Don't Miss!
- Sports
ವಿಶ್ವದ ಮೊದಲ ಆನ್ಲೈನ್ ಕ್ರಿಕೆಟ್ ಕೋಚ್ ನೇಮಕಕ್ಕೆ ಮುಂದಾದ ಪಾಕಿಸ್ತಾನ ತಂಡ
- News
4 ಕಾರಿಡಾರ್, 6 ದಿಕ್ಕು, 57 ನಿಲ್ದಾಣ: ಮುಂಬರುವ ಬೆಂಗಳೂರು ಉಪನಗರ ರೈಲು ಯೋಜನೆ ಬಗ್ಗೆ ತಿಳಿಯಿರಿ
- Lifestyle
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಗಸ್ಟ್ 24ಕ್ಕೆ ಹ್ಯಾಟ್ರಿಕ್ ಹೀರೋ 101ನೇ ಚಿತ್ರ ತೆರೆಗೆ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 101ನೇ ಚಿತ್ರ ಆಗಸ್ಟ್ 24ಕ್ಕೆ ತೆರೆ ಕಾಣಲು ಸಿದ್ಧವಾಗಿದೆ. ಕಂಪನಿ ಫಿಲಂಸ್ ಬ್ಯಾನರ್ ನಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕಾಂತರಾಜ್ ನಿರ್ಮಾಣದ 'ಶಿವ' ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸುದ್ದಿಯನ್ನು ಸ್ವತಃ ಚಿತ್ರದ ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಖಚಿತಪಡಿಸಿದ್ದಾರೆ.
ಭಾರಿ ಬಜೆಟ್ ಚಿತ್ರವಾದ 'ಶಿವ' ಕನ್ನಡ ಚಿತ್ರೋದ್ಯಮದಲ್ಲಿ ಅತೀವ ಕುತೂಹಲ ಕೆರಳಿಸಿದೆ. ಚಿತ್ರದ ಪೋಸ್ಟರ್ ಗಳು ಹಾಗೂ ಟ್ರೇಲರ್ ಗಳು ವಿಭಿನ್ನವಾಗಿ ಮೂದಿಬಂದಿದ್ದು ಚಿತ್ರದ ಬಗ್ಗೆ ಮತ್ತಷ್ಟು ಆಸಕ್ತಿ ಕೆರಳಿಸಿವೆ. ಚಿತ್ರಕ್ಕೆ ಇನ್ನಷ್ಟು ಗ್ರಾಫಿಕ್ಸ್ ಸೇರಿಸಲಾಗುತ್ತಿದೆ. ಹಾಗಾಗಿ ಚಿತ್ರ ತೆರೆಗೆ ಬರಲು ವಿಳಂಬವಾಗುತ್ತಿದೆ. ಫಸ್ಟ್ ಕಾಪಿ ಕೈಗೆ ಬರಲು ಆಗಸ್ಟ್ 1ರ ತನಕ ಕಾಯಬೇಕು ಎಂದಿದ್ದಾರೆ ಶ್ರೀಕಾಂತ್.
ಸದ್ಯಕ್ಕೆ ಚೆನ್ನೈನ ಲ್ಯಾಬ್ ಒಂದರಲ್ಲಿ 'ಶಿವ' ಚಿತ್ರಕ್ಕೆ ಗ್ರಾಫಿಕ್ಸ್ ಅಳವಡಿಕೆ ನಡೆಯುತ್ತಿದೆ. ಶಿವಣ್ಣನ ಅಭಿನಯದ ಜೊತೆಗೆ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಗ್ರಾಫಿಕ್ಸ್ ಇರುತ್ತದೆ. ಚಿತ್ರದಲ್ಲಿ ಒಟ್ಟು 20 ನಿಮಿಷಗಳಷ್ಟು ಕಾಲಾವಧಿ ಗ್ರಾಫಿಕ್ಸ್ ಗೆ ಮೀಸಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್. ಆಕ್ಷನ್ ಸೀನ್ಸ್ ಅಂತೂ ಮೈನವಿರೇಳಿಸುವಂತಿವೆ ಎಂದಿದ್ದಾರೆ.
ಶಿವರಾಜ್ ಕುಮಾರ್ ಅವರ ವೃತ್ತಿಜೀವನದಲ್ಲಿ 'ಶಿವ' ಚಿತ್ರ ಮತ್ತೊಂದು ಮೈಲಿಗಲ್ಲಾಗಿ ನಿಲ್ಲಲಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುವಂತೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದಿದ್ದಾರೆ ಓಂ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಜುಲೈ 27ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಬೇಕಿತ್ತು.
'ಶಿವ' ಚಿತ್ರದ ಎರಡು ಟ್ರೇಲರ್ ಗಳು ಈಗಾಗಲೆ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಮೂಡಿಸಿವೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವೂ ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದಿತ್ತು.
'ಜೋಗಯ್ಯ' ಚಿತ್ರದ ಬಳಿಕ ಶಿವಣ್ಣ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಿದ್ದಾರೆ. 'ಶಿವ' ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾದಿದ್ದವರಿಗೆ ಈ ಬಾರಿ ಸಖತ್ ನಿರಾಸೆಯಾಗಿದೆ. (ಒನ್ ಇಂಡಿಯಾ ಕನ್ನಡ)