For Quick Alerts
  ALLOW NOTIFICATIONS  
  For Daily Alerts

  ಸೃಜನ್ ಲೋಕೇಶ್‌ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನ ಚಿತ್ರದಲ್ಲಿ ಶಿವಣ್ಣ ಹಾಗೂ ಕಿಶೋರ್ ನಟನೆ

  |

  ಯುವ ನಿರ್ದೇಶಕರಿಗೆ ಅವರ ಸಕ್ಸಸ್ ರೇಟ್ ಅನ್ನು ಗಣನೆಗೆ ತೆಗೆದುಕೊಳ್ಳದೇ ಕಾಲ್ ಶೀಟ್ ನೀಡುವ ಕನ್ನಡದ ಎಕೈಕ ನಟನೆಂದರೆ ಅದು ಶಿವ ರಾಜ್‌ಕುಮಾರ್. ಹೌದು, ಯುವ ಪ್ರತಿಭೆಗಳು ಬೆಳೆಯಬೇಕು ಎಂಬ ಕಾರಣದಿಂದ ಶಿವಣ್ಣ ಹಲವಾರು ನವ ನಿರ್ದೇಶಕರ ಜತೆ ಚಿತ್ರ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ.

  ಸದ್ಯ ಶಿವ ರಾಜ್‌ಕುಮಾರ್ ಹಾಗೂ ನಿರ್ದೇಶಕ ಎ ಹರ್ಷ ಕಾಂಬಿನೇಶನ್‌ನ ನಾಲ್ಕನೇ ಚಿತ್ರ ವೇದ ತೆರೆಗೆ ಬಂದು ಅಬ್ಬರಿಸಿ ಗೆಲುವು ಸಾಧಿಸಿದ್ದು, ಕಳೆದ ಕೆಲ ಚಿತ್ರಗಳ ಸೋಲಿನಿಂದ ಶಿವ ರಾಜ್‌ಕುಮಾರ್ ಹೊರಬಂದಿದ್ದಾರೆ. ಅಭಿಮಾನಿಗಳೂ ಸಹ ನಿಮ್ಮ ಇಮೇಜ್‌ಗೆ ತಕ್ಕಂತ ಸಿನಿಮಾ ಮಾಡಿ, ವೇದ ರೀತಿಯ ಒಳ್ಳೆ ಸಂದೇಶವಿರುವ ಕಥೆಗಳನ್ನು ಆರಿಸಿಕೊಳ್ಳಿ, ಹೊಸತನವನ್ನು ತನ್ನಿ ಎಂದು ಶಿವ ರಾಜ್‌ಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಯುಗದಲ್ಲಿ ಪೈಪೋಟಿ ಹೆಚ್ಚಾಗಿದ್ದು, ಈ ಪ್ರಯತ್ನವನ್ನು ಶಿವ ರಾಜ್‌ಕುಮಾರ್ ಮಾತ್ರವಲ್ಲದೇ ಪ್ರತಿಯೊಬ್ಬರೂ ಸಹ ಮಾಡಬೇಕಿದೆ.

  ಇನ್ನು ಶಿವ ರಾಜ್‌ಕುಮಾರ್ ಸಹ ಇದೇ ಮಾದರಿಯಲ್ಲಿ ಸಾಗುತ್ತಿದ್ದಾರೆ. ವೇದ ಬಳಿಕ ಶಿವ ರಾಜ್‌ಕುಮಾರ್ ನಟಿಸುತ್ತಿರುವ ಹಾಗೂ ಆರಿಸಿಕೊಳ್ಳುತ್ತಿರುವ ಚಿತ್ರಗಳೆಲ್ಲಾ ವಿಶೇಷವೆನಿಸಿವೆ. ಸದ್ಯ ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಹಾಗೂ ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರಗಳಲ್ಲಿ ನಟಿಸುತ್ತಿರುವ ಶಿವ ರಾಜ್‌ಕುಮಾರ್ ಮತ್ತೊಂದು ಕಥೆ ಕೇಳಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಈ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದ್ದು, ಬಹಳ ವರ್ಷಗಳ ಬಳಿಕ ಈ ಚಿತ್ರದ ಮೂಲಕ ಶಿವ ರಾಜ್‌ಕುಮಾರ್ ಹಾಗೂ ಕಿಶೋರ್ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ.

  ತೇಜಸ್ವಿ ಕೆ ನಾಗ್ ನಿರ್ದೇಶನ

  ತೇಜಸ್ವಿ ಕೆ ನಾಗ್ ನಿರ್ದೇಶನ

  ಶಿವ ರಾಜ್‌ಕುಮಾರ್ ಸದ್ಯ ಕಥೆ ಕೇಳಿ ಗ್ರೀನ್ ಸಿಗ್ನಲ್ ನೀಡಿರುವುದು ತೇಜಸ್ವಿ ಕೆ ನಾಗ್ ಎಂಬ ನಿರ್ದೇಶಕರಿಗೆ. ಇವರು ಈ ಹಿಂದೆ 2019ರಲ್ಲಿ ತೆರೆಕಂಡಿದ್ದ 'ಎಲ್ಲಿದ್ದೆ ಇಲ್ಲಿ ತನಕ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸೃಜನ್ ಲೋಕೇಶ್ ಹಾಗೂ ಹರಿಪ್ರಿಯಾ ನಾಯಕ - ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ತೇಜಸ್ವಿ ಕೆ ನಾಗ್ ಸೃಜನ್ ಲೋಕೇಶ್ ನಿರೂಪಕನಾಗಿದ್ದ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೂ ಸಹ ನಿರ್ದೇಶನ ಮಾಡಿದ್ದರು. ಸದ್ಯ ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

  ಚಿತ್ರದಲ್ಲಿ ಕಿಶೋರ್ ನಟನೆ

  ಚಿತ್ರದಲ್ಲಿ ಕಿಶೋರ್ ನಟನೆ

  ಇನ್ನು ಇತ್ತೀಚೆಗಷ್ಟೆ ಕಾಂತಾರ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಮುರಳಿ ಪಾತ್ರ ಮಾಡಿ ಮಿಂಚಿದ್ದ ನಟ ಕಿಶೋರ್ ಚಂದನವಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಇದೀಗ ಮತ್ತಷ್ಟು ಕನ್ನಡ ಚಿತ್ರಗಳಿಗೆ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಶಿವ ರಾಜ್‌ಕುಮಾರ್ ಹಾಗೂ ತೇಜಸ್ವಿ ಕೆ ನಾಗ್ ನಿರ್ದೇಶನದ ಚಿತ್ರದಲ್ಲೂ ಸಹ ಕಿಶೋರ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಮೂಲಕ ರಾಕ್ಷಸ ಚಿತ್ರದ ಬಳಿಕ ಮತ್ತೊಮ್ಮೆ ಶಿವ ರಾಜ್‌ಕುಮಾರ್ ಹಾಗೂ ಕಿಶೋರ್ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

  ಶಿವ ರಾಜ್‌ಕುಮಾರ್ ಮುಂದಿನ ಚಿತ್ರಗಳು

  ಶಿವ ರಾಜ್‌ಕುಮಾರ್ ಮುಂದಿನ ಚಿತ್ರಗಳು

  ವೇದ ಬಳಿಕ ಶಿವ ರಾಜ್‌ಕುಮಾರ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್‌ನ 'ಕರಟಕ ದಮನಕ' ಎಂಬ ಚಿತ್ರ ಸಿದ್ಧವಾಗ್ತಿದ್ದು, ಇದರ ಜತೆಗೆ ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ಖ್ಯಾತಿಯ ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರದಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದೆ. ನಂತರ ಶಿವ ರಾಜ್‌ಕುಮಾರ್ ಅರ್ಜುನ್ ಜನ್ಯ ನಿರ್ದೇಶನದ 45 ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ. ಬಳಿಕ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ಜತೆ 'ಸಾಗಾ ಆಫ್ ಅಶ್ವತ್ಥಾಮ' ಎಂಬ ಚಿತ್ರವನ್ನು ಶಿವಣ್ಣ ಮಾಡಲಿದ್ದಾರೆ. ಈ ನಾಲ್ಕು ಚಿತ್ರಗಳ ಬಳಿಕ ತೇಜಸ್ವಿ ಕೆ ನಾಗ್ ಚಿತ್ರವನ್ನು ಶಿವಣ್ಣ ಕೈಗೆತ್ತಿಕೊಳ್ಳಲಿದ್ದಾರೆ.

  English summary
  Shiva Rajkumar to share screen with Kishore under Thejaswi K Nag direction. Take a look
  Monday, January 9, 2023, 14:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X