twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಿರ್ಮಾಣ ನಿರ್ವಾಹಕ ರಮೇಶ್ ಬಾಬು ನಿಧನ

    By Rajendra
    |

    ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಣ ನಿರ್ವಾಹಕ ಎ ವಿ ರಮೇಶ್ ಬಾಬು ಅವರು ಮಂಗಳವಾರ (24ನೇ ಡಿಸೆಂಬರ್ 2013) ಹೃದಯಾಘಾತದಿಂದ ಅಸುನೀಗಿದ್ದಾರೆ. ಜೆ ಪಿ ನಗರದ ನಿವಾಸದಲ್ಲಿ ಬಾಬು ಅವರ ಪಾರ್ಥೀವ ಶರೀರವನ್ನು ಇಡಲಾಗಿದ್ದು ಚಿತ್ರರಂಗದ ಕೆಲವರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವ ರಮೇಶ್ ಬಾಬು ಅವರು ಆಗಿನ ಕಾಲದಲ್ಲೇ ಮದ್ರಾಸ್ ನಿರ್ಮಾಣ ನಿರ್ವಾಹಕರ ಸಂಘದ ಸದಸ್ಯರಾಗಿದ್ದರು. ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅವರಿಗೆ ಎರಡು ವರ್ಷದ ಹಿಂದೆ ತೆರೆದ ಹೃದಯ ಚಿಕಿತ್ಸೆ ಸಹ ಮಾಡಲಾಗಿತ್ತು.

    Ramesh Babu
    ಮೃದು ಸ್ವಭಾವ, ನಿರ್ಮಾಣ ನಿರ್ವಹಣೆಯಲ್ಲಿ ಪ್ರವೀಣರಾಗಿದ್ದ ರಮೇಶ್ ಬಾಬು ಅವರು 60 ವಯಸ್ಸಿನಲ್ಲಿ ಸುಮಾರು 40 ವರ್ಷಗಳನ್ನು ಕನ್ನಡ ಸಿನೆಮಾ ನಿರ್ವಹಣೆಯಲ್ಲಿ ಸಕ್ರಿಯರಾಗಿ 150 ಕನ್ನಡ ಸಿನಿಮಾಗಳಿಗೆ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತು ದುಡಿದವರು. ಇವರು 'ವಿಜಯ ಕ್ರಾಂತಿ' ಕನ್ನಡ ಸಿನೆಮಾ ನಿರ್ಮಾಪಕರು ಹಾಗೂ ಹೆಸರಾಂತ ನಟಿ ಸೌಂದರ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು.

    ಕನ್ನಡ ಸಿನಿಮಾ ರಂಗದಲ್ಲಿ ಇವರ ಜಾಣ್ಮೆ ಕೆಲಸದಲ್ಲಿ ಕೌಶಲ್ಯ ಹಾಗೂ ಸದ್ಭಾವನೆ ಅವರಿಗೆ ಕಳಶಪ್ರಾಯವಾಗಿತ್ತು. ರಮೇಶ್ ಬಾಬು ಅವರ ನಿಧನಕ್ಕೆ ಕರ್ನಾಟಕ ಚಲನ ಚಿತ್ರ ನಿರ್ಮಾಣ ನಿರ್ವಾಹಕರ ಸಂಘ ಅವರ ಸೇವೆಯನ್ನು ಶ್ಲಾಘಿಸಿದೆ. ಕನ್ನಡ ಸಿನಿಮಾ ಪ್ರಚಾರಕರ್ತರ ಸಂಘದ ಅಧ್ಯಕ್ಷ ನಾಗೇಂದ್ರ, ಆರ್ ವಿಜಯಕುಮಾರ್, ರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್, ಕಲ್ಲೇಶ್, ಆರ್ ಎಸ್ ಹರೀಶ್ ಅವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    Kannada films senior production executive A.V.Ramesh Babu died of a heart attack on 24th December in Bangalore. He was 60. He was the first person who introduced South Indian actress Soundarya, to film industry.
    Tuesday, December 24, 2013, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X