»   » ದೊಡ್ಡಪ್ಪ ಶಿವಣ್ಣ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ವಿನಯ್ ರಾಜ್ ಕುಮಾರ್

ದೊಡ್ಡಪ್ಪ ಶಿವಣ್ಣ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ವಿನಯ್ ರಾಜ್ ಕುಮಾರ್

Posted By:
Subscribe to Filmibeat Kannada
ದೊಡ್ಡಪ್ಪ ಶಿವಣ್ಣ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ವಿನಯ್ ರಾಜ್ ಕುಮಾರ್ | Filmibeat Kannada

ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ವಿನಯ್ ರಾಜ್ ಕುಮಾರ್ ಮಿನುಗಲು ಆರಂಭಿಸಿ ಮೂರು ವರ್ಷಗಳು ಉರುಳಿವೆ. 'ಸಿದ್ಧಾರ್ಥ' ಹಾಗೂ 'ರನ್ ಆಂಟನಿ' ಚಿತ್ರಗಳಲ್ಲಿ ನಟಿಸಿರುವ ವಿನಯ್ ರಾಜ್ ಕುಮಾರ್ ಇದೀಗ 'ಅನಂತು ವರ್ಸಸ್ ನುಸ್ರತ್' ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಈ ನಡುವೆ 'ಅಪ್ಪ ಅಮ್ಮ ಪ್ರೀತಿ' ಚಿತ್ರಕ್ಕೂ ವಿನಯ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ನೀಡಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ. ಕೈಯಲ್ಲಿ ಎರಡ್ಮೂರು ಸಿನಿಮಾಗಳನ್ನು ಇಟ್ಟುಕೊಂಡಿರುವ ವಿನಯ್ ರಾಜ್ ಕುಮಾರ್ ಇದೀಗ ನಿರ್ಮಾಪಕ ಎನ್.ಎಸ್.ರಾಜ್ ಕುಮಾರ್ ಗೆ ಕಾಲ್ ಶೀಟ್ ನೀಡಿದ್ದಾರೆ.

ಎನ್.ಎಸ್.ರಾಜ್ ಕುಮಾರ್ ನಿರ್ಮಾಣ ಮಾಡುವ ಪಕ್ಕಾ ಆಕ್ಷನ್ ಎಂಟರ್ ಟೇನರ್ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅಭಿನಯಿಸಲಿದ್ದಾರೆ. ವಿಶೇಷ ಅಂದ್ರೆ, ಇದೇ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ತೆರೆಹಂಚಿಕೊಳ್ಳಲಿದ್ದಾರೆ.

Shiva Rajkumar to share screen space with Vinay Rajkumar

ಡಾ.ರಾಜ್ ಮೊಮ್ಮಗನಿಗಾಗಿ ಬೆಂಗಳೂರಿಗೆ ಬಂದ ಮಲಯಾಳಿ ಚೆಲುವೆ ಈಕೆ!

ದೊಡ್ಡಪ್ಪನ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದಕ್ಕೆ ವಿನಯ್ ರಾಜ್ ಕುಮಾರ್ ಉತ್ಸುಕರಾಗಿದ್ದಾರೆ. ಆಗಸ್ಟ್ ನಲ್ಲಿ ಚಿತ್ರದ ಮುಹೂರ್ತ ನೆರವೇರಲಿದ್ದು, 'ಅನಂತು ವರ್ಸಸ್ ನುಸ್ರತ್', 'ಅಪ್ಪ ಅಮ್ಮ ಪ್ರೀತಿ' ಚಿತ್ರಗಳ ಶೂಟಿಂಗ್ ಬಳಿಕ ಈ ಚಿತ್ರಕ್ಕೆ ವಿನಯ್ ರಾಜ್ ಕುಮಾರ್ ತಯಾರಿ ನಡೆಸಲಿದ್ದಾರೆ.

ಇನ್ನೂ ಶಿವಣ್ಣ ಕೈಯಲ್ಲಿ 'ಕವಚ', 'ಎಸ್.ಆರ್.ಕೆ' ಚಿತ್ರಗಳಿವೆ. ಇವೆಲ್ಲದರ ಚಿತ್ರೀಕರಣ ಮುಗಿದ ಬಳಿಕ ಈ ಚಿತ್ರಕ್ಕೆ ಶಿವಣ್ಣ ಕಾಲ್ ಶೀಟ್ ನೀಡಲಿದ್ದಾರೆ.

English summary
Kannada Actor Shiva Rajkumar to share screen space with Vinay Rajkumar in a movie produced by NS Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X