For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ-ಪಿ.ವಾಸು ಜೋಡಿಯ 'ಆನಂದ್' ಚಿತ್ರಕ್ಕೆ ಮುಹೂರ್ತ ನಿಗದಿ ಆಯ್ತು ಕಣ್ರೀ

  |

  ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ 'ಶಿವಲಿಂಗ' ಸೂಪರ್ ಹಿಟ್ ಆದ್ಮೇಲೆ ನಿರ್ದೇಶಕ ಪಿ.ವಾಸು ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇವರಿಬ್ಬರ ಕಾಂಬಿನೇಶನ್ ಇರುವ ಚಿತ್ರಕ್ಕೆ 'ಆನಂದ್' ಎಂಬ ಟೈಟಲ್ ಕೂಡ ಇಡಲಾಗಿದೆ.

  ಹೇಳಿ ಕೇಳಿ 'ಆನಂದ್' ಶಿವಣ್ಣ ಅಭಿನಯದ ಮೊಟ್ಟ ಮೊದಲ ಸಿನಿಮಾ. ಅದೇ ಚಿತ್ರದ ಶೀರ್ಷಿಕೆಯನ್ನು ಮತ್ತೊಮ್ಮೆ ಬಳಸಿಕೊಳ್ಳುತ್ತಿರುವುದರಿಂದ ಚಿತ್ರದ ಬಗ್ಗೆ ಸಹಜವಾಗಿ ನಿರೀಕ್ಷೆ ಜಾಸ್ತಿ ಆಗಿದೆ.

  'ಆನಂದ್' ಚಿತ್ರವನ್ನ 'ದ್ವಾರಕೀಶ್ ಚಿತ್ರ' ನಿರ್ಮಾಣ ಮಾಡಲಿದ್ದು, ಸಿನಿಮಾದ ಮುಹೂರ್ತ ದಿನಾಂಕ ನಿಗದಿ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ 'ಆನಂದ್' ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗ್ಬಿಟ್ಟಿದೆ. ಕಂಪ್ಲೀಟ್ ಡೀಟೇಲ್ಸ್ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

  'ಆನಂದ್' ಮುಹೂರ್ತ ಯಾವಾಗ.?

  'ಆನಂದ್' ಮುಹೂರ್ತ ಯಾವಾಗ.?

  ಮುಂದಿನ ತಿಂಗಳು ಅಂದ್ರೆ ನವೆಂಬರ್ 9 ರಂದು 'ಆನಂದ್' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಮುಹೂರ್ತ ಮುಗಿದ ಮೇಲೆ ಎರಡು ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಡಿಸೆಂಬರ್ 10 ರಿಂದ 'ಆನಂದ್' ಚಿತ್ರೀಕರಣದ ಮೊದಲ ಶೆಡ್ಯೂಲ್ ಪ್ರಾರಂಭವಾಗಲಿದೆ.

  ಚಿತ್ರಗಳು: ಅದ್ದೂರಿಯಾಗಿ ನೆರವೇರಿದ 'ಶಿವಲಿಂಗ' ಶತಕ ಸಂಭ್ರಮಾಚರಣೆ

  'ಆನಂದ್' ಬಿಡುಗಡೆ ಯಾವಾಗ.?

  'ಆನಂದ್' ಬಿಡುಗಡೆ ಯಾವಾಗ.?

  ಮುಂದಿನ ವರ್ಷದ ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬದ ದಿನ 'ಆನಂದ್' ನಿಮ್ಮೆಲ್ಲರ ಮುಂದೆ ಬರಲಿದ್ದಾನೆ. ಸಿನಿಮಾ ಸೆಟ್ಟೇರುವ ಮುನ್ನವೇ ರಿಲೀಸ್ ಡೇಟ್ ಅನೌನ್ಸ್ ಮಾಡುವ ಪದ್ಧತಿ ಸ್ಯಾಂಡಲ್ ವುಡ್ ನಲ್ಲಿ ಇಲ್ಲ. ಆದರೂ ಆಗಸ್ಟ್ 9ಕ್ಕೆ ಚಿತ್ರತಂಡ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದೆ.

  ವಿಭಿನ್ನವಾಗಿ ಮೂಡಿ ಬರಲಿದೆ ಶಿವಣ್ಣನ 'ಶಿವಲಿಂಗ ಭಾಗ 2'

  'ಆನಂದ್'ಗೆ ಜೋಡಿ ಯಾರು.?

  'ಆನಂದ್'ಗೆ ಜೋಡಿ ಯಾರು.?

  ಅಂದ್ಹಾಗೆ, ಈ ಬಾರಿ 'ಆನಂದ್'ಗೆ ಜೊತೆಯಾಗಲಿರುವವರು ಡಿಂಪಲ್ ಕ್ವೀನ್ ರಚಿತಾ ರಾಮ್. ಇಲ್ಲಿಯವರೆಗೂ ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಧ್ರುವ ಸರ್ಜಾ, ನೀನಾಸಂ ಸತೀಶ್ ಜೊತೆಗೆ ತೆರೆ ಹಂಚಿಕೊಂಡಿದ್ದ ರಚಿತಾ ರಾಮ್ ಇದೀಗ ಶಿವಣ್ಣ ಜೊತೆಗೆ ಡ್ಯುಯೆಟ್ ಹಾಡಲಿದ್ದಾರೆ.

  ಶಿವಣ್ಣ 'ಶಿವಲಿಂಗ' ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣು!

  ಉಳಿದ ತಾರಾಬಳಗ

  ಉಳಿದ ತಾರಾಬಳಗ

  'ಆನಂದ್' ಚಿತ್ರದ ಉಳಿದ ತಾರಾಬಳಗ ಇನ್ನೂ ಫೈನಲ್ ಆಗಿಲ್ಲ. ಹಾಗೇ, ಎಲ್ಲೆಲ್ಲಿ ಶೂಟಿಂಗ್ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಚಿತ್ರದ ಬಗ್ಗೆ ಹಚ್ಚಿನ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಿರಿ.

  English summary
  Kannada Actor Shiva Rajkumar starrer P Vasu directorial 'Anand' muhurath and release date fixed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X