'ಸತ್ಯಾನಂದ' ಚಿತ್ರಕ್ಕೆ ಹೊಸ ಹೆಸರು 'ಯಾರಿವನು'
ಕಡೆಗೂ 'ಸತ್ಯಾನಂದ' ಚಿತ್ರಕ್ಕೆ ಟೈಟಲ್ ಬದಲಾಗಿದೆ. ಹೊಸ ಟೈಟಲ್ ಕ್ಯಾಚಿಯಾಗಿದ್ದು ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಸಖತ್ ಖುಷಿಯಾಗಿದ್ದಾರೆ. 'ಸತ್ಯಾನಂದ' ಎಂಬ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಪಟೇಲ್ ಕಾರ್ಯಮಗ್ನರಾಗಿದ್ದರು.
ತಮ್ಮ 'ಸತ್ಯಾನಂದ' ಚಿತ್ರಕ್ಕೆ ಹೊಸ ಟೈಟಲ್ ಸೂಚಿಸಿ ಎಂದು ಅವರು ಕರೆಕೊಟ್ಟಿದ್ದರು. ಸೂಕ್ತ ಶೀರ್ಷಿಕೆ ಸೂಚಿಸಿ ಆಯ್ಕೆಯಾದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಮದನ್ ಪಟೇಲ್ ಅವರ ಕರೆಗೆ ಓಗೊಟ್ಟ ಸಾವಿರಾರು ಎಸ್ಎಂಎಸ್ ಗಳು ಬಂದಿವೆ.

ಆಯ್ಕೆಯಾಗಿರುವ ಅದೃಷ್ಟಶಾಲಿ ಹೆಸರು ಮಂಡ್ಯದ ರಾಜೇಶ್. ಈ ಟೈಟಲ್ ಸಮಸ್ಯೆಯೂ ಪರಿಹಾರವಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯಾಗುವುದೊಂದು ಬಾಕಿ ಇದೆ. ಈ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರು ಅಭಿನಯದಲ್ಲಿ 'ಯಾರಿವನು' ಎಂಬ ಚಿತ್ರ ಮೂಡಿಬಂದಿತ್ತು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಪ್ರೇಮಲೋಕ' ಚಿತ್ರದಲ್ಲಿ "ಯಾರಿವನು ಈ ಮನ್ಮಥನು..." ಎಂಬ ಹಾಡು ನೆನಪಿರಬೇಕಲ್ಲ. ಬಹುಶಃ 'ಯಾರಿವನು' ಚಿತ್ರದ ನಾಯಕನು ಮನ್ಮಥನೇ ಇರಬೇಕು? (ಒನ್ಇಂಡಿಯಾ ಕನ್ನಡ)


Click it and Unblock the Notifications











