For Quick Alerts
  ALLOW NOTIFICATIONS  
  For Daily Alerts

  ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಶಿಕುಮಾರ್ ರೀ ಎಂಟ್ರಿ!

  |

  ಒಂದು ಕಾಲದ ಸುರಸುಂದರಾಂಗ ಶಶಿಕುಮಾರ್ ಬಹು ವರ್ಷದ ಗ್ಯಾಪ್ ನಂತರ ಮತ್ತೆ ಚಿತ್ರರಂಗ ಪ್ರವೇಶಿಸಿದ್ದಾರೆ.

  ಈಗಾಗಲೇ ಕೆಲವು ಚಿತ್ರಗಳಿಗೆ ಪೋಷಕ ಪಾತ್ರಕ್ಕೆ ಸಹಿ ಹಾಕಿರುವ ಶಶಿಕುಮಾರ್, ಇದೀಗ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮತ್ತೆ ಬೆಳ್ಳಿತೆರೆ ಮೇಲೆ ಬರಲಿದ್ದಾರೆ.

  'ಶಂಭೋ ಶಿವ ಶಂಕರ' ಸಿನಿಮಾದಲ್ಲಿ ಶಶಿಕುಮಾರ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಶಂಕರ್ ಕೋನಮಳ್ಳಿ ನಿರ್ದೇಶಿಸುತ್ತಿರುವ ಶಂಭೋ ಶಿವ ಶಂಕರ ಸಿನಿಮಾದಲ್ಲಿ ಶಶಿಕುಮಾರ್ ಅವರದ್ದು ಮಹತ್ವದ ಪಾತ್ರವಂತೆ. ಈ ಹಿಂದೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್‌ ಗೆ ಇದು ಮೊದಲನೇ ಪೂರ್ಣ ಪ್ರಮಾಣದ ಸಿನಿಮಾ.

  Sashikumar ಮಗನ್ನನ್ನು ನೋಡಿ ಇದು ಗೌರವ ಪಡುವಂತಹ ವಿಚಾರ ಎಂದ Shivanna | Seethayanam | Filmibeat Kannada

  ನಟ ಶಶಿಕುಮಾರ್ ಈಗಾಗಲೇ ಶಿವರಾಜ್ ಕುಮಾರ್ ನಟಿಸುತ್ತಿರುವ ಶಿವಪ್ಪ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಶಂಭೋ ಶಿವ ಶಂಕರ ಸಿನಿಮಾ ಸಹ ಶಶಿಕುಮಾರ್ ಖಾತೆಗೆ ಸೇರುತ್ತಿದೆ.

  ಒಂದು ಕಾಲದ ಸೂಪರ್ ಹಿಟ್ ನಟ ಶಶಿಕುಮಾರ್ ಹಲವು ವರ್ಷ ಸಿನಿಮಾ ರಂಗದಿಂದ ದೂರ ಉಳಿದಿದ್ದರು, ಇದೀಗ ಸಿನಿಮಾ ರಂಗವನ್ನು ಮತ್ತೆ ಪ್ರವೇಶಿಸಿದ್ದಾರೆ.

  ಶಶಿಕುಮಾರ್ ಮಗ ಅಕ್ಷಿತ್ ಕುಮಾರ್ ಸಹ ಸಿನಿಮಾ ರಂಗ ಪ್ರವೇಶಿಸಿದ್ದು ಅಕ್ಷತ್ ನಟನೆಯ 'ಸೀತಾಯಣ' ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾವು ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  English summary
  Seniour Actor Shashikumar back to big screen. He is acting in Shambo Shiva Shankara movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X