»   » ಶರಣ್ ಅಭಿನಯದ ನೂತನ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಶರಣ್ ಅಭಿನಯದ ನೂತನ ಚಿತ್ರಕ್ಕೆ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ಹಾಸ್ಯ ನಟ ಶರಣ್ ಈಗ ಫುಲ್ ಬಿಜಿ. ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಒಂದೊಂದು ಭಿನ್ನ. ಅದರಲ್ಲೂ 'ಜೈಲಲಿತಾ' ಚಿತ್ರದ ಲೇಡಿ ಗೆಟಪ್ ಅಂತೂ ಎಲ್ಲರ ಕುತೂಹಲ ಮೂಡಿಸಿದ್ದು, ಅಧ್ಯಕ್ಷ ಚಿತ್ರವೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ತಮ್ಮ ಅಭಿನಯದಿಂದ ಜನಮನಸೂರೆಗೊಂಡಿರುವ ನಟ ಶರಣ್ ನಾಯಕರಾಗಿ ಅಭಿನಯಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗುತ್ತಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. [ಪುನೀತ್ ಹಾಡಿರುವ 'ಅಧ್ಯಕ್ಷ' ಹಾಡಿನ ಪ್ರೊಮೋ]

Actor Sharan

ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹತಾ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಪಿ.ಕುಮಾರ್ (ವಿಷ್ಣುವರ್ಧನ) ನಿರ್ದೇಶಿಸುತ್ತಿದ್ದಾರೆ. ರಾವಣ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್ ಹಾಗೂ ಲವ್ ಇನ್ ಮಂಡ್ಯ ಚಿತ್ರಗಳನ್ನು ಉದಯ್.ಕೆ.ಮೆಹತ ನಿರ್ಮಿಸಿದ್ದಾರೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಪನ್ನೀರ್ ಸೆಲ್ವಂ ಛಾಯಾಗ್ರಹಣ ಹಾಗೂ ಮುರಳಿ, ಹರ್ಷ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಅನಿಲ್ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಶರಣ್, ರವಿಶಂಕರ್, ನೀನಾಸಂ ಅಶ್ವತ್, ತಬಲನಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Comedy actor Sharan's untitled Kannada movie starts from July, 2014. The movie is being produced by Uday K Mehta and directed by P Kumar. 
Please Wait while comments are loading...