'ಡಬಲ್ ಮೀನಿಂಗ್' ಸಿನಿಮಾ ಮಾಡ್ತಿಲ್ಲ: ಸಾಯಿಪ್ರಕಾಶ್
ಬಣ್ಣದ ಲೋಕದಲ್ಲಿ ಗಾಸಿಪ್ ಸುದ್ದಿಗಳು ಸರ್ವೇ ಸಾಮಾನ್ಯ. ಅದರಲ್ಲೂ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಅಂತೆಕಂತೆಗಳ ಸುದ್ದಿಗಳು ಪ್ರತಿನಿತ್ಯ ಕಿವಿಗೆ ಬೀಳುತ್ತಲೇ ಇರುತ್ತವೆ. ಅಂತಹದ್ದೇ ಒಂದು ಗಾಳಿ ಸುದ್ದಿ ಇತ್ತೀಚೆಗೆ ಒನ್ಇಂಡಿಯಾ ಕನ್ನಡದಲ್ಲೂ ಪ್ರಕಟವಾಗಿತ್ತು.
ಅದೇನೆಂದರೆ ಖ್ಯಾತ ನಿರ್ದೇಶಕ ಸಾಯಿ ಪ್ರಕಾಶ್ ಅವರು 'ಡಬಲ್ ಮೀನಿಂಗ್' ಟೈಟಲ್ ನಲ್ಲಿ ಸಿನಿಮಾ ಮಾಡ್ತಿದ್ದಾರೆ ಎಂಬುದು. ಆದರೆ ತಾವು ಆ ರೀತಿಯ ಯಾವುದೇ ಚಿತ್ರವನ್ನು ಮಾಡುತ್ತಿಲ್ಲ ಎಂದು ಖುದ್ದು ಸಾಯಿ ಪ್ರಕಾಶ್ ತಿಳಿಸಿದ್ದಾರೆ. [ಡಬಲ್ ಮೀನಿಂಗ್ ಚಿತ್ರ]

ಸದ್ಯಕ್ಕೆ ಆಕ್ಷನ್ ಕ್ವೀನ್ ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ 'ಗಂಗಾ' ಚಿತ್ರದಲ್ಲಿ ತಾವು ಬಿಜಿಯಾಗಿರುವುದಾಗಿ ಸಾಯಿ ಪ್ರಕಾಶ್ ತಿಳಿಸಿದರು. 'ಗಂಗಾ' ಚಿತ್ರವು ಸೌಮ್ಯ ಹಾಗೂ ಕ್ರೌರ್ಯ ಗಳ ಸಂಗಮವಾಗಿದೆ . ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಹೊಂದಿದ್ದು ರಾಮು ಎಂಟೆರ್ಪ್ರೈಸೆಸ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ.
ಇನ್ನು 'ಡಬಲ್ ಮೀನಿಂಗ್' ಚಿತ್ರದ ಶೀರ್ಷಿಕೆಯನ್ನು ಹೊಸ ನಿರ್ಮಾಪಕ ಎ ರಾಮು ಎಂಬುವವರು ಓಂ ಸಾಯಿ ರಾಮ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ನೋಂದಾಯಿಸಿಕೊಂಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











