For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಕೈಲಿ ಎರಡು ತಮಿಳು ಒಂದು ತೆಲುಗು ಸಿನಿಮಾ, ಎರಡರಲ್ಲಿ ಮೇನ್ ಲೀಡ್

  By ಫಿಲ್ಮಿಬೀಟ್ ಡೆಸ್ಕ್
  |

  ಕನ್ನಡದ ಅತ್ಯಂತ ಬ್ಯುಸಿ ಸ್ಟಾರ್ ನಟ ಯಾರಾದರೂ ಇದ್ದರೆ ಅದು ಶಿವರಾಜ್ ಕುಮಾರ್ ಮಾತ್ರ. ಈ ವಯಸ್ಸಿನಲ್ಲೂ ಅವರ ಕೈಲಿ ಒಮ್ಮೆಗೆ ಕನಿಷ್ಟ ಆರೇಳು ಸಿನಿಮಾಗಳಿಗೂ ಹೆಚ್ಚೇ ಇರುತ್ತವೆ.

  ಶಿವಣ್ಣ ಖಾಲಿ ಕೂತ ಉದಾಹರಣೆಯೇ ಇಲ್ಲವೇನೋ. ಶಿವಣ್ಣನಿಗೆ ವಯಸ್ಸಾದಷ್ಟು ಅವಕಾಶಗಳು ಹೆಚ್ಚಾಗುತ್ತಿವೆ. ಅದರಲ್ಲೂ ನಾಯಕ ನಟನ ಅವಕಾಶಗಳೇ ಶಿವಣ್ಣನನ್ನು ಹುಡುಕಿ-ಹುಡುಕಿ ಬರುತ್ತಿವೆ. ಕನ್ನಡ ಮಾತ್ರವೇ ಅಲ್ಲದೆ ಪರಭಾಷೆಗಳಿಂದಲೂ ಶಿವಣ್ಣನಿಗೆ ಹಲವು ಸಿನಿಮಾ ಆಫರ್‌ಗಳು ಒಂದರ ಮೇಲೊಂದರಂತೆ ಬರುತ್ತಲೇ ಇವೆ.

  ಶಿವಣ್ಣ ಈಗಾಗಲೇ ತಮಿಳಿನ 'ಜೈಲರ್' ಸಿನಿಮಾದಲ್ಲಿ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ಶಿವಣ್ಣನದ್ದು ಅತಿಥಿ ಪಾತ್ರವಷ್ಟೆ. ಆದರೆ ಇದರ ಹೊರತಾಗಿ ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವಣ್ಣ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಶಿವಣ್ಣರ ಮೆಚ್ಚಿನ ನಟರಲ್ಲಿ ಒಬ್ಬರಾಗಿರುವ ನಟ ಧನುಶ್ ಜೊತೆ ಶಿವರಾಜ್ ಕುಮಾರ್ ತಮಿಳಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಧನುಶ್ ಹಾಗೂ ಶಿವರಾಜ್ ಕುಮಾರ್ ಅವರು ಇಬ್ಬರದ್ದೂ ಪ್ರಮುಖ ಪಾತ್ರವಂತೆ. ''ನನಗೆ ಮೊದಲಿನಿಂದಲೂ ಧನುಶ್ ಎಂದರೆ ಇಷ್ಟ. ಈಗ ಇಂಥಹದ್ದೊಂದು ಅವಕಾಶ ದೊರೆತಾಗ ಬಿಡುವ ಮನಸಾಗಲಿಲ್ಲ'' ಎಂದಿದ್ದಾರೆ ಶಿವಣ್ಣ.

  ಇದರ ಜೊತೆಗೆ ಹೊಸದಾಗಿ ತೆಲುಗು ಸಿನಿಮಾ ಒಂದನ್ನು ಸಹ ಶಿವಣ್ಣ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನೇ ನಾಯಕ. ಯುವ ನಟನೊಬ್ಬ ಇವರ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದಾರದರೂ ಶಿವಣ್ಣನದ್ದೇ ಮೇನ್ ಲೀಡ್ ಪಾತ್ರವಂತೆ.

  ''ಏನೋ ಹಲವು ಅವಕಾಶಗಳು ಅರಸಿ ಬರುತ್ತಿವೆ. ಅವುಗಳನ್ನು ಎಕ್ಸ್‌ಪ್ಲೋರ್ ಮಾಡಿಕೊಂಡು ಹೋಗುತ್ತಿರಬೇಕು ಅಷ್ಟೆ. ಅದೇ ಕಾರಣಕ್ಕೆ ಈ ಸಿನಿಮಾಗಳನ್ನು ಒಪ್ಪಿಕೊಂಡೆ'' ಎಂದಿದ್ದಾರೆ ಶಿವಣ್ಣ.

  ಶಿವರಾಜ್ ಕುಮಾರ್ ನಟನೆಯ 'ವೇದ' ಸಿನಿಮಾ ನಾಳೆ (ಡಿಸೆಂಬರ್ 23) ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾವು ಶಿವಣ್ಣನ 125ನೇ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಶಿವಣ್ಣ ಬಹಳ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಹರ್ಷ ನಿರ್ದೇಶನ ಮಾಡಿದ್ದು, ಗಾನವಿ ನಾಯಕಿಯಾಗಿ ನಟಿಸಿದ್ದಾರೆ. ಅರುಣ್ ಸಾಗರ್ ಪುತ್ರಿ ಸಹ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Shiva Rajkumar doing two Tamil movie and one Telugu movies. He is working with Rajinikant in Jailer and as lead in Dhanush's next movie.
  Thursday, December 22, 2022, 9:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X