For Quick Alerts
  ALLOW NOTIFICATIONS  
  For Daily Alerts

  'ಸಲಗ' ಮೊದಲ ಶೆಡ್ಯೂಲ್ ಮುಗಿಸಿದ ದುನಿಯಾ ವಿಜಯ್

  |

  ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡ್ತಿರುವ ಸಲಗ ಸಿನಿಮಾ ಭರದಿಂದ ಚಿತ್ರೀಕರಣ ಮಾಡ್ತಿದೆ. ಚಿತ್ರದ ಮುಹೂರ್ತ ಮಾಡಿಕೊಂಡ ದಿನದಿಂದ ಬೆಂಗಳೂರು ಸುತ್ತಾಮುತ್ತ ಚಿತ್ರೀಕರಣ ಮಾಡ್ತಿದ್ದ ಸಲಗ ಯಶಸ್ವಿಯಾಗಿ ಮೊದಲ ಶೆಡ್ಯುಲ್ ಮುಗಿಸಿದೆ.

  ಅಂದುಕೊಂಡಂತೆ ಮೊದಲ ಹಂತದ ಚಿತ್ರೀಕರಣ ಮುಗಿಸಿದ ದುನಿಯಾ ವಿಜಯ್, ತಮ್ಮ ತಂಡದೊಂದಿಗೆ ರಿಲ್ಯಾಕ್ಸ್ ಆಗಿದ್ದಾರೆ. ಈ ಕುರಿತು ಫೋಟೋವೊಂದನ್ನ ಹಂಚಿಕೊಂಡಿರುವ ವಿಜಿ, ಫುಲ್ ಖುಷಿಯಾಗಿದ್ದಾರೆ.

  ಭರ್ಜರಿ ಚಿತ್ರೀಕರಣದಲ್ಲಿ ದುನಿಯಾ ವಿಜಯ್ 'ಸಲಗ'

  ಕೆ ಪಿ ಶ್ರೀಕಾಂತ್ ನಿರ್ಮಾಣ ಈ ಚಿತ್ರದಲ್ಲಿ ಸ್ವತಃ ದುನಿಯಾ ವಿಜಯ್ ಅವರೇ ನಾಯಕನಾಗಿ ನಟಿಸುತ್ತಿದ್ದು, ಬಹುಮುಖ್ಯ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ.

  ಕಂಪ್ಲೀಟ್ ಅಂಡರ್ ವಲ್ಡ್ ಆಧರಿತ ಸಿನಿಮಾ ಇದಾಗಿದ್ದು, ಕೆಲವು ನೈಜ ಘಟನೆಗಳು ಮತ್ತು ನೈಜ ಅನುಭವಗಳನ್ನ ಕಥೆಯನ್ನಾಗಿಸಿ, ಚಿತ್ರಕಥೆ ಮಾಡಿ ತೆರೆಗೆ ತರಲಿದ್ದಾರಂತೆ ದುನಿಯಾ ವಿಜಿ.

  ಸುದೀಪ್ ಹೇಳಿದ್ದ ಮಾತು ಧನಂಜಯ್ ಜೀವನದಲ್ಲಿ ನಿಜ ಆಯ್ತು

  ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ನಟಿ ಸಂಜನಾ ಆನಂದ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಸೇರಿದಂತೆ ಟಗರು ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ಅದೇ ತಾಂತ್ರಿಕ ತಂಡ ಇಲ್ಲಿಯೂ ಕೆಲಸ ಮಾಡ್ತಿದೆ.

  English summary
  Kannada actor duniya vijay first time directional movie salaga successfully complete first schedule at banglore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X