For Quick Alerts
  ALLOW NOTIFICATIONS  
  For Daily Alerts

  'ಪದ್ಮಾವತಿ' ಸಾಮ್ರಾಟ್ ಜೀವನದಲ್ಲಿ 'ಡಿ-ಬಾಸ್' ಟರ್ನಿಂಗ್ ಪಾಯಿಂಟ್.!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡ್ರೆ ಇಂಡಸ್ಟ್ರಿಯಲ್ಲೇ ಹೆಚ್ಚು ಸ್ಟಾರ್ ಗಳಿಗೆ ಇಷ್ಟ. ಇತ್ತೀಚಿನ ಯುವ ನಟರಿಗೆ ದರ್ಶನ್ ಒಂದು ರೀತಿ ಸ್ಫೂರ್ತಿ ಮತ್ತು ರೋಲ್ ಮಾಡೆಲ್ ಕೂಡ ಹೌದು.

  ದರ್ಶನ್ ಅವರ ಸಿನಿಮಾಗಳನ್ನ ನೋಡಿ, ಅವರಂತೆ ಬೆಳೆಯಬೇಕು, ಸ್ಟಾರ್ ಆಗ್ಬೇಕು ಎಂದು ಅದೇಷ್ಟೋ ಜನ ಇಂಡಸ್ಟ್ರಿಗೆ ಬಂದಿದ್ದಾರೆ. ಅದರಲ್ಲಿ ಅನೇಕರು ಸಕ್ಸಸ್ ಕೂಡ ಕಂಡಿದ್ದಾರೆ.

  ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್

  ಹೀಗೆ, ದರ್ಶನ್ ಸಿನಿಮಾ ನೋಡಿ ಸ್ಫೂರ್ತಿಯಾದ ಯುವಕನೊಬ್ಬ ಈಗ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪದ್ಮಾವತಿ' ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚುತ್ತಿರುವ ಸಾಮ್ರಾಟ್ ಗೆ ದರ್ಶನ್ ಸ್ಫೂರ್ತಿ ಅಂತೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಹಾಗಿದ್ರೆ, ದರ್ಶನ್ ಬಗ್ಗೆ ಸಾಮ್ರಾಟ್ ಏನಂದ್ರು? ಮುಂದೆ ಓದಿ.....

  'ದತ್ತ' ನೋಡಿ ಡಿಸೈಡ್ ಮಾಡಿದ್ರು

  'ದತ್ತ' ನೋಡಿ ಡಿಸೈಡ್ ಮಾಡಿದ್ರು

  'ಪದ್ಮಾವತಿ' ಧಾರಾವಾಹಿಯಲ್ಲಿ ಸಾಮ್ರಾಟ್ ಸೂಪರ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಗೆ ಇವರು ಸೂಪರ್ ಸ್ಟಾರ್ ಆಗಿದ್ದರೇ, ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಪರ್ ಸ್ಟಾರ್ ಅಂತೆ. ದರ್ಶನ್ ಅಭಿನಯದ 'ದತ್ತ' ಸಿನಿಮಾ ನೋಡಿ ಸ್ಪೂರ್ತಿಯಾದರಂತೆ ಸಾಮ್ರಾಟ್.

  'ಬಿಗ್ ಬಾಸ್' ವೇದಿಕೆಯಲ್ಲಿ 'ಯಜಮಾನ'ನನ್ನ ನೆನೆದ ಸುದೀಪ್

  ಅಮ್ಮ ಹೇಳಿದ್ದನ್ನ ಚಾಲೆಂಜಿಂಗ್ ಆಗಿ ತಗೊಂಡೆ

  ಅಮ್ಮ ಹೇಳಿದ್ದನ್ನ ಚಾಲೆಂಜಿಂಗ್ ಆಗಿ ತಗೊಂಡೆ

  ದತ್ತ ಸಿನಿಮಾವನ್ನ ಮನೇಲಿ ನೋಡಬೇಕಾದರೇ ನಮ್ಮ ತಾಯಿ ''ನನ್ ಮಗ ನಿಜವಾಗಲೂ ಹೀಗೆ ಆಗಲ್ಲ'' ಎಂದಿದ್ದರು. ನನಗೆ ಹೀಗಂದ್ರಾ ಅಂತ ನಾನು ಸವಾಲಾಗಿ ತಗೊಂಡು, ದರ್ಶನ್ ಅವರ ತರನೇ ಹೇರ್ ಸ್ಟೈಲ್ ಮಾಡಿಸಿ ಒಂದೆರಡು ವರ್ಷ ಓಡಾಡ್ಕೊಂಡಿದ್ದೆ. ಬಟ್, ಇಂಡಸ್ಟ್ರಿಗೆ ಆಕಸ್ಮಾತ್ ಆಗಿ ಬಂದೆ'' ಎಂದು ಸಾಮ್ರಾಟ್ ಹೇಳಿಕೊಂಡರು.

  'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

  ಕ್ರಿಕೆಟ್ ಆಡೋಕೆ ಬೆಂಗಳೂರಿಗೆ ಬಂದಿದ್ದು

  ಕ್ರಿಕೆಟ್ ಆಡೋಕೆ ಬೆಂಗಳೂರಿಗೆ ಬಂದಿದ್ದು

  ''ನಟನಾಗ್ಬೇಕು ಎನ್ನುವುದು ನನ್ನ ಗುರಿಯಾಗಿರಲಿಲ್ಲ. ನನಗೆ ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಇತ್ತು. ಕ್ರಿಕೆಟರ್ ಆಗ್ಬೇಕು ಎಂದು ಬೆಂಗಳೂರಿಗೆ ಬಂದೆ. ಆದ್ರೆ, ಗಾಯದ ಸಮಸ್ಯೆಯಿಂದ ಮನೆಯಲ್ಲಿ ಕುಳಿತುಕೊಳ್ಳುವಂತಾಯಿತು. ನಂತರ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದೆ'' ಎಂದು ತಮ್ಮ ಬ್ಯಾಕ್ರೌಂಡ್ ಹೇಳಿದ್ರು ಸಾಮ್ರಾಟ್.

  'ಮದಕರಿ' ಚಿತ್ರವನ್ನ ಕೈಬಿಡಲು ಕಾರಣ ಬಿಚ್ಚಿಟ್ಟ ಸುದೀಪ್

  ಒಬ್ರು ಡೈರೆಕ್ಟರ್ ಬಂದ್ರು

  ಒಬ್ರು ಡೈರೆಕ್ಟರ್ ಬಂದ್ರು

  ''ಜಿಮ್ ನಲ್ಲಿ ಟ್ರೈನರ್ ಆಗಿದ್ದಾಗ ನಿರ್ದೇಶಕರೊಬ್ಬರು ಬಂದು ನೀನು ಇದು ಮಾಡಬಹುದು ಅಲ್ವಾ ಅಂದ್ರು. ಅದಕ್ಕೆ ನಾನು ''ಹೇ ಆಗಲ್ಲ ಸರ್, ನಾನು ಸಿನಿಮಾನೇ ನೋಡಲ್ಲ, ಮನೇಲಿ ಸುಮ್ಮನೆ ಕೇಬಲ್ ಇದೆ ಟಿವಿ ನೋಡ್ತೀನಿ ಅಷ್ಟೇ. ಇಲ್ಲ ನಾನು ಸಪೋರ್ಟ್ ಮಾಡ್ತೀನಿ ಮಾಡಿ ಅಂದ್ರು. ಸರಿ ನೋಡೋಣ ಅಂತ ಮಾಡಿದ್ವಿ. ಬಟ್, ಅದು ಫ್ಲಾಫ್ ಆಯ್ತು. ಆಮೇಲೆ ಎರಡು ವರ್ಷ ಟೈಂ ಪಾಸ್ ಮಾಡಿದ್ದೇ ಆಯ್ತು. ಅದಾದ ಮೇಲೆ ಎರಡು ಸಿನಿಮಾ ಮಾಡಿದೆ. ಅದು ರಿಲೀಸ್ ಗೆ ರೆಡಿಯಿದೆ. ಈ ಮಧ್ಯೆ ಪದ್ಮಾವತಿ ಮಾಡಿದ್ದು'' ಎಂದು ತಮ್ಮ ಹಿನ್ನೆಲೆ ತಿಳಿಸಿದರು.

  ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು

  English summary
  Kannada serial padmavathi hero Samrat was inspired by challenging star darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X