For Quick Alerts
  ALLOW NOTIFICATIONS  
  For Daily Alerts

  'ಧೈರ್ಯವಾಗಿ ಶೂಟಿಂಗ್ ಶುರು ಮಾಡಿ', ಮತ್ತೆ ಅಖಾಡಕ್ಕಿಳಿದ ಶಿವಣ್ಣ

  |

  ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಇಡೀ ಸಿನಿಮಾರಂಗ ಸ್ತಬ್ದವಾಗಿತ್ತು. ಇದೀಗ, ಸರ್ಕಾರದ ಸೂಚನೆಯಂತೆ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರತಂಡ ಹೈದರಾಬಾದ್‌ನಲ್ಲಿ ಶೂಟಿಂಗ್ ಪ್ರಾರಂಭಿಸಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಕೊರೊನಾದಿಂದ ಕಂಗಲಾಗಿದ್ದ ಇಂಡಸ್ಟ್ರಿಗೆ ಶಿವಣ್ಣ ಧೈರ್ಯ ತುಂಬಿದ್ದಾರೆ. ಸ್ಯಾಂಡಲ್‌ವುಡ್ ನಾಯಕತ್ವ ವಹಿಸಿಕೊಂಡಿರುವ ಸೆಂಚುರಿ ಸ್ಟಾರ್, ಇತರರಿಗೆ ಸ್ಪೂರ್ತಿ ನೀಡಿದ್ದಾರೆ. ಮುಂದೆ ಓದಿ....

  ಚಿತ್ರರಂಗದ ಸಮಸ್ಯೆಗಳಿಗೆ ಒಮ್ಮೆಲೆ ಪರಿಹಾರ; ಸಿಎಂ ಜತೆ ಡಿಸಿಎಂ ಚರ್ಚೆಯ ಭರವಸೆಚಿತ್ರರಂಗದ ಸಮಸ್ಯೆಗಳಿಗೆ ಒಮ್ಮೆಲೆ ಪರಿಹಾರ; ಸಿಎಂ ಜತೆ ಡಿಸಿಎಂ ಚರ್ಚೆಯ ಭರವಸೆ

  ಭಜರಂಗಿ 2 ಚಿತ್ರೀಕರಣ ಆರಂಭ

  ಭಜರಂಗಿ 2 ಚಿತ್ರೀಕರಣ ಆರಂಭ

  ಹರ್ಷ ನಿರ್ದೇಶನದಲ್ಲಿ ತಯಾರಾಗುತ್ತಿರುವ ಭಜರಂಗಿ-2 ಸಿನಿಮಾ ಕೊರೊನಾ ಬಿಕ್ಕಟ್ಟಿಗೂ ಮುಂಚೆ ಮೊದಲ ಹಂತದ ಚಿತ್ರೀಕರಣ ಮುಗಿಸಿತ್ತು. ಈಗ ಎರಡನೇ ಹಂತದ ಶೂಟಿಂಗ್ ಆರಂಭಿಸಿದ್ದಾರೆ. ಗಣೇಶ ಹಬ್ಬದ ವಿಶೇಷ ದಿನದಿಂದು ಹ್ಯಾಟ್ರಿಕ್ ಹೀರೋ ಶೂಟಿಂಗ್ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಜರಂಗಿ ಸೆಟ್‌ನಿಂದ ವಿಡಿಯೋ ಮೂಲಕ ಇಂಡಸ್ಟ್ರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

  ಅಗತ್ಯ ಮುಂಜಾಗ್ರತೆ ಕ್ರಮ ವಹಿಸಲಾಗಿದೆ

  ಅಗತ್ಯ ಮುಂಜಾಗ್ರತೆ ಕ್ರಮ ವಹಿಸಲಾಗಿದೆ

  'ಭಜರಂಗಿ 2 ಚಿತ್ರೀಕರಣದ ಸೆಟ್‌ನಲ್ಲಿ ಕೊರೊನಾ ವೈರಸ್ ಕುರಿತಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪ್ರತಿ ಎರಡು ಗಂಟೆಗೊಮ್ಮೆ ದೇಹದ ತಾಪಮಾನ ಪರೀಕ್ಷಿಸುವುದು...ಹೀಗೆ ಎಲ್ಲ ತಯಾರಿ ಮಾಡಿಕೊಂಡು ಶೂಟಿಂಗ್ ಮಾಡಲಾಗುತ್ತಿದೆ' ಎಂದು ಸ್ವತಃ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

  ಲಾಕ್‌ಡೌನ್‌ ಬಳಿಕ ಮಲೆನಾಡಿನಲ್ಲಿ ಶೂಟಿಂಗ್ ಆರಂಭಿಸಿದ 'ಸಲಗ'ಲಾಕ್‌ಡೌನ್‌ ಬಳಿಕ ಮಲೆನಾಡಿನಲ್ಲಿ ಶೂಟಿಂಗ್ ಆರಂಭಿಸಿದ 'ಸಲಗ'

  ಎಲ್ಲರೂ ಧೈರ್ಯವಾಗಿ ಶೂಟಿಂಗ್ ಮಾಡಿ

  ಎಲ್ಲರೂ ಧೈರ್ಯವಾಗಿ ಶೂಟಿಂಗ್ ಮಾಡಿ

  'ಭಜರಂಗಿ 2 ಸೆಟ್‌ನಲ್ಲಿ ಜಯಣ್ಣ ಪ್ರೊಡಕ್ಷನ್ ಎಲ್ಲ ರೀತಿಯ ಅಕ್ರಮಗಳನ್ನು ತೆಗೆದುಕೊಂಡಿದೆ. ಅದೇ ರೀತಿ ಎಲ್ಲರೂ ಧೈರ್ಯವಾಗಿ ಶೂಟಿಂಗ್ ಶುರು ಮಾಡಿ, ಆದರೆ, ನಿರ್ಲಕ್ಷ್ಯ ಬೇಡ. ಸುರಕ್ಷತೆ ಕ್ರಮಗಳ ಬಗ್ಗೆ ಹೆಚ್ಚು ಗಮನ ಕೊಡಿ. ಪ್ರತಿಯೊಬ್ಬರ ಬಗ್ಗೆಯೂ ಕೇರ್ ತೆಗೆದುಕೊಂಡು ಶೂಟಿಂಗ್ ಶುರು ಮಾಡಬಹುದು' ಎಂದು ಕರೆ ನೀಡಿದ್ದಾರೆ.

  'ಸಲಗ' ಚಿತ್ರೀಕರಣ ಆರಂಭ

  'ಸಲಗ' ಚಿತ್ರೀಕರಣ ಆರಂಭ

  ಇದಕ್ಕೂ ಮುಂಚೆ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಿದೆ. ಚಿಕ್ಕಮಗಳೂರು, ಮಡಿಕೇರಿ ಹಾಗೂ ಕರಾವಳಿ ಭಾಗದಲ್ಲಿ ಶೂಟಿಂಗ್ ಮಾಡಲಾಗಿತ್ತು. ಸಲಗ ಚಿತ್ರತಂಡವೂ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಿದ್ದು ಗಮನಾರ್ಹ.

  English summary
  Kannada actor Shivarajkumar Bhajarangi 2 movie shoot resumes on ganesh chaturthi festival. the movie directed by Harsha. he shared Video from Bhajarangi 2 set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X