೋಪಕ್ಕೆ ಹಾಸ್ಯ ನಟ ಸಾಧು ಕೋಕಿಲಾ ಪ್ರತಿಕ್ರಿಯಿಸಿದ್ದಾರೆ.

''ಈ ಸುದ್ದಿಯನ್ನ ತಮ್ಮ ಮನೆಯವರಿಂದ ಕೇಳಿ ಶಾಕ್ ಆಗಿದೆ. ನನಗೆ ಅದು ಯಾರು ಎಂಬುದೇ ಗೊತ್ತಿಲ್ಲ ಯಾಕೆ ಹೀಗೆ ಮಾಡ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ. ಈ ಸೆಲೆಬ್ರಿಟಿ ಎಂಬ ಕಾರಣಕ್ಕೆ ಹೆಚ್ಚು ಮನೆಯಿಂದ ಹೊರಗಡೆ ಹೋಗುವುದಕ್ಕೆ ಆಗಲ್ಲ. ಸಲೂನ್ ಶಾಪ್ ಗೆ ಕೂಡ ಹೋಗಲ್ಲ. ಅವರನ್ನೇ ಮನೆಯ ಬಳಿ ಕರೆಸಿಕೊಳ್ಳುತ್ತೇನೆ'' ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

sadhu kokila react about his controversy

ಮಂಡ್ಯ ರಮೇಶ್, ಸಾಧುಕೋಕಿಲ ಮೇಲೆ ಲೈಂಗಿಕ ಶೋಷಣೆ ಆರೋಪ!

ಸದ್ಯ, ಸಾಧುಕೋಕಿಲಾ ಅವರು ಚಿತ್ರದ ಸಂಗೀತದ ಕಾರ್ಯ ನಿಮಿತ್ತ ಚೆನ್ನೈನಲ್ಲಿದ್ದಾರೆ. ಬೆಂಗಳೂರಿಗೆ ಆಗಮಿಸಿದ ನಂತರ ಈ ಬಗ್ಗೆ ವಿಚಾರಿಸುತ್ತಾರಂತೆ. ಈ ಬಗ್ಗೆ ಮಂಡ್ಯ ರಮೇಶ್ ಅವರು ಕೂಡ ಈಗಾಗಲೇ ಮಾತನಾಡಿದ್ದು, ''ನನಗೆ ಮತ್ತು ಈ ಘಟನೆಗೆ ಸಂಬಂಧ ಇಲ್ಲ. ನನ್ನ ಹೆಸರು ಈ ಪ್ರಕರಣಕ್ಕೆ ಯಾಕೆ ಕೇಳಿ ಬಂದಿದೆ ಎಂಬುದು ನನಗೆ ತಿಳಿದಿಲ್ಲ. ಒಬ್ಬರು ಯಾರ ಮೇಲೆ ಬೇಕಾದರು ಈ ರೀತಿ ಆರೋಪ ಮಾಡಬಹದು ಅಂದರೆ ಹೇಗೆ. ಆ ಹುಡುಗಿ ಯಾಕೆ ನನ್ನ ಹೆಸರು ತೆಗೆದುಕೊಂಡರು ಗೊತ್ತಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಪೂರವೇ ಇಲ್ಲ. ನನಗೆ ಮಸಾಜ್ ಮಾಡಿಸಿಕೊಳ್ಳುವ ಅಭ್ಯಾಸವೇ ನನಗೆ ಇಲ್ಲ'' ಎಂದಿದ್ದರು.

ಮಂಡ್ಯ ರಮೇಶ್ ಮೇಲಿನ ಆರೋಪದ ಬಗ್ಗೆ ನಟ ಜಗ್ಗೇಶ್ ಬೇಸರ

ಮತ್ತೊಂದೆಡೆ ಯುವತಿ ಮೈಸೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಹೇಳಿಕೆ ನೀಡಿದ್ದಾರಂತೆ. ಒಟ್ನಲ್ಲಿ, ಪೊಲೀಸರ ಪ್ರಮಾಣಿಕ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.

English summary
Kannada actor sadhu kokila react about his controversy. Girl who was working in spa at Mysuru, alleged about sexual exploitation against actors Kannada film actors Mandya Ramesh and Sadhu Kokila. ಸಾಧುಕೋಕಿಲಾ ಮತ್ತು ಮಂಡ್ಯ ರಮೇಶ್ ಅವರ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಸಾಧು ಕೋಕಿಲಾ ಪ್ರತಿಕ್ರಿಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X